More

    ಅಹೋರಾತ್ರಿ ಸರದಿ ಉಪವಾಸಕ್ಕೆ ನಿರ್ಧಾರ

    ವಿಜಯಪುರ: ಮುರುಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ ನಿಯಮಿತದ ವಂಚನೆ ವಿರೋಧಿಸಿ ಇಲ್ಲಿನ ಸಹಕಾರಿ ಸಂಘಗಳ ಉಪ ನಿಬಂಧಕರ ಕಚೇರಿ ಎದುರು ನಡೆಯುತ್ತಿರುವ ಧರಣಿ ದಿನೇ ದಿನೆ ಚುರುಕು ಪಡೆಯುತ್ತಿದೆ.

    12 ದಿನಗಳಿಂದ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಮಂಗಳವಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ರಾಮ ಅರಸಿದ್ದಿ ಭೇಟಿ ನೀಡಿ ಹೋರಾಟ ಹಿಂಪಡೆಯುವಂತೆ ಹೋರಾಟಗಾರರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಗ್ರಾಹಕರು ಮಾತ್ರ ನಕಾರ ವ್ಯಕ್ತಪಡಿಸಿದ್ದು, ಮುಂದಿನ ಹಂತವಾಗಿ ಅಹೋರಾತ್ರಿ ಸರದಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ನಿರ್ಧಾರ ಪ್ರಕಟಿಸಿದರು.

    ನೇತೃತ್ವ ವಹಿಸಿದ್ದ ಅರವಿಂದ ಕುಲಕರ್ಣಿ ಮಾತನಾಡಿ, ನಿರಾಣಿ ಹೆಸರಿನ ಸೌಹಾರ್ದವನ್ನು ನಂಬಿ ಕೋಟ್ಯಂತರ ಹಣವನ್ನು ಗ್ರಾಹಕರು ತೊಡಗಿಸಿದ್ದಾರೆ. ಆದರೆ ಹಣವನ್ನು ಸೌಹಾರ್ದ ಮಂಡಳಿ ದುರುಪಯೋಗ ಪಡಿಸಿಕೊಂಡಿದ್ದು, ಕೂಡಲೇ ಹಿಂತಿರುಗಿಸಬೇಕೆಂದು ಮನವಿ ಮಾಡಿದರು.

    ರೈತ ಮುಖಂಡ ಸದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ, ಸಕಾರಾಂ ಕಟ್ಟಿಮನಿ, ಕಲ್ಲಪ್ಪ ಗುಳೇದ, ಶಿವಾನಂದ ಹಾರಿವಾಳ, ಜಗದೀಶಯ್ಯ ಹಿರೇಮಠ, ಬಸಪ್ಪ ಮುಳವಾಡ, ಚಂದ್ರಶೇಖರ ಮಾಶ್ಯಾಳ, ಎಂ.ಎಂ. ಜಾಲಗೇರಿ, ರಾಹುಲ್ ಜಾಧವ, ಬಸವರಾಜ ಬಾಡಗಿ, ರೇವಣಸಿದ್ದ ಚಾಂದಕವಟೆ, ಬಸವರಾಜ ಅಂಗಡಿ, ಬಸವರಾಜ ಅವಟಿ, ವಿರೇಶ ಅಂಗಡಿ, ಎಸ್.ಎನ್. ಇಟಗಿ, ವಿ.ಎನ್. ಕನ್ನೂರ, ಎಸ್.ಎಂ. ಕಬಾಡೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts