More

    ಕನ್ನಡ ಶಿಷ್ಟ ಸಾಹಿತ್ಯ, ಪ್ರಸಂಗ ಸಾಹಿತ್ಯ ನಡುವೆ ಇದೆ ಅವಿನಾಭಾವ ಸಂಬಂಧ: ಕವಿ ಎಚ್​.ಎಸ್​. ವೆಂಕಟೇಶಮೂರ್ತಿ

    ಬೆಂಗಳೂರು: ವಿಜಯವಾಣಿ-ದಿಗ್ವಿಜಯ ಕ್ಲಬ್​ನಲ್ಲಿ ಇದೇ ಮೊದಲ ಸಲ ಯಕ್ಷಗಾನ ಕುರಿತ ಸಂವಾದ ನಡೆಯುತ್ತಿದ್ದು, ಯಕ್ಷಗಾನ ಸಂಪ್ರದಾಯದಂತೆ ಗಣಪತಿ ಸ್ತುತಿಯೊಂದಿಗೇ ಕಾರ್ಯಕ್ರಮ ಆರಂಭಗೊಂಡಿದೆ.

    ಕನ್ನಡ ಶಿಷ್ಟ ಸಾಹಿತ್ಯ, ಪ್ರಸಂಗ ಸಾಹಿತ್ಯ ನಡುವೆ ಅವಿನಾಭಾವ ಸಂಬಂಧವಿದೆ ಎಂಬುದನ್ನು ನಾವು ಗ್ರಹಿಸಬೇಕು. ಪ್ರಸಂಗ ಸಾಹಿತ್ಯದಲ್ಲಿ ಕುಮಾರವ್ಯಾಸ, ಲಕ್ಷ್ಮೀಶ, ದಾಸರ ಕೃತಿಗಳನ್ನು ಪ್ರಸಂಗಕರ್ತರು ಬಳಸಿಕೊಂಡು ಯಕ್ಷರಸಿಕರನ್ನು ರಂಜಿಸಿದ್ದಾರೆ. ಪ್ರಸಂಗ ಸಾಹಿತ್ಯ ನಿರ್ಮಾಣ ಕೂಡ ಅದ್ಭುತ ಸಾಹಿತ್ಯ ನಿರ್ಮಾಣವನ್ನೂ ನಾವು ಒಪ್ಪಿಕೊಳ್ಳಬೇಕು. ಕನ್ನಡ ಸಾಹಿತ್ಯ ಹೇಗೆ ಪ್ರಸಂಗಕರ್ತರ ಮೇಲೆ ಪ್ರಭಾವ ಬೀರಿವೆಯೋ ಹಾಗೆ ಕನ್ನಡ ಸಾಹಿತ್ಯದ ಮೇಲೆ ಪ್ರಸಂಗ ಸಾಹಿತ್ಯ ಕೂಡ ಪ್ರಭಾವ ಬೀರಿದೆ ಎಂಬುದಾಗಿ ಸಾಹಿತಿ ಎಚ್​.ಎಸ್​.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

    ಯಕ್ಷರಂಗದ ದಿಗ್ಗಜರಾದ ಕೆರೆಮನೆ ಶಿವಾನಂದ ಹೆಗಡೆ, ಡಾ.ಜಿ.ಎಲ್​. ಹೆಗಡೆ, ಡಾ. ಆನಂದರಾಮ ಉಪಾಧ್ಯ, ಅನಂತ ದಂತಳಿಗೆ, ರಾಧಾಕೃಷ್ಣ ಕಲ್ಚಾರ್ ಜತೆಗೆ ಸಾಹಿತಿ ಡಾ.ನರಹಳ್ಳಿ ಸುಬ್ರಹ್ಮಣ್ಯ ಅವರು ಕೂಡ ಈ ಸಂವಾದದಲ್ಲಿ ಪಾಲ್ಗೊಂಡಿದ್ದು, ಅವರು ಕೂಡ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

    ಈ ಯಕ್ಷ-ಸಾಹಿತ್ಯ ಸಂವಾದಕ್ಕೆ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ ರೂಮ್​ಗೆ ಪ್ರವೇಶಿಸಿ…

    https://www.clubhouse.com/room/xjr8W5jo 

    ನಾನು ಸಚಿವನಾಗಿದ್ದಾಗ ರೌಡಿಗಳು ಹೆದರುತ್ತಿದ್ದರು: ಮಾಜಿ ಸಚಿವ ಯು.ಟಿ. ಖಾದರ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts