More

    ವಿಜೃಂಭಣೆಯ ಶರನ್ನವರಾತ್ರಿ ಮಹೋತ್ಸವ

    ಜಯಪುರ: ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಅ.15 ರಿಂದ 24ರ ವರೆಗೆ ವಿಜೃಂಭಣೆಯಿಂದ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ ಎಂದು ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಉಪಾಧ್ಯಕ್ಷ ಕೆ.ಪಿ.ಗುರುಮೂರ್ತಿ ತಿಳಿಸಿದ್ದಾರೆ.
    ನವರಾತ್ರಿಯ ಒಂಭತ್ತು ದಿನ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಕಲ್ಪೋಕ್ತಪೂಜೆ, ಅರ್ಚನೆ, ಪಾರಾಯಣ, ಸಂಜೆ ಅಷ್ಟಾವಧಾನ ಸೇವೆ ನಡೆಯಲಿದೆ. 15,16ರಂದು ಲಕ್ಷ್ಮೀನಾರಾಯಣ ಹೃದಯ ಹೋಮ, 17, 21, 23 ರಂದು ದುರ್ಗಾಹೋಮ, 18 ರಂದು ಗಣಪತಿಹೋಮ, 19ಕ್ಕೆ ಲಲಿತಾ ಹೋಮ, 20 ರಂದು ಸುಬ್ರಹ್ಮಣ್ಯ ಹೋಮ, 22ರಂದು ಚಂಡಿಕಾ ಹೋಮ ನಡೆಯಲಿದೆ. 23ರ ನವಮಿಯಂದು ವಿಶೇಷ ಆಯುಧ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ. 24 ರಂದು ನಿತ್ಯ ವಿಶೇಷ ಪೂಜೆಗಳೊಂದಿಗೆ ಸಾಮೂಹಿಕ ಸತ್ಯನಾರಾಯಣ ವ್ರತ ಆಯೋಜಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
    ಸಂಜೆ 6 ಗಂಟೆಯಿಂದ ಜಯಪುರದ ರಾಜಬೀದಿಯಲ್ಲಿ ಶ್ರೀದೇವಿಯ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ನಂತರ ರಾತ್ರಿ ದೇವಾಲಯದಲ್ಲಿ ಅಷ್ಟಾವಧಾನ ಸೇವೆ, ಆಶೀರ್ವಚನ, ದೀಪಾರಾಧನೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಗುವುದು ನವರಾತ್ರಿಯ ಹತ್ತು ದಿನವೂ ಭಕ್ತಾದಿಗಳಿಗೆ ಮಧ್ಯಾಹ್ನ ಅನ್ನದಾನ ಸೇವೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
    ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 16 ರಂದು ಜಯಪುರದ ಸುಮುಖ ಸಂಗೀತ ಶಾಲೆ ಮಕ್ಕಳಿಂದ ಸಂಗೀತ ಸಂಜೆ, 17ಕ್ಕೆ ಗೀರ್ವಾಣಿ ಮಹಿಳಾ ಮಂಡಳಿಯಿಂದ ಸಂಗೀತ, ನೃತ್ಯ ವೈಭವ, 18ಕ್ಕೆ ಶ್ರೀ ಶಂಕರಭಾರತೀ ಧಾರ್ಮಿಕ ವೇದಿಕೆಯಿಂದ ಸ್ತೋತ್ರ ಪಠಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts