More

    ವರುಣನ ಆರ್ಭಟ ಜನಜೀವನ ಅಸ್ತವ್ಯಸ್ತ

    ವಿಜಯಪುರ: ಜಿಲ್ಲಾದ್ಯಂತ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಕೆಲವೆಡೆ ಮಳೆಯಿಂದಾಗಿ ಬೆಳೆ ಹಾನಿಯಾಗಿವೆ. ಅಲ್ಲದೆ, ಮನೆಗಳು ಕುಸಿದಿವೆ.

    ಎರಡು ದಿನಗಳಿಂದ ಜಿಲ್ಲೆಯಲ್ಲಿ ಸತತವಾಗಿ ವರುಣನ ಆರ್ಭಟ ಮುಂದುವರಿದಿದ್ದು, ತೊಗರಿ, ಈರುಳ್ಳಿ, ಮೆಕ್ಕೆಜೋಳ, ಶೇಂಗಾ ಬೆಳೆದ ರೈತರು ಸಂಕಷ್ಟ ಅನುಭವಿಸುವಂತಾಗಿದೆ.

    156 ಮನೆ ಕುಸಿತ
    ಜಿಲ್ಲೆಯಲ್ಲಿ ಒಟ್ಟು 156 ಮನೆಗಳು ಭಾಗಶಃ ಕುಸಿದಿವೆ. 4 ಮನೆಗಳು ಸಂಪೂರ್ಣ ನೆಲಕಚ್ಚಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬಬಲೇಶ್ವರ 6 ಮನೆಗಳು, ತಿಕೋಟಾ 21, ಬಸವನ ಬಾಗೇವಾಡಿ 5, ಕೊಲ್ಹಾರ 38, ನಿಡಗುಂದಿ 24, ಮುದ್ದೇಬಿಹಾಳ 21, ತಾಳಿಕೋಟೆ 18, ಇಂಡಿ 10, ಸಿಂದಗಿ 8, ದೇವರ ಹಿಪ್ಪರಗಿ 5 ಮನೆಗಳಿಗೆ ಹಾನಿ ಆಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

    ಕೊಚ್ಚಿಹೋದ ವ್ಯಕ್ತಿಯ ರಕ್ಷಣೆ
    ಹಳ್ಳದಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿಯ ರಕ್ಷಣೆ ಮಾಡಿದ ಘಟನೆ ವಿಜಯಪುರ ತಾಲೂಕಿನ ಅತಾಲಟ್ಟಿ ಹಳ್ಳದಲ್ಲಿ ನಡೆದಿದೆ. ಅತಾಲಟ್ಟಿ ಗ್ರಾಮದ ನಿವಾಸಿ ಬಂದೇನವಾಜ್ ಮೊಕಾಶಿ ಹಳ್ಳದಲ್ಲಿ ಕೊಚ್ಚಿಹೋಗಿದ್ದು, ಆತನನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಸಾರವಾಡದಿಂದ ಅತಾಲಟ್ಟಿಗೆ ಹೋಗುತ್ತಿದ್ದ ಬಂದೇನವಾಜ್ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಳದ ಹಿನ್ನೆಲೆ ಕೊಚ್ಚಿಹೋಗಿ ಮುಳ್ಳಿನ ಕಂಟಿಗೆ ಸಿಲುಕಿಕೊಂಡಿದ್ದಾನೆ. ನಂತರ ಮೊಬೈಲ್ ಮೂಲಕ ಮನೆಯ ಸದಸ್ಯರಿಗೆ ಮಾಹಿತಿ ತಿಳಿಸಿದ್ದಾನೆ. ಮನೆಯವರು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಹಳ್ಳದಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

    ಜಿಲ್ಲೆಯಲ್ಲಿ 17.85 ಮಿಮೀ ಮಳೆ
    ಜಿಲ್ಲೆಯಲ್ಲಿ ಭಾನುವಾರ ರಾತ್ರಿ 17.85 ಮಿ.ಮೀ. ಮಳೆ ಸುರಿದಿದೆ. ಬಸವನ ಬಾಗೇವಾಡಿ 7.6, ಮನಗೂಳಿ 30.0, ಆಲಮಟ್ಟಿ 33.5, ಹೂವಿನ ಹಿಪ್ಪರಗಿ 9.2, ಅರೇಶಂಕರ 16.0, ಮಟ್ಟಿಹಾಳ 9.0, ವಿಜಯಪುರ 15.2, ನಾಗಠಾಣ 7.3, ಭೂತನಾಳ 14.2, ಹಿಟ್ನಳ್ಳಿ 9.8, ತಿಕೋಟಾ 25.1, ಮಮದಾಪುರ 15.4, ಕುಮಟಗಿ 3.2, ಕನ್ನೂರ 10.3, ಬಬಲೇಶ್ವರ 16.8, ಇಂಡಿ 5.0, ನಾದ ಬಿ.ಕೆ. 2.0, ಅಗರಖೇಡ 25.1, ಹೊರ್ತಿ 14.4, ಹಲಸಂಗಿ 42.0, ಚಡಚಣ 16.0, ಝಳಕಿ 12.4, ಮುದ್ದೇಬಿಹಾಳ 8.0, ನಾಲತವಾಡ 40.2, ತಾಳಿಕೋಟೆ 49.3, ಢವಳಗಿ 20.6, ಸಿಂದಗಿ 28.0, ಆಲಮೇಲ 0.5, ಸಾಸಾಬಾಳ 5.3, ರಾಮನಹಳ್ಳಿ 5.2, ಕಡ್ಲೆವಾಡ 25.0, ದೇವರ ಹಿಪ್ಪರಗಿ 30.2, ಕೊಂಡಗೂಳಿ 27.2 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾ ಅಂಕಿ-ಸಂಖ್ಯೆ ಇಲಾಖೆ ಮಾಹಿತಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts