More

    ವಿಜಯ್​ ಹೊಸ ಚಿತ್ರ ಪ್ರಾರಂಭ; ಹೆಸರೂ ರಿವೀಲ್​ ಆಯ್ತು …

    ಚೆನ್ನೈ: ‘ಮಾಸ್ಟರ್​’ ಮತ್ತು ‘ವಿಕ್ರಮ್​’ ಖ್ಯಾತಿಯ ಲೋಕೇಶ್​ ಕನಕರಾಜ್​ ನಿರ್ದೇಶನದ ಹೊಸ ಚಿತ್ರದಲ್ಲಿ ವಿಜಯ್​ ನಟಿಸುತ್ತಿರುವ ಸುದ್ದಿ ಗೊತ್ತೇ ಇದೆ. ಈಗ ಈ ಚಿತ್ರದ ಮುಹೂರ್ತವಾಗಿರುವುದಷ್ಟೇ ಅಲ್ಲ, ಚಿತ್ರದ ಹೆಸರು ಸಹ ಬಹರಿಂಗಗೊಂಡಿದೆ. ಅಂದಹಾಗೆ, ಈ ಚಿತ್ರದ ಹೆಸರೇನು ಗೊತ್ತಾ? ‘ಲಿಯೋ’.

    ಇದನ್ನೂ ಓದಿ: ಕಲಾತಪಸ್ವಿ ಎಂದೇ ಖ್ಯಾತರಾಗಿದ್ದ ಟಾಲಿವುಡ್​ ಹಿರಿಯ ನಿರ್ದೇಶಕ ಕೆ. ವಿಶ್ವನಾಥ್​ ಇನ್ನಿಲ್ಲ

    ವಿಜಯ್​ ಹೊಸ ಚಿತ್ರ ಪ್ರಾರಂಭ; ಹೆಸರೂ ರಿವೀಲ್​ ಆಯ್ತು …

    ಗುರುವಾರ ರಾತ್ರಿ ‘ಲಿಯೋ’ ಚಿತ್ರದ ಮುಹೂರ್ತ ಚೆನ್ನೈನಲ್ಲಿ ಗ್ರಾಂಡ್​ ಆಗಿ ನಡೆದಿದೆ. ಈ ಮುಹೂರ್ತದಲ್ಲಿ ತ್ರಿಷಾ ಕೃಷ್ಣನ್‌, ಅರ್ಜುನ್‌ ಸರ್ಜಾ, ಜಗದೀಶ್‌, ಪ್ರಿಯಾ ಆನಂದ್‌, ಮನ್ಸೂರ್‌ ಅಲಿ ಖಾನ್‌ ಸೇರಿದಂತೆ ಚಿತ್ರದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಭಾಗವಹಿಸಿದ್ದಾರೆ.

    ಸೆವೆನ್​ ಸ್ಕ್ರೀನ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಚಿತ್ರೀಕರಣ ಈಗಷ್ಟೇ ಪ್ರಾರಂಭವಾಗಿದ್ದರೂ, ಈಗಾಗಲೇ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇದೇ ವರ್ಷದ ಅಕ್ಟೋಬರ್​ 19ರಂದು ಐದು ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ. ಅನಿರುದ್ಧ್​ ರವಿಚಂದ್ರನ್‌ ಸಂಗೀತ ಮತ್ತು ಮನೋಜ್‌ ಪರಮಹಂಸ ಛಾಯಾಗ್ರಹಣ ಮಾಡುತ್ತಿದ್ದಾರೆ.

    ಇದನ್ನೂ ಓದಿ: ನಯನತಾರಾಗೂ ಕಾಸ್ಟಿಂಗ್​ ಕೌಚ್​ ಅನುಭವವಾಗಿತ್ತಂತೆ!

    ಮುಂಚೆ ಈ ಚಿತ್ರದಲ್ಲಿ ಕನ್ನಡದ ರಕ್ಷಿತ್​ ಶೆಟ್ಟಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇತ್ತು. ಆದರೆ, ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ರಕ್ಷಿತ್​ ಶೆಟ್ಟಿ ಅಭಿನಯಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್​ ನಟ ಸಂಜಯ್​ ದತ್​ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಆದಿಲ್​ಗೆ ಅಕ್ರಮ ಸಂಬಂಧವಿದೆ: ಮದ್ವೆಯಾದ ಕೆಲವೇ ದಿನಗಳಲ್ಲಿ ಪತಿ ವಿರುದ್ಧ ರಾಖಿ ಸಾವಂತ್​ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts