More

    ಲೋಪ ಸರಿಪಡಿಸಿ ಬಿಲ್ ಸಂದಾಯ ಮಾಡಿ

    ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯ ಕೋರ್ಟ್ ಸರ್ಕಲ್ ಸಿಸಿ ರಸ್ತೆ ಕಾಮಗಾರಿ ಇನ್ನೂ ಪರಿಪೂರ್ಣಗೊಂಡಿಲ್ಲ. ರಸ್ತೆ ಮೇಲ್ಭಾಗ ಅಂದರೆ ಸ್ಕಿನ್‌ಔಟ್ ಆಗಿದ್ದು, ಅವುಗಳನ್ನು ಸರಿಪಡಿಸಿದ ಬಳಿಕವೇ ಬಿಲ್ ಸಂದಾಯ ಮಾಡಲು ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿಗೆ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಸೂಚಿಸಿದರು.

    ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಕೋರ್ಟ್ ಸರ್ಕಲ್‌ನ ಸಿಸಿ ರಸ್ತೆ ಕಾಮಗಾರಿ ಇನ್ನೂ ಪರಿಪೂರ್ಣವಾಗಿಲ್ಲ. ಸಂಪೂರ್ಣ ಮುಗಿದ ಮೇಲೆಯೇ ಬಿಲ್ ಸಂದಾಯ ಮಾಡಬೇಕೆಂದು ಸ್ಥಳದಲ್ಲಿದ್ದ ಆಯುಕ್ತರಿಗೆ ಹೇಳಿದರು.

    ಗುತ್ತಿಗೆದಾರರು ಕೆಲವು ಕಡೆ ಕಾಮಗಾರಿ ಸರಿಪಡಿಸಿ ನಿರ್ವಹಿಸಿದ್ದು, ಸ್ಥಾನಿಕವಾಗಿ ಪರಿಶೀಲನಾ ಸಂದರ್ಭದಲ್ಲಿ ಇನ್ನೂ ಹಲವಾರು ಕಡೆ ಸ್ಕಿನ್‌ಔಟ್ ಆಗಿದೆ. ಅದನ್ನು ಸರಿಪಡಿಸದೆ ಇರುವುದರಿಂದ ಈ ಗುತ್ತಿಗೆದಾರರ ಮೂಲಕ ಕಾಮಗಾರಿಯನ್ನು ಸಂಪೂರ್ಣವಾಗಿ ಸರಿಪಡಿಸಲು ಸೂಚಿಸಿದರು. ಅಲ್ಲಿಯವರೆಗೆ ಶೇ.10 ರಷ್ಟು ಬಿಲ್ ತಡೆಹಿಡಿದು ಸಂದಾಯ ಮಾಡಲು ತಿಳಿಸಿದರು.

    ನಗರದಲ್ಲಿ ಈಗಾಗಲೇ ಸರ್ಕಾರದಿಂದ ವಿವಿಧ ಯೋಜನೆಗಳಡಿ ರಸ್ತೆ, ಚರಂಡಿ, ಒಳಚರಂಡಿ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅವುಗಳನ್ನು ಗುಣಮಟ್ಟದಲ್ಲಿ ನಿರ್ವಹಿಸಬೇಕೆಂದು ಪಾಲಿಕೆ ಆಯುಕ್ತರು, ಅಭಿಯಂತರರು ಮತ್ತು ಮೂರನೇ ವ್ಯಕ್ತಿ ತಪಾಸಣೆ ತಂಡದವರಿಗೆ ಸೂಚಿಸಿದರು.

    ಕಳಪೆ ಕಾಮಗಾರಿ ಕಂಡು ಬಂದಲ್ಲಿ ಸಾರ್ವಜನಿಕರು ನೇರವಾಗಿ ತಮ್ಮ ಗಮನಕ್ಕೆ ತರಬೇಕೆಂದು ತಿಳಿಸಿದ ಜಿಲ್ಲಾಧಿಕಾರಿಗಳು, ಗುತ್ತಿಗೆದಾರರಿಗೂ ಯಾವುದೇ ತೊಂದರೆ ನೀಡದೆ ಪಾರದರ್ಶಕವಾಗಿ ಬಿಲ್ ಸಂದಾಯ ಮಾಡಬೇಕೆಂದು ಆಯುಕ್ತರಿಗೆ ತಿಳಿಸಿದರು.

    ಒಂದು ವೇಳೆ ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಬಿಲ್ ಸಂದಾಯ ಮಾಡಲು ಗುತ್ತಿಗೆದಾರರಿಗೆ ತೊಂದರೆ ನೀಡುತ್ತಿದ್ದಲ್ಲಿ ಗುತ್ತಿಗೆದಾರರು ನೇರವಾಗಿ ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಬೇಕೆಂದು ಸೂಚಿಸಿದರು.
    ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಹಾಗೂ ಇತರ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts