More

    VIDEO| ಒಳ್ಳೆಯವನಂತೆ ನಟಿಸಿ ಮಹಿಳೆಯರಿಗೆ ಮೋಸ: ಸರ್ಕಾರಿ ವೈದ್ಯನ ವಿರುದ್ಧ ತಿರುಗಿಬಿದ್ದ ಪತ್ನಿ!

    ವಿಜಯಪುರ: ಮೊದಲೆರಡು ಮದುವೆ ಮುಚ್ಚಿಟ್ಟು ನನನ್ನು ಮದುವೆಯಾಗಿ ವಂಚಿಸಿದ್ದಲ್ಲದೆ, ಇದೀಗ ನಾಲ್ಕನೇ ಮದುವೆಯಾಗಲು ಹೊರಟಿದ್ದಾನೆ ಎಂದು ಮಹಿಳೆಯೊಬ್ಬಳು ದೂರು ನೀಡಿದ್ದಾರೆ.

    ವಿಜಯಪುರ ನಗರ ನಿವಾಸಿ ನೀತಾ ತನ್ನ ಪತಿ ಮಂಜುನಾಥ ಸೊಪ್ಪಿಮಠ ವಿರುದ್ಧ ವಿಜಯಪುರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಂದಹಾಗೆ ಮಂಜುನಾಥ್​ ವೃತ್ತಿಯಲ್ಲಿ ಸರ್ಕಾರಿ ವೈದ್ಯನಾಗಿದ್ದು, ಆನೆಕಲ್ ತಾಲೂಕಿನ ಇಂದಲವಾಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ವೈದ್ಯನಾಗಿರುವ ಮಂಜುನಾಥ್​ ಈ ಮೊದಲೇ ಎರಡು ಮದುವೆಯಾಗಿರುವ ವಿಚಾರ ಬಚ್ಚಿಟ್ಟು ಮೂರನೇ ಮದುವೆಯಾಗಿರುವುದಾಗಿ ನೀತಾ ಅವರು ದೂರಿದ್ದಾರೆ.

    ಇದನ್ನೂ ಓದಿ: ಮೂಗಿನಲ್ಲಿ ಪದೇಪದೆ ರಕ್ತಸ್ರಾವ ಆಗೋದನ್ನು ನೋಡಿ ವೈದ್ಯರ ಬಳಿ ಹೋದ ರೈತನಿಗೆ ಕಾದಿತ್ತು ಬಿಗ್​ ಶಾಕ್​!

    ಈಗ ನನ್ನನು ಬಿಟ್ಟು ನಾಲ್ಕನೇ ಮದುವೆಯಾಗಲು ಹೊರಟಿದ್ದಾರೆ. ಅದನ್ನು ತಡೆಯಿರಿ ಎಂದು ನೀತಾ ಗೊಳಾಡುತ್ತಿದ್ದು, ಧಾರವಾಡ ಮೂಲದ ಮಹಿಳೆಯೊಂದಿಗೆ ಮದುವೆಗೆ ಸಿದ್ದವಾಗಿರುವ ಮಂಜುನಾಥ್​ನಿಗೆ ಮಾವ ಶರಣಯ್ಯ, ಅತ್ತೆ ಪಾರ್ವತಿ, ನಾದಿನಿ ವಿನುತಾ ಕುಮ್ಮಕ್ಕು ನೀಡುತ್ತಿದ್ದಾರೆಂದು ಎಲ್ಲರ ವಿರುದ್ಧ ದೂರು ನೀಡಿದ್ದಾಳೆ.

    ಮ್ಯಾರೇಜ್ ಬ್ಯೂರೋ ಮೂಲಕ ಪರಿಚಯವಾಗಿದ್ದ ಮಂಜುನಾಥ್​ನೀತಾರನ್ನು 2013 ಡಿಸೆಂಬರ್ 25ರಂದು ಕುಣಿಗಲ್​ನ ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದರಂತೆ. ಮದುವೆಯಾದ ವರ್ಷದ ಬಳಿಕ ತನ್ನ ಗಂಡ ಈಗಾಗಲೇ ಬೆಂಗಳೂರು ಮೂಲದ ಒಬ್ಬಳನ್ನು ಹಾಗೂ ಹಾಸನ ಮೂಲದ ಒಬ್ಬಳನ್ನು ಮದುವೆಯಾಗಿದ್ದಾನೆ. ತಾನು ಮೂರನೇಯವಳು ಎಂಬ ವಿಚಾರ ಗೊತ್ತಾಗಿದೆ. ಅದನ್ನು ಪ್ರಶ್ನಿಸಿದ್ದಕ್ಕೆ ಮನೆಯವರೆಲ್ಲ ಸೇರಿ ಹೊರಹಾಕಿದರು ಎಂದು ಆರೋಪಿಸಿದ್ದಾರೆ.

    2015ರಲ್ಲೇ ವಿಜಯಪುರದ ಆದರ್ಶನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರಂತೆ. ಆಗ ಮರಳಿ ಬಂದ ಮಂಜುನಾಥ್​ ತನ್ನದು ತಪ್ಪಾಗಿದೆ ಎಂದು ತಪ್ಪೊಪ್ಪಿಗೆ ನೀಡಿ, ನೀತಾರೊಂದಿಗೆ ಸಂಸಾರ ನಡೆಸಿದ್ದಾನೆ. ತನಗೆ ಮದುವೆಯಾಗಿಲ್ಲ ಎಂದು ನಂಬಿಸಿ ಮೂರನೇ ಮದುವೆ ಮಾಡಿಕೊಂಡ ಆತನ ವಿರುದ್ಧ ನೀತಾ 2016ರಲ್ಲಿ ತುಮಕೂರಿನಲ್ಲಿ ಕೇಸ್ ದಾಖಲಿಸಿದ್ದರು. ಪ್ರಕರಣ ಇನ್ನು ನ್ಯಾಯಾಲಯದಲ್ಲಿ ಇರುವಾಗಲೇ ಮತ್ತೊಂದು ಮದುವೆಗೆ ಹೊರಟಿದ್ದರಿಂದ ಇದೀಗ ಮತ್ತೊಂದು ಕೇಸ್ ದಾಖಲಿಸಿದ್ದಾರೆ. ಕೇಸ್ ದಾಖಲಿಸಿಕೊಂಡ ಮಹಿಳಾ ಠಾಣೆ ಪೊಲೀಸರು ಡಾ. ಮಂಜುನಾಥ್​ ಕುರಿತು ತನಿಖೆ ಆರಂಭಿಸಿದ್ದಾರೆ.

    ಇದನ್ನೂ ಓದಿ: ನದಿಯಲ್ಲಿ ಈಜುವಾಗ ಅಪಾಯಕಾರಿ ಗುಹೆಯಲ್ಲಿ ಸಿಲುಕಿ ಬುದ್ಧಿವಂತಿಕೆಯಿಂದಲೇ ಬದುಕುಳಿದ ಬಾಲಕ!

    ತನ್ನ ಮೇಲಿರುವ ಆರೋಪದ ಬಗ್ಗೆ ಮಾತನಾಡಲು ನಿರಾಕರಿಸಿದ ವೈದ್ಯ ಮಂಜುನಾಥ್​, ಪೊಲೀಸ್ ಠಾಣೆಯಲ್ಲಿ ಹಾಗೂ ಕೋರ್ಟ್​ನಲ್ಲೇ ಉತ್ತರಿಸುವುದಾಗಿ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    VIDEO| ಐಟಿ ಉದ್ಯೋಗ​ ಬಿಟ್ಟು ಕೃಷಿ ಕಡೆ ವಾಲಿದ ದಂಪತಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts