More

    ಸರ್ ವಿಶ್ವೇಶ್ವರಯ್ಯ ಸದಾ ಸ್ಮರಣೀಯರು

    ವಿಜಯಪುರ: ಸಮಾಜಮುಖಿ ಕಾರ್ಯ ಮಾಡುವವರನ್ನು ಸಮಾಜ ಸದಾ ಸ್ಮರಿಸುತ್ತದೆ ಎಂಬುದಕ್ಕೆ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರೇ ಸಾಕ್ಷಿ ಎಂದು ವಿಜಯಪುರ ಅಭಿವೃದ್ಧಿ ಪ್ರಾಧಿಕಾರ(ವಿಡಿಎ) ಅಧ್ಯಕ್ಷ ಶ್ರೀಹರಿ ಗೊಳಸಂಗಿ ಹೇಳಿದರು.
    ನಗರದ ಜಿಲ್ಲಾ ಕಸಾಪ ಸಭಾಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಇಂಜಿನಿಯರ್ಸ್‌ ದಿನಾಚರಣೆಯಲ್ಲಿ ಸರ್ ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
    ಇಂಜಿನಿಯರ್ ವೃತ್ತಿಗೆ ತನ್ನದೇ ಆದ ಗೌರವವಿದೆ. ದೇಶ ಕಟ್ಟುವಲ್ಲಿ ಇಂಜಿನಿಯರ್ಸ್‌ ಪಾತ್ರ ಬಹುದೊಡ್ಡದು. ಅದರಲ್ಲೂ ಸರ್ ಎಂ. ವಿಶ್ವೇಶ್ವರಯ್ಯ ಅವರ ಪಾತ್ರ ಅಮೋಘವಾದದ್ದು ಎಂದು ತಿಳಿಸಿದರು.
    ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಅಭಿಯಂತರು ನಿರ್ವಹಿಸುವ ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ ಎಂ.ವಿಶ್ವೇಶ್ವರಯ್ಯನವರು ತಮ್ಮ ವೃತ್ತಿಯಲ್ಲಿ ದಕ್ಷತೆ ಮತ್ತು ಪ್ರಾಮಾಣಕತೆ ಮೆರೆಯುವುದರ ಮೂಲಕ ಇಂಜಿನಿಯರ್ ವೃತ್ತಿಗೆ ಗೌರವ ತಂದುಕೊಟ್ಟವರು. ಅಲ್ಲದೆ, ಸಾಹಿತ್ಯ ಪರಿಷತ್ ಹುಟ್ಟಿಗೆ ಸರ್ ಎಂ.ವಿಶ್ವೇಶ್ವರಯ್ಯ ಅವರ ಪಾತ್ರ ಅನನ್ಯ. ಅವರು ಮೈಸೂರಿನ ದಿವಾನರಾಗಿದ್ದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹುಟ್ಟುಹಾಕಿದರೆಂದು ತಿಳಿಸಿದರು.
    ಬಸವರಾಜ ಕುಮಾರ್ ಮಾತನಾಡಿದರು. ಪ್ರೊ. ಯು.ಎನ್. ಕುಂಟೋಜಿ, ಬೌರಮ್ಮ ಮುಗಳೊಳ್ಳಿ, ಎಸ್.ಎಸ್. ಖಾದ್ರಿಇನಾಮದಾರ, ರವಿ ಕಿತ್ತೂರ, ಮಂಜುನಾಥ ಜನಗೊಂಡ, ದಾಕ್ಷಾಯಿಣಿ ಬಿರಾದಾರ, ಮಹಾದೇವಿ ತೆಲಗಿ, ಡಾ. ಆರ್.ಬಿ. ಜಲ್ಲೆ, ಎಂ.ಆರ್. ಕಬಾಡೆ ಮತ್ತಿತರರಿದ್ದರು.

    ಸರ್ ವಿಶ್ವೇಶ್ವರಯ್ಯ ಸದಾ ಸ್ಮರಣೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts