More

    ಕ್ಯಾನ್ಸರ್‌ಗೆ ಭಯಪಡುವ ಅಗತ್ಯವಿಲ್ಲ

    ವಿಜಯಪುರ: ಯುವಕರು ತಂಬಾಕು ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಫ್ಯಾಮಿಲಿ ಪ್ಲ್ಯಾನಿಂಗ್​ ಅಸೋಸಿಯೇಷನ್ ಆಪ್​ ಇಂಡಿಯಾ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಶಾಂತು ಇಂಡಿ ಹೇಳಿದರು.

    ನಗರದ ಜೈ ಕರ್ನಾಟಕ ಕಾಲನಿಯಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್​ ಅಸೋಸಿಯೇಷನ್ ಆಪ್​ ಇಂಡಿಯಾ ಸಂಸ್ಥೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬೀಡಿ, ಸಿಗರೇಟ್ ಹಾಗೂ ಗಾಂಜಾ ಸೇವನೆ, ತಂಬಾಕು ಉತ್ಪನ್ನಗಳನ್ನು ತಿನ್ನುವ ಹವ್ಯಾಸ ಹೆಚ್ಚಾಗಿದೆ. ಅದರ ಪರಿಣಾಮ ಕ್ಯಾನ್ಸರ್ ರೋಗಕ್ಕೆ ಅತಿ ಹೆಚ್ಚು ಯುವಕರು ಬಲಿಯಾಗುತ್ತಿದ್ದಾರೆ. ಯವಜನತೆ ತಮ್ಮ ಅರೋಗ್ಯದ ಬಗ್ಗೆ ಕಾಳಜಿ ಹೊಂದಿರಬೇಕೆಂದು ತಿಳಿಸಿದರು.

    ವೈದ್ಯಾಧಿಕಾರಿ ಛಾಯಾ ಚಿಪ್ಪಲಕಟ್ಟಿ ಮಾತನಾಡಿ, ಮಹಿಳೆಯರಿಗೆ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುವುದು ಹೆಚ್ಚು. ಆದ್ದರಿಂದ ಆಗಾಗ ತಪಾಸಣೆ ಮಾಡಿಸಿಕೊಳ್ಳಬೇಕು. ಮಹಾಮಾರಿ ಕ್ಯಾನ್ಸರ್‌ಗೆ ಭಯಪಡುವ ಅಗತ್ಯವಿಲ್ಲ . ಅದಕ್ಕೆ ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದು ತಿಳಿಸಿದರು.

    ಅಪ್ತಸಮಾಲೋಚಕಿ ಸುವರ್ಣಾ ಕುಲಕರ್ಣಿ, ಹೀನಾಕೌಸರ್, ಅನ್ನಪೂರ್ಣ ದೊಡಮನಿ, ಅನಿತಾ ಚಕೋಟೆ, ರಾಧಿಕಾ ಕುಲಕರ್ಣಿ, ಹಾಗೂ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts