More

    ವಾರ ಭವಿಷ್ಯ: ಈ ರಾಶಿಯವರಿಗೆ ಆಕಸ್ಮಿಕವಾಗಿ ಧನವೂ ಬರುವ ನಿರೀಕ್ಷೆಯಿದೆ…

    ವಾರ ಭವಿಷ್ಯ: ಈ ರಾಶಿಯವರಿಗೆ ಆಕಸ್ಮಿಕವಾಗಿ ಧನವೂ ಬರುವ ನಿರೀಕ್ಷೆಯಿದೆ…

    ಮೇಷ: ರಾಶಿಯವರು ಗ್ರಹಣವನ್ನು ದಾಟಿ ಮುಂದೆ ಸಾಗಿದ್ದಾರೆ. ಗ್ರಹಣದ ಕರಿಯಿನ್ನೂ ಹೋಗಿರುವುದಿಲ್ಲ. ಎಚ್ಚರದಿಂದ ಇರಲೇಬೇಕು. ದ್ವಾದಶದಲ್ಲಿ ಗುರುವಿರುವುದರಿಂದ ಶನಿಯು ದಶಮದಲ್ಲಿದ್ದಾನೆ ಎಂಬ ಅರಿವು ತಮಗಿದ್ದರೆ ತಮ್ಮ ಸಂಕಲ್ಪ ಈಡೇರಬೇಕಾದರೆ ಮೌನವೂ, ಜಾಗರೂಕತೆಯಿಂದ ಯಾವುದೇ ಕಾರಣಕ್ಕೂ ಅನ್ಯರ ಮೇಲೆ ಕೋಪದಿಂದ ಮಾತನಾಡದೆ ದೂರವಿಟ್ಟು ಪ್ರೀತಿಯನ್ನು ಕೊಟ್ಟರೆ ಕೆಲಸವೂ ಆಗಿ ಮನೋಇಚ್ಛೆಯು ಪೂರೈಸುತ್ತದೆ. ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ, ಪೂಜಿಸಿ.

    ವೃಷಭ: ಭಾಗಶಃ ಗ್ರಹಣವು ಅಲ್ಪಸ್ವಲ್ಪವಾಗಿ ಧನಕ್ಕೆ ಕೊರತೆ, ಖರ್ಚನ್ನು ಅಧಿಕವಾಗಿ ಮಾಡಿದೆ. ಶತ್ರುಗಳನ್ನು ಜಾಣ್ಮೆಯಿಂದ ನಿಭಾಯಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಚಂಡಿಕಾ ಪಾರಾಯಣವನ್ನು ಮಾಡಿಸಿ. ಕ್ಷೇಮವೂ ಲಾಭವೂ ದೊರಕುತ್ತದೆ.

    ಮಿಥುನ: ರಾಶಿಯವರಿಗೆ ಆಕಸ್ಮಿಕವಾಗಿ ಧನವೂ ಬರುವ ನಿರೀಕ್ಷೆಯಿದೆ. ಅದನ್ನು ಪಡೆಯಲು ಮಹಾಲಕ್ಷ್ಮಿಯ ಕೃಪಾಕಟಾಕ್ಷವೂ ಬೇಕು. ಮಹಾಲಕ್ಷ್ಮಿ ಅಷ್ಟೋತ್ತರ ಪಠಿಸಿ. ಅಷ್ಟಮ ಶನಿಗೆ ದೇವರ ಮಹಾದೇವನಾದ ಈಶ್ವರನನ್ನು ಪೂಜಿಸಿ. ಆದರೆ ಮಾತ್ರ ಗ್ರಹಗಳು ಕೈಹಾಕುವುದಿಲ್ಲ. ಸ್ಥಿರವಾದ ಮನಸ್ಸಿದ್ದರೆ, ಜಯಕ್ಕೆ ನಿಮ್ಮ ಶುದ್ಧ ಮನಸ್ಸೇ ಕಾರಣವಾಗುತ್ತದೆ.

    ಕಟಕ: ಆಗಿರುವ ಗ್ರಹಣದಿಂದ ಲಾಭ, ಸೌಖ್ಯ, ಆರೋಗ್ಯ ಪಡೆಯುವ ಕಾಲ. ಇದು ನೆರವೇರುವುದು ಸಾಧ್ಯವಾಗಲು ಕಟಕ ರಾಶಿಯ ಚಂದ್ರನು ಶಿವನ ಮುಡಿಯೆರಿದ್ದಾನೆ. ಅವನನ್ನು ಪೂಜಿಸಿ. ಈಶ್ವರನ ಪ್ರಾರ್ಥನೆ ಇರಲಿ. ಕಾರ್ಯಜಯಕ್ಕೆ ಹಾಗೂ ಅನಿರೀಕ್ಷಿತ ಧನ ನಿಮ್ಮನ್ನು ಬಂದು ಸೇರುವ ಕಾಲ. ವಲ್ಲಿ ದೇವಸೇನಾ ಸಹಿತ ಸುಬ್ರಹ್ಮಣ್ಯ ದೇವರನ್ನು ಪೂಜಿಸಿ.

    ಸಿಂಹ: ಸಿಂಹವು ಒಂಟಿ ಇರುವಾಗಲೂ ಗರ್ಜಿಸುತ್ತದೆ. ಬೇಟೆಯಾಡಲು ಉಪಾಯದಿಂದ ತನ್ನ ದಾರಿಯಲ್ಲಿ ಸಾಗುತ್ತದೆ. ರೆಪ್ಪೆ ಮಿಟುಕಿಸುವ ಸಮಯದಲ್ಲಿ ಯಾರೇ ಕಂಡರೂ ಎಗರಿ ಓಡುತ್ತದೆ. ದುರ್ಗೆಯು ಸಿಂಹವಾಹಿನಿಯಾಗಿದ್ದಾಳೆ. ಆರರ ಶನಿಯು ನಿಮಗೆ ಕೊಡಲು ಬಂದಿದ್ದಾನೆ. ಶರವೇಗದಲ್ಲಿ ಹೋಗಿ. ಬೇಕಾದ್ದನ್ನು ಪಡೆಯುವ ಸಮಯ. ದುರ್ಗೆಯನ್ನು ಆರಾಧಿಸಿ. ಸೂರ್ಯಾಷ್ಟಕವನ್ನು ಪಾರಾಯಣ ಮಾಡಿರಿ.

    ಕನ್ಯಾ: ಗ್ರಹಣ ಬಾಧೆಯು ದೂರವಾಗಿ ಅಲ್ಪಸ್ವಲ್ಪ ಚಿಂತಿಸಿದ ಕಾರ್ಯ ನಡೆಯುತ್ತದೆ. ದೈವ ಸಹಾಯವೂ ಬೇಕು. ಗುರುವಿನ ಮೇಲೆ ನಂಬಿಕೆಯಿರಲಿ. ಕುಲಗುರುಗಳನ್ನು ಪೂಜಿಸಿ. ಆಶೀರ್ವಾದ ಪಡೆದು ಬನ್ನಿ. ಸಪ್ತಮ ಗುರು ಎಲ್ಲವನ್ನೂ ಕೊಟ್ಟು ನಿಮ್ಮನ್ನು ಮುನ್ನಡೆಸುತ್ತಾನೆ. ನಿತ್ಯವೂ ಗುರು ಅಷ್ಟೋತ್ತರ ಪಾರಾಯಣ ಮಾಡಿ.

    ತುಲಾ: ಗ್ರಹಗಳ ಸ್ಥಾನಮಾನಗಳಲ್ಲಿ ಏರುಪೇರಿದ್ದರೂ ಎಲ್ಲವನ್ನೂ ಕೊಡುವವನು ಭಗವಂತನೇ. ‘ಸಮಯಾಸಮಯ ಉಂಟೇ ಭಕ್ತವತ್ಸಲ ನಿನಗೆ’ ಎಂಬ ಕನಕದಾಸರ ಪದವನ್ನು ನೆನಪಿಸಿಕೊಳ್ಳಿ. ನಿಮಗೆ ಸಿಗುವುದೆಲ್ಲವೂ ನಿಮ್ಮ ಪುಣ್ಯ ವಿಶೇಷದಿಂದ. ಹರಿಹರರನ್ನು ಪ್ರಾರ್ಥನೆ ಮಾಡಿದರೆ ಒಳ್ಳೆಯ ಫಲಗಳನ್ನು ಕಾಣಬಹುದು.

    ವೃಶ್ಚಿಕ: ‘ಉನ್ಮತ್ತೋ ಪುತ್ರಃ ಮೂರ್ಖಃ’ ಎಂಬ ನುಡಿಯಂತೆ ನಿಮ್ಮ ಕೋಪದಿಂದ ಎಲ್ಲವೂ ಸರಿಯಾಗಿದೆ ಎಂದು ತಿಳಿಯಬೇಡಿ. ಊಟ ಮಾಡುವುದು ಹಸಿವಿನ ಬಾಧೆ ನೀಗುವುದಕ್ಕಾಗಿ. ತಾಳ್ಮೆಯಿಂದ ಇರುವುದನ್ನು ರೂಢಿಸಿಕೊಂಡರೆ ಜನರನ್ನು ಗೆಲ್ಲುವುದಕ್ಕೆ ಸಾಧ್ಯ. ಇಷ್ಟಾರ್ಥ ಸಾಧಿಸಿಕೊಳ್ಳುವಾಗ ಕೋಪ, ದ್ವೇಷ, ವ್ಯಕ್ತಿಗಳ ಮೇಲೆ ಕೆಡುಕಿನ ಭಾವನೆ ದೂರಮಾಡಿದರೆ ಪಂಚಮ ಗುರುವು ನಿಮ್ಮನ್ನು ಸಲಹುತ್ತಾನೆ. ಜ್ಯೇಷ್ಠ, ಭಾತೃ, ದಾರಿದೀಪವಾಗಲಿ. ಸಹನೆ ಇರಲು ಸಂತೋಷ. ಧನವೂ ಬಂದು ಸೇರುತ್ತದೆ.

    ಧನುಸ್ಸು: ಆನಂದವೆಂಬುದು ಕೊಟ್ಟು ತೆಗೆದುಕೊಳ್ಳುವ ವಸ್ತುವಲ್ಲ. ತೃಪ್ತಿಯಿಂದ ಜೀವನ ನಡೆಸುವವನು ಸದಾ ಸುಖಿಯಾಗಿರುತ್ತಾನೆ. ಮೂಲತಃ ಧನುರ್ ರಾಶಿಯಲ್ಲಿ ಹುಟ್ಟಿ ಧನಸ್ಸು, ಬಿಲ್ಲು ಎತ್ತಿದರೆ ನೀವು ಇಷ್ಟಪಟ್ಟ ಜಾಗಕ್ಕೆ ಬಾಣವು ಹೋಗಿ ನಿಲ್ಲಬೇಕು. ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗಳ ತಲೆಕೆಡಿಸಿಕೊಂಡರೆ ಜೀವನ ನಿರರ್ಥಕ. ಅದನ್ನೆಲ್ಲಾ ಬಿಟ್ಟು ನಿತ್ಯವೂ ಗುರುಚರಿತ್ರೆಯನ್ನು ಒಂದು ಅಧ್ಯಾಯದಂತೆ ಪಾರಾಯಣ ಮಾಡಿರಿ. ಗುರುದತ್ತನೆ ನಿಮ್ಮನ್ನು ಕಾಪಾಡುತ್ತಾನೆ.

    ಮಕರ: ಏನಾದರೇನು ನಿನ್ನಂತೆ ನಾನು ಎಂದು ಶ್ರೀರಾಮಚಂದ್ರನು ಜಗತ್ತಿಗೆ ಸಾರಿದ್ದಾನೆ. ಶ್ರೀರಾಮನನ್ನು ನೆನೆದರೆ ಖಂಡಿತವಾಗಿಯೂ ನಮ್ಮ ಶರೀರದಲ್ಲಿ ಸೇರಿ ಅವನೇ ವಾಸಮಾಡುತ್ತಾನೆಂಬುದು ನೆನಪಿರಲಿ. ಕೊಟ್ಟಿರುವುದನ್ನು ಯೋಚನೆ ಮಾಡಿಕೊಂಡು, ಯಾರಿಗೂ ಹೇಳಬಾರದು. ನೋವು-ನಲಿವು ನಿಮ್ಮಲ್ಲೇ ಇರಲಿ. ಜನವರಿ 17,2023ರವರೆಗೆ ನಿಮ್ಮ ದೈವ ಪ್ರಾರ್ಥನೆ ಮುಂದುವರಿಸಿ. ಶನಿ ಅಷ್ಟೋತ್ತರ ಪಠಿಸಿ. ತಿಲಾ, ಗುಡಾ (ಬೆಲ್ಲ), ತಿಲತೈಲ ದಾನ ಮಾಡಿ ಒಳ್ಳೆಯ ಕಾಲದ ನಿರೀಕ್ಷೆಯಲ್ಲಿರಿ.

    ಕುಂಭ: ಕುಂಭವನ್ನು ಒಡೆಯಬೇಕಾದರೆ ಕಂಬವೇ ಬೇಕು. ಅಥವಾ ಕಂಬದಷ್ಟು ಗಟ್ಟಿಯಿರುವ ಬಿದಿರೇ ಬೇಕಾದೀತು. ಆದ್ದರಿಂದ ನೀವು ಯಾವುದಕ್ಕೂ ಯೋಚಿಸದೆ ನಿಮಗೆ ಬೇಕಾದ ಯೋಜನೆ ಮಾಡಿದರೆ ದೇವರೇ ಸಹಾಯಹಸ್ತ ನೀಡುತ್ತಾನೆ. ದ್ವಿತೀಯ ಗುರುವು ನಿಮಗೆ ತೃಪ್ತಿಯನ್ನು ಕೊಡುತ್ತಾನೆ. ಹನ್ನೆರಡರ ಶನಿ ಬಿಟ್ಟ ಮೇಲೆ ಸ್ವಲ್ಪ ಮಟ್ಟಿಗೆ ಕಾರ್ಯದಲ್ಲಿ ಅನುಕೂಲ ಮಾಡುತ್ತಾನೆ. ಆದರೆ ನಿಮ್ಮ ಆತ್ಮ ಸಿಂಹಾಸನದಲ್ಲಿ ಕುಲದೇವರ ಸಹಿತವಾಗಿ, ಶನಿಯ ಮಹಾತ್ಮನನ್ನು ಪೂಜಿಸಿದರೆ ಧೃಡ ಸಂಕಲ್ಪವು ನೆರವೇರುವುದು.

    ಮೀನ: ಅಂತೂ ಇಂತೂ ಬಂತು ಎಂತೆಂತದೋ ಹೋಯಿತು ಎಂಬ ಜೀವನವು ಆಗಬಾರದು. ಬಂದದ್ದನೆಲ್ಲಾ ಅನುಭವಿಸಿ ಕಾಪಾಡಿಕೊಂಡು ಹೋಗಲೇಬೇಕು. ಸುಖ-ದುಃಖ ಸಮನಾಗಿ ಅರಿತು ಬಾಳಬೇಕು. ಅತಿಯಾದ ಧನಬಂದರೆ ದುಃಖ ಬರುತ್ತದೆ. ಪ್ರಾರಬ್ಧವು ಅಂಟಿದರೂ ದುಃಖವೂ ಬರುತ್ತದೆ. ಉಮಾಮಹೇಶ್ವರ ವ್ರತ ಕಥೆಯನ್ನು ಓದಿ. ಶಿವನ ದಾರಿದ್ರ್ಯ ದಹನ ಸ್ತೋತ್ರವನ್ನು ಪಾರಾಯಣ ಮಾಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts