More

    ಸೌಲಭ್ಯ ಪಡೆಯಲು ಸಂಘಟಿತರಾಗಿ

    ವಿಜಯಪುರ: ನಾಗರಿಕ ಸಮಾಜದಲ್ಲಿ ಜನರು ಸಂವಿಧಾನ ಬದ್ಧವಾಗಿ ಸಂಘಟಿತರಾಗಿ, ಸಂಘ ಸಂಸ್ಥೆಗಳ ಮೂಲಕ ಕಾನೂನಿನ ತಿಳಿವಳಿಕೆ ಪಡೆದು ಹಕ್ಕುಗಳನ್ನು, ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ನ್ಯಾಯವಾದಿ ದಾನೇಶ ಅವಟಿ ಹೇಳಿದರು.

    ಇಲ್ಲಿನ ಕಾಯಕ ನಗರದ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆ, ವಿಜಯಪುರ ಸ್ಲಂ ಅಭಿವೃದ್ಧಿ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಗೌರವಯುತ ಬದುಕು ಸಾಗಿಸಲು ಭಾರತದ ಸಂವಿಧಾನದ ಬಗ್ಗೆ ಅರಿವು ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಸಂವಿಧಾನದ ಸದಾಶಯಗಳನ್ನು ಅರಿತು ಅನುಸರಸಬೇಕು ಎಂದರು.

    ಕಾಯಕ ನಗರದ ಅಭಿವೃದ್ಧಿ ಸಮಿತಿ ಪ್ರತಿನಿಧಿ ರೇಖಾ ಬನ್ನೂರ ಮಾತನಾಡಿ, ಮಹಿಳೆ ಇಂದು ಎಲ್ಲ ರಂಗದಲ್ಲೂ ಅಪ್ರತಿಮ ಸಾಧನೆ ಮಾಡಿದ್ದು, ವಿದ್ಯೆ, ಕಲೆ, ಕೌಶಲಗಳಿಂದ ಉನ್ನತಿ ಹೊಂದುತ್ತಿದ್ದಾಳೆ. ಇದು ಡಾ.ಅಂಬೇಡ್ಕರ್ ಅವರ ಪರಿಶ್ರಮದ ಫಲವಾಗಿದೆ. ಅವರು ಬರೆದ ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕರ ಬಾಳಿನಲ್ಲಿ ಬೆಳಕಾಗಿದೆ. ಶಿಕ್ಷಣದೊಂದಿಗೆ ಸಂವಿಧಾನದ ಅರಿವು ಕೂಡ ಪ್ರತಿಯೊಬ್ಬರಿಗೆ ಅತ್ಯವಶ್ಯ ಎಂದರು.

    ಅನೌಪಚಾರಿಕ ಶಿಕ್ಷಣ ಸಂಸ್ಥೆ ಸಂಯೋಜಕ ದಸ್ತಗೀರ ಉಕ್ಕಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಸಿದ್ದಪ್ಪ ಅಳ್ಳಗಿ, ಶಾಂತಾಬಾಯಿ ಚಿನ್ನಕಾಳಿಮಠ, ಕಾಮಿನಿ ಕಸಬೆ, ಶಂಕ್ರೆಮ್ಮ ನಾಡಗೌಡ, ಶರಣಮ್ಮ ಪಡಸಲಗಿ, ನಂದಾ ಬಂಡಿ, ರವಿ ಕಟ್ಟಿಮನಿ, ಬಿಸ್ಮಿಲ್ಲಾ ನದಾಫ್, ರೇಣುಕಾ ತಮಗೊಂಡ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts