More

    ಕೃಷಿಯಲ್ಲಿ ಹೊಸ ಅವಿಷ್ಕಾರ ಅಳವಡಿಸಿಕೊಳ್ಳಿ

    ವಿಜಯಪುರ: ಕೃಷಿ ಕ್ಷೇತ್ರ ವಿಶಾಲವಾಗಿ ಬೆಳೆಯುತ್ತಿದೆ. ಆ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಮುಂದೆ ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ ಎಂದು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಎಚ್.ಆರ್.ಬಿರಾದಾರ ಹೇಳಿದರು.

    ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಸಹಕಾರಿ ಸಮ್ಮೇಳನ ಹಾಗೂ ಕಬ್ಬು ಬೇಸಾಯ ವಿಚಾರ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಕಾರ್ಖಾನೆ ನಿರ್ದೇಶಕರಾದ ಆರ್.ಪಿ.ಕೊಡಬಾಗಿ ಹಾಗೂ ಸಿದ್ದಣ್ಣ ದೇಸಾಯಿ ಅವರು ಕಬ್ಬಿನ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಡಾ.ಸಂಜಯ ಬಿ.ಪಾಟೀಲ ಅವರು ಕಬ್ಬು ಲಾವಣಿ ಹಾಗೂ ಕಬ್ಬಿನ ತಳಿಗಳ ಬಗ್ಗೆ ಮಾತನಾಡಿದರು. ಡಾ.ಬಿ.ಕೆ.ಕುಮಾರ ‘ಮಣ್ಣಿನ ಲವತ್ತತೆ’ ಬಗ್ಗೆ ಮಾತನಾಡಿದರು. ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಎಚ್.ವೈ.ಗದ್ದನಕೇರಿ ಕಾರ್ಖಾನೆಯಿಂದ ರೈತರಿಗೆ ಉತ್ತಮ ಸಲಹೆಗಳನ್ನು ಕೊಡುತ್ತಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

    ಕಾರ್ಖಾನೆ ನಿರ್ದೇಶಕರಾದ ರಮೇಶ ಜಕರಡ್ಡಿ, ಎಚ್.ಕೆ.ಕಡಪಟ್ಟಿ , ಜಿ.ಎಸ್.ಶಿರಾಳಶೆಟ್ಟಿ ಹಾಗೂ ಪ್ರಗತಿಪರ ರೈತರಾದ ಆರ್. ಟಿ. ಪಾಟೀಲ, ಪಂಡಿತಪ್ಪ ಅಮ್ಮಲಝರಿ, ಮುಖ್ಯ ಕಬ್ಬು ಅಭಿವೃದ್ಧಿ ಅಧಿಕಾರಿ ಎಂ.ಎಲ್.ಪಚ್ಚನವರ, ಕಬ್ಬು ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗದ ನಿರ್ದೇಶಕ ಪಾಂಡು ಎಸ್.ಬಿರಾದಾರ, ಬಿ.ಎಲ್. ರಾಜು ಹಾಗೂ ಕಣಬೂರ, ಶಿರಬೂರ, ಚಿಕ್ಕಗಲಗಲಿ, ಜಂಬಗಿ (ಎಚ್) ಹೊಸೂರು, ಸುತಗುಂಡಿ, ದೇವರಗೆಣ್ಣೂರ, ಬಬಲಾದಿ, ಬಿದರಿ, ಸಂಗಾಪುರ, ಗಲಗಲಿ , ಅಮ್ಮಲಝರಿ, ಯಡಹಳ್ಳಿ, ರಬಕವಿ, ಕೋಲೂರ ಹಾಗೂ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts