More

    ವಿಕ್ರಮ್ ರಾಥೋಡ್ ಟೀಮ್ ಇಂಡಿಯಾದ ಹೊಸ ಮುಖ್ಯ ಕೋಚ್?

    ನವದೆಹಲಿ: ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯೊಂದಿಗೆ ಟೀಮ್ ಇಂಡಿಯಾದ ಹಾಲಿ ಕೋಚ್ ರವಿಶಾಸ್ತ್ರಿ ಅವರ ಅವಧಿ ಮುಕ್ತಾಯಗೊಳ್ಳಲಿದೆ. 59 ವರ್ಷದ ಅವರು ಕೋಚ್ ಆಗಿ ಮುಂದುವರಿಯುವ ಸಾಧ್ಯತೆ ಇಲ್ಲ. ಹೀಗಾಗಿ ಟೀಮ್ ಇಂಡಿಯಾದ ಮುಂದಿನ ಕೋಚ್ ಯಾರು ಎಂಬ ಬಗ್ಗೆ ಈಗಾಗಲೆ ಚರ್ಚೆಗಳು ಶುರುವಾಗಿದ್ದು, ಹಾಲಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರ ಹೆಸರು ಇದೀಗ ಮುಂಚೂಣಿಗೆ ಬಂದಿದೆ.

    ದಿಗ್ಗಜ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಮುಂದಿನ ಕೋಚ್ ಆಗುವರು ಎಂಬ ಮಾತುಗಳು ಕೇಳಿಬಂದಿದ್ದವು. ಶ್ರೀಲಂಕಾ ಪ್ರವಾಸಕ್ಕೆ ಅವರು ಭಾರತದ 2ನೇ ಸ್ತರದ ತಂಡದೊಂದಿಗೆ ತೆರಳಿದ್ದು ಕೂಡ ಇದರ ಸೂಚನೆಗಳನ್ನು ರವಾನಿಸಿದ್ದವು. ಆದರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ಸ್ಥಾನದ ಮರುಆಯ್ಕೆಗೆ ದ್ರಾವಿಡ್ ಅರ್ಜಿ ಸಲ್ಲಿಸಿರುವುದರಿಂದ ಅವರು, ಸದ್ಯಕ್ಕೆ ಟೀಮ್ ಇಂಡಿಯಾ ಕೋಚ್ ಆಗುವ ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ. ಹೀಗಾಗಿ ವಿಕ್ರಮ್ ರಾಥೋಡ್ ಹೆಸರು ರೇಸ್‌ಗೆ ಬಂದಿದೆ.

    ಕಳೆದ 2 ವರ್ಷಗಳಿಂದ ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿರುವ 52 ವರ್ಷದ ವಿಕ್ರಮ್ ರಾಥೋಡ್ ನಾಯಕ ವಿರಾಟ್ ಕೊಹ್ಲಿ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದ ಯಶಸ್ಸಿನಲ್ಲಿ ಅವರ ಕೊಡುಗೆ ಪ್ರಮುಖವಾಗಿದೆ ಎನ್ನಲಾಗುತ್ತಿದೆ. ರಿಷಭ್ ಪಂತ್ ಮತ್ತು ರೋಹಿತ್ ಶರ್ಮ ಟೆಸ್ಟ್ ಕ್ರಿಕೆಟ್‌ನಲ್ಲಿ ಸುಧಾರಿತ ಬ್ಯಾಟಿಂಗ್ ನಿರ್ವಹಣೆ ತೋರಲು ರಾಥೋಡ್ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.

    1996-97ರಲ್ಲಿ ಭಾರತ ತಂಡದ ಪರ 6 ಟೆಸ್ಟ್, 7 ಏಕದಿನ ಪಂದ್ಯ ಆಡಿದ್ದ ವಿಕ್ರಮ ರಾಥೋಡ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ ಅನುಭವ ಹೊಂದಿರದಿದ್ದರೂ, ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಪಂಜಾಬ್ ಪರ 146 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ 11 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ.

    ಚಿನ್ನದ ಹುಡುಗ ನೀರಜ್ ಚೋಪ್ರಾ ಈಗ ಇಡೀ ಜಗತ್ತಿನ ಕ್ರಶ್ ಎಂದ ಬಾಲಿವುಡ್ ಬೆಡಗಿ!

    ಟೀಮ್ ಇಂಡಿಯಾ ವೇಗಿ ಸಿರಾಜ್‌ಗೆ ಬೋಲ್ಡಾದ ಪಾಕ್ ಟಿವಿ ನಿರೂಪಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts