More

    ರೈತರಿಗೆ ಸೂಕ್ತ ಪರಿಹಾರ ಕೊಡಿಸುವೆ

    ಬಸವಕಲ್ಯಾಣ: ಮಳೆ ಹಾನಿ ಹಿನ್ನೆಲೆಯಲ್ಲಿ ಜಾಜನಮುಗಳಿ ಗ್ರಾಮದ ಜಮೀನುಗಳಿಗೆ ಮಾಜಿ ಎಂಎಲ್‌ಸಿ ವಿಜಯಸಿಂಗ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಮಳೆಯಿಂದ ಹೊಲಗಳಲ್ಲಿ ನಿಂತ ನೀರು ವೀಕ್ಷಿಸಿದ ಅವರು, ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಕುಂದುಕೊರತೆ ಆಲಿಸಿದರು. ಮಳೆಯಿಂದ ಬೆಳೆ ಹಾಳಾಗುತ್ತಿದ್ದು, ಅಧಿಕಾರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ವರದಿ ಸಲ್ಲಿಸಿದರೆ ಪರಿಹಾರ ಕೊಡಿಸಲು ಪ್ರಯತ್ನಿಸುವೆ. ರೈತರಿಗೆ ಅನ್ಯಾಯವಾಗಲು ಬಿಡಲ್ಲ ಎಂದರು.
    ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ವಿಜಯಸಿಂಗ್ ಗಮನಕ್ಕೆ ತಂದರು. ತಾಲೂಕು ಆರೋಗ್ಯಾಧಿಕಾರಿಗೆ ಕರೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದರು.
    ಕಾಂಗ್ರೆಸ್ ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ್, ಮುಖಂಡರಾದ ಓಂಪ್ರಕಾಶ ಪಾಟೀಲ್, ಬಸವರಾಜ ಬಿರಾದಾರ, ನಿತ್ಯಾನಂದ ಜಾಧವ್, ಸಂತೋಷ ಗುತ್ತೇದಾರ್, ಜೈದೀಪ ತೇಲಂಗ, ಬೀರು ಜೇಡ್ಗೆ, ಲಕ್ಷö್ಮಣ ಜಾಧವ್, ರಾಮ ಕೋಲೆ, ರಾಜು ಸೂರ್ಯವಂಶಿ, ದಯಾನಂದ ಸೂರ್ಯವಂಶಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts