More

    ಜನಮತ: ಮೂಗುದಾರ ಹಾಕಬೇಕಿರುವುದು ಯಾರಿಗೆ?

    ಹೂವು ಮಾರಾಟಗಾರರು ಮೊಳ ಮತ್ತು ಮಾರು ಎಂಬ ಅಳತೆಮಾಪನದ ಬದಲಿಗೆ ಮೀಟರ್ ಲೆಕ್ಕದಲ್ಲಿ ಮಾರಾಟ ಮಾಡುವಂತೆ ಕಾನೂನುಮಾಪನ ನಿಯಂತ್ರಕರ ಕಚೇರಿಯಿಂದ 2023 ನವೆಂಬರ್ 16ರಂದು ಆದೇಶ ಹೊರಡಿಸಲಾಗಿದೆ.

    ಇಲಾಖೆಯ ಕಾಳಜಿ ಸರಿಯಿರಬಹುದು. ಆದರೆ, 2020ರ ಅಂತ್ಯದಲ್ಲಿ ಬೆಂಗಳೂರಿನಲ್ಲಿ ಆಗಿನ ಭ್ರಷ್ಟಾಚಾರ ನಿಗ್ರಹ ದಳದವರು ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿ ಭಾರೀ ಮೊತ್ತದ ಅಕ್ರಮ ಗಳಿಕೆಯನ್ನು ವಶಪಡಿಸಿಕೊಂಡ ಸುದ್ದಿ ಪ್ರಕಟವಾಗಿತ್ತು. ಹೆಚ್ಚಿನ ಪ್ರಕರಣಗಳಲ್ಲಿ ಲಂಚ ಕೊಟ್ಟವರು ವೈಯಕ್ತಿಕ ಲಾಭಕ್ಕಾಗಿ ಕೊಟ್ಟರೆ, ಪಡೆದವರು ಶ್ರೀಮಂತರಾದರು.

    ಕಾನೂನು ಮಾಪನ ಇಲಾಖೆಯ ಅಧಿಕಾರಿಗಳು ಲಂಚ ಪಡೆದು ವ್ಯಾಪಾರಿಗಳ ಮಾಪಕಗಳನ್ನು ತಪ್ಪಾಗಿ ಪ್ರಮಾಣೀಕರಿಸಿದ ಕಾರಣಕ್ಕೆ ಗ್ರಾಹಕರಿಗಾದ ನಷ್ಟದ ಅಂದಾಜು ಹೇಗೆ? ಯಾರು ಹೊಣೆ? ಹೂವಿನ ಮಾರಾಟಕ್ಕೆ ಮೀಟರ್ ಉಪಯೋಗಿಸಲು ಸೂಚಿಸುವ ಇಲಾಖೆಗೆ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಪ್ರಚಲಿತವಿರುವ ಮಲ್ಲಿಗೆ (ಮಂಗಳೂರು ಮತ್ತು ಭಟ್ಕಳ-ಹೀಗೆ ಎರಡು ವಿಧ) ಮತ್ತು ಜಾಜಿ ಹೂವಿನ ಅಳತೆ ಬಗ್ಗೆ ತಿಳಿದಿದೆಯೇ? ಈ ಮೂರು ವರ್ಗದಲ್ಲಿ ನಿರ್ದಿಷ್ಟ ಸಂಖ್ಯೆಯ ಹೂಗಳನ್ನು ಸೇರಿಸಿ ಪೋಣಿಸಿ, ನಾಲ್ಕು ಚೆಂಡು ಸೇರಿಸಿ ಒಂದು ಅಟ್ಟೆ ಎಂಬುದಾಗಿ ವಿಂಗಡಿಸಲಾಗುತ್ತದೆ.

    ಇದಕ್ಕೆ ಮೀಟರ್ ಅನ್ವಯಿಸಬೇಕೆಂದು ಇಲಾಖೆ ತಗಾದೆ ಮಾಡಿದರೆ ಅದು ಕಾರ್ಯಸಾಧ್ಯವೇ? ಹಾಗೆಯೇ ಬಿಡಿ ಹೂಗಳನ್ನು, ಕೆಲವು ನಿರ್ದಿಷ್ಟ ಕಾರ್ಯಕ್ರಮಗಳಲ್ಲಿ ಉಪಯೋಗಿಸುವ ದೊಡ್ಡ ದೊಡ್ಡ ಮಾಲೆಗಳನ್ನು ಹೇಗೆ ಅಳೆಯಬೇಕು? ಸರ್ಕಾರ ಕಾನೂನನ್ನೇನೋ ಮಾಡುತ್ತದೆ, ಆದರೆ ಅದನ್ನು ಜಾರಿಗೊಳಿಸುವ ಅಧಿಕಾರಿ ತಮ್ಮ ಮೂಗಿನ ನೇರಕ್ಕೆ ತಿರುಗಿಸಿದರೆ ಅದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ವ್ಯವಸ್ಥೆ ಗಂಭೀರವಾಗಿ ಪರಿಗಣಿಸಬೇಕು.

    | ಮೋಹನದಾಸ ಕಿಣಿ ಕಾಪು

    ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮೋಹನ್ ನಾಯಕ್ ಜಾಮೀನು ಮಂಜೂರು

    https://www.vijayavani.net/wp-admin/post.php?post=1883321&action=edit

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts