More

    ಗ್ರಾಮ ಸಹಾಯಕರ ಪ್ರತಿಭಟನೆ

    ವಿಜಯಪುರ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಗ್ರಾಮ ಸಹಾಯಕರ ಸಂಘದ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಾಮ್ ಮೂಲಕ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಲಾಯಿತು.
    ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಣಮಂತ ಉಪ್ಪಾರ ಮಾತನಾಡಿ, ಕಂದಾಯ ಇಲಾಖೆಯಲ್ಲಿ 43 ವರ್ಷಗಳಿಂದ ಯಾವುದೇ ಸೇವಾ ಭದ್ರತೆ ಇಲ್ಲದೆ ಸೇವೆ ಸಲ್ಲಿಸುತ್ತಿದ್ದೇವೆ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ನಿರ್ವಹಣೆ ಮಾಡುವುದು ತುಂಬಾ ಕಷ್ಟಕರವಾಗಿದೆ. ಗ್ರಾಮ ಸಹಾಯಕ ಸೇವೆಯನ್ನು ಕಾಯಂಗೊಳಿಸಿ ಕನಿಷ್ಠ ವೇತನ ನಿಗದಿಪಡಿಸಲು ಆದೇಶ ಮಾಡಬೇಕು. ಗ್ರಾಮ ಸಹಾಯಕರಿಗೆ ವೈದ್ಯಕೀಯ ಸೌಲಭ್ಯ ನೀಡಬೇಕು. ಕೋವಿಡ್-19 ವಿಮಾ ಸೌಲಭ್ಯಗಳನ್ನು ಇತರ ಇಲಾಖೆಗೆ ನೀಡಿರುವಂತೆ ಗ್ರಾಮ ಸಹಾಯಕರಿಗೆ ನೀಡಬೇಕು. ಗ್ರಾಮ,ಪಟ್ಟಣದಲ್ಲಿ ಅಲ್ಲದೆ ಚೆಕ್‌ಪೋಸ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರ ಮೇಲೆ ಹಲ್ಲೆ ನಡೆಸಿದ್ದವರ ಮೇಲೆ ಶಿಕ್ಷೆ ವಿಧಿಸಿ ಗ್ರಾಮ ಸಹಾಯಕರಿಗೆ ಸೂಕ್ತ ಭದ್ರತೆ ನೀಡಬೇಕು. ಪ್ರತಿ ತಿಂಗಳ 5ನೇ ತಾರೀಖು ವೇತನ ಆಗಬೇಕು ಎಂದು ಒತ್ತಾಯಿಸಿದರು.
    ಜಿಲ್ಲಾಧ್ಯಕ್ಷ ಎನ್.ಸಿ. ಇನಾಮದಾರ, ಅಲ್ಲಾಭಕ್ಷ ಕೊರಬು, ರಹೀಂ ಮುಶ್ರ್ೀ, ಬಾಳು ಜಮಖಂಡಿ, ಶಿವಾನಂದ ವಾಲಿಕಾರ, ಚಂದು ಕಾಂಬಳೆ, ಮುತ್ತಣ್ಣ ತಳವಾರ, ಶಟ್ಟೆಪ್ಪ ತಳವಾರ, ಹಣಮಂತ ಪೂಜಾರಿ, ರಮೇಶ ಹಳಬರ, ಚಾಂದ ವಾಲಿಕಾರ, ಮಲ್ಲು ದಳವಾಯಿ, ಬಸಲಿಂಗ ವಾಲಿಕಾರ, ಮಲ್ಲಿಕಾರ್ಜುನ ನಾಯ್ಕಡಿ ಮುಂತಾದವರು ಭಾಗವಹಿಸಿದ್ದರು.

    ಗ್ರಾಮ ಸಹಾಯಕರ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts