More

    ಮತ್ತೆ ಕನ್ನಡಕ್ಕೆ ಬಂದ ‘ಬಾಹುಬಲಿ’ ಕಥೆಗಾರ ವಿಜಯೇಂದ್ರ ಪ್ರಸಾದ್​

    ಹೈದರಾಬಾದ್​: ಎಸ್​.ಎಸ್​. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರವು ಹಿಟ್​ ಆಗುವುದಕ್ಕೆ ಪ್ರಮುಖ ಕಾರಣವೆಂದರೆ, ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದ ಅವರ ತಂದೆ ವಿಜಯೇಂದ್ರ ಪ್ರಸಾದ್​. ಈಗ ಅವರು ಕೆಲವು ವರ್ಷಗಳ ನಂತರ ಕನ್ನಡ ಚಿತ್ರವೊಂದಕ್ಕೆ ಕಥೆ ಬರೆಯುತ್ತಿದ್ದು, ಮುಂದಿನ ವರ್ಷ ಆ ಚಿತ್ರ ಸೆಟ್ಟೇರಲಿದೆ.

    ಇದನ್ನೂ ಓದಿ: ಡ್ರಗ್ಸ್​ ಪ್ರಕರಣದಲ್ಲಿ ಪ್ರಸಿದ್ಧ ಹಾಸ್ಯ ನಟಿ ದಂಪತಿ ಭಾಗಿ? ಎನ್​ಸಿಬಿ ಅಧಿಕಾರಿಗಳಿಂದ ದಂಪತಿಯ ವಿಚಾರಣೆ

    ವಿಜಯೇಂದ್ರ ಪ್ರಸಾದ್​ ಅವರಿಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈಗಾಗಲೇ ಅವರು ವಿಷ್ಣುವರ್ಧನ್​ ಅಭಿನಯದ ‘ಅಪ್ಪಾಜಿ’, ಶಿವರಾಜಕುಮಾರ್​ ಅಭಿನಯದ ‘ಕುರುಬನ ರಾಣಿ’, ರವಿಚಂದ್ರನ್​ ಅಭಿನಯದ ‘ಪಾಂಡುರಂಗ ವಿಠಲ’, ನಿಖಿಲ್​ ಕುಮಾರ್​ ಅಭಿನಯದ ‘ಜಾಗ್ವಾರ್​’ ಮುಂತಾದ ಚಿತ್ರಗಳಿಗೆ ಕಥೆ-ಚಿತ್ರಕಥೆ ಬರೆದಿದ್ದಾರೆ. ಇದೀಗ ಅವರು ಅವತಾರ್​ ಅಭಿನಯದ ಹೊಸ ಚಿತ್ರವೊಂದಕ್ಕೆ ಕಥೆ ಬರೆಯುತ್ತಿದ್ದಾರೆ.

    ಅವತಾರ್​ ಅವರ ಮೂಲ ಹೆಸರು ಮನೋಜ್​ ಪುತ್ತೂರು. ಈಗಾಗಲೇ ಅವರು ಎರಡು ತುಳು, ನಾಲ್ಕು ಕನ್ನಡ ಹಾಗೂ ಒಂದು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಸುದೀಪ್​ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದಲ್ಲಿ ನಟಿಸಿರುವ ಅವರು, ‘ಕುಡ್ಲಾ ಕೆಫೆ’ ಚಿತ್ರದಲ್ಲಿನ ನೆಗೆಟಿವ್​ ಪಾತ್ರಕ್ಕೆ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಮನೋಜ್​ ತಮ್ಮ ಹೆಸರನ್ನು ಅವತಾರ್​ ಎಂದು ಬದಲಿಸಿಕೊಂಡಿದ್ದು, ವಿಜಯೇಂದ್ರ ಪ್ರಸಾದ್​ ಕಥೆ ಬರೆಯುತ್ತಿರುವ ಚಿತ್ರದಲ್ಲಿ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಧ್ರುವ ತಮ್ಮ ಕೂದಲನ್ನು ಏನು ಮಾಡಿದರು ಗೊತ್ತಾ?

    ಕೆಲವು ದಿನಗಳ ಹಿಂದೆ ತೆಲುಗು ಸಿನಿಮಾದ ಚಿತ್ರೀಕರಣಕ್ಕಾಗಿ ಹೈದರಾಬಾದ್​ಗೆ ಹೋಗಿದ್ದ ಅವತಾರ್​ಗೆ ಸ್ನೇಹಿತರೊಬ್ಬರ ಮೂಲಕ ವಿಜಯೇಂದ್ರ ಪ್ರಸಾದ್​ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತಂತೆ. ಈ ಸಂದರ್ಭದಲ್ಲಿ ಅವತಾರ್​ಗೆ ಸೂಕ್ತವಾಗುವಂತಹ ಒಂದು ಕಥೆ ಹೇಳಿದ್ದಾರೆ ಪ್ರಸಾದ್​. ಇದೊಂದು ಥ್ರಿಲ್ಲರ್​ ಚಿತ್ರವಾಗಿದ್ದು, ಮೂರು ಭಾಗಗಳಲ್ಲಿ ಇರಲಿದೆಯಂತೆ. ಸದ್ಯ ಮೊದಲ ಭಾಗದ ಚಿತ್ರಕ್ಕೆ ತಯಾರಿ ನಡೆಯುತ್ತಿದ್ದು, ಕನ್ನಡವಲ್ಲದೆ ಹಿಂದಿ, ತೆಲುಗು ಮತ್ತು ತಮಿಳಿನಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಬೆಂಗಳೂರಿನ ಉದ್ಯಮಿಯೊಬ್ಬರು ನಿರ್ಮಿಸುತ್ತಿರುವ ಈ ಚಿತ್ರದ ಕಲಾವಿದರು ಹಾಗೂ ತಂತ್ರಜ್ಱರ ಕುರಿತಾದ ಮಾಹಿತಿ ಸದ್ಯದಲ್ಲೇ ಹೊರಬೀಳಲಿದ್ದು, ಮುಂದಿನ ವರ್ಷ ಚಿತ್ರ ಪ್ರಾರಂಭವಾಗಲಿದೆ.

    ರೌಡಿ ಬೇಬಿ ಬಿಲಿಯನ್ ವೀವ್ಸ್​ ಸಂಭ್ರಮಕ್ಕೆ ಸಾಯಿ ಪಲ್ಲವಿ ಅಭಿಮಾನಿಗಳ ಆಕ್ರೋಶ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts