More

    ಲೋಕಾಯುಕ್ತ ದೂರುದಾರರ ವಿರುದ್ಧ ನೋಟಿಸ್

    ವಿಜಯಪುರ: ತಮ್ಮ ವಿರುದ್ಧ ಲೋಕಾಯುಕ್ತರಿಗೆ ಸುಳ್ಳು ದೂರು ನೀಡಿರುವ ರಾಜಶೇಖರ ಮಗಿಮಠ ಎಂಬುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿ, ನೋಟಿಸ್ ನೀಡಿರುವುದಾಗಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ತಿಳಿಸಿದ್ದಾರೆ.

    ತತ್ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಶ್ವವಿದ್ಯಾನಿಲಯದಲ್ಲಿ ನಡೆದ ಬೋಧಕೇತರ ಸಿಬ್ಬಂದಿ ನೇಮಕಾತಿ ಸಮಿತಿಯಲ್ಲಿ ನಾನೊಬ್ಬನೇ ಸದಸ್ಯನಾಗಿರಲಿಲ್ಲ. ಇನ್ನುಳಿದ ಬೇರೆ ಸದಸ್ಯರು ಇದ್ದರೂ ಅವರ‌್ಯಾರನ್ನು ದೂರಿನಲ್ಲಿ ಹೆಸರಿಸದೇ ನನ್ನ ಹೆಸರನ್ನು ಮಾತ್ರ ಎಳೆದು ತಂದಿರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ.

    ತಮಗೆ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಉನ್ನತ ಅಥವಾ ಪ್ರಭಾರ ಹುದ್ದೆ ನೀಡಬಾರದು ಎಂದು ಪತ್ರಿಕಾ ಪ್ರಕಟಣೆ ನೀಡಿರುವ ಮಗಿಮಠ ಅವರ ಉದ್ದೇಶವಾದರು ಏನು? ಎಂದು ಪ್ರಶ್ನಿಸಿರುವ ಪ್ರೊ. ಕಾಕಡೆ, ಈಗಾಗಲೇ ಮಗಿಮಠ ಅವರಿಗೆ ನಮ್ಮ ವಕೀಲರ ಮೂಲಕ ನೋಟಿಸ್ ನೀಡಲಾಗಿದ್ದು ಏಳು ದಿನಗಳೊಳಗೆ ಉತ್ತರ ನೀಡದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

    ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಅವರು ಕಳಿಸಿರುವ ವಕೀಲರ ನೋಟಿಸ್ ನನಗಿನ್ನೂ ಮುಟ್ಟಿಲ್ಲ.
    ರಾಜಶೇಖರ ಮಗಿಮಠ, ಲೋಕಾಯುಕ್ತ ದೂರುದಾರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts