More

    ರಕ್ತ ಪರೀಕ್ಷೆ ಪುನರಾರಂಭ

    ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಹಲವು ತಿಂಗಳಿನಿಂದ ಕೆಮಿಕಲ್ ಇಲ್ಲದೆ ಲ್ಯಾಬ್‌ನಲ್ಲಿ ಹಲವು ಟೆಸ್ಟ್‌ಗಳನ್ನು ನಿಲ್ಲಿಸಲಾಗಿತ್ತು. ಈಗ ಲ್ಯಾಬ್‌ಗೆ ಬರಬೇಕಿದ್ದ ಕೆಮಿಕಲ್ ಸರಬರಾಜು ಆಗಿದ್ದರಿಂದ ಸಿಬಿಸಿ, ಎಲ್‌ಎಫ್‌ಟಿ, ಆರ್‌ಎಫ್‌ಟಿ, ಆರ್‌ಬಿಎಸ್, ಪಿಪಿಟಿ, ಪಿಟಿಎ, ಪಿಟಿಎಪಿಟಿಟಿ ಸೇರಿ ಹಲವು ರಕ್ತದ ಮಾದರಿ ತಪಾಸಣೆಗಳು ಪುನರಾರಂಭವಾಗಿದ್ದು, ಬಡ ಜನತೆಗೆ ಅನುಕೂಲವಾಗಿದೆ.

    ಕಳೆದ ಹಲವು ತಿಂಗಳಿಂದ ಜಿಲ್ಲಾ ಆಸ್ಪತ್ರೆ ಪ್ರಯೋಗಾಲಯದಲ್ಲಿ ಉಲ್ಬಣಗೊಂಡಿದ್ದ ಸಮಸ್ಯೆಯನ್ನು ಗಮನಿಸಿದ ‘ವಿಜಯವಾಣಿ’ ಆಗಸ್ಟ್ 26ರಂದು ಜಿಲ್ಲಾ ಆಸ್ಪತ್ರೆಯಲ್ಲಿ ‘ರಕ್ತ ತಪಾಸಣೆಗೂ ಪರದಾಟ’ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಬಡ ಜನತೆ ಅನುಭವಿಸುತ್ತಿರುವ ತೊಂದರೆ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿತ್ತು.

    ವರದಿಗೆ ಸ್ಪಂದಿಸಿದ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ. ಸಂಗಣ್ಣ ಲಕ್ಕಣ್ಣವರ ವಿಶೇಷ ಕಾಳಜಿ ವಹಿಸಿ, ಜವಾಬ್ದಾರಿ ತೆಗೆದುಕೊಂಡು 3 ಲಕ್ಷ ರೂಪಾಯಿ ಕೆಮಿಕಲ್‌ಗೆ ಕೊಟೇಷನ್ ಹಾಕಿ, ಕೆಮಿಕಲ್ ತರಿಸಿ, ಲ್ಯಾಬ್ ಪುನರಾರಂಭಿಸುವ ಮೂಲಕ ಎಲ್ಲರಿಗೂ ಸೂಕ್ತಸೌಲಭ್ಯ ದೊರೆಯುವಂತೆ ಮಾಡಿದ್ದಾರೆ. ಅಲ್ಲದೆ, ಪ್ರಯೋಗಾಲಯಕ್ಕೆ ವರ್ಷಕ್ಕೆ 50 ಲಕ್ಷ ರೂ. ಮೊತ್ತದ ರಾಸಾಯನಿಕಗಳನ್ನು ಪೂರೈಸಲು ಟೆಂಡರ್ ಕೂಡ ಕರೆದಿದ್ದು, ಇದೇ ಸೆ. 24ರಂದು ಟೆಂಡರ್ ಓಪನ್ ಆಗಲಿದೆ. ಹೀಗಾಗಿ ಇಷ್ಟು ದಿನ ಇದ್ದ ಎಲ್ಲ ಸಮಸ್ಯೆಗಳು ಬಗೆಹರಿಯಲಿದೆ. ರೋಗಿಗಳಿಗೆ ತ್ವರಿತಗತಿಯಲ್ಲಿ ಲ್ಯಾಬ್ ಸೌಲಭ್ಯ ದೊರೆಯಲಿರುವ ಮಾಹಿತಿಯನ್ನು ಡಾ. ಸಂಗಣ್ಣ ನೀಡಿದ್ದಾರೆ.

    ಬಡವರಿಗೆ ಮತ್ತೆ ಆಸ್ಪತ್ರೆಯಲ್ಲಿ ಸೌಲಭ್ಯಗಳು ಸಿಗುವಂತಾಗಿವೆ. ನಿತ್ಯ ನೂರಾರು ಬಡ ರೋಗಿಗಳಿಗೆ ಎಲ್ಲ ಮಾದರಿಯ ರಕ್ತ ತಪಾಸಣೆ ಉಚಿತವಾಗಿ ಮಾಡಿ ರಿಪೋರ್ಟ್ ಕೊಡಲಾಗುತ್ತಿದ್ದು, ರೋಗಿಗಳು ‘ವಿಜಯವಾಣಿ’ಗೆ ಅಭಿನಂದಿಸಿದ್ದಾರೆ.

    ಕೆಮಿಕಲ್ ಸರಬರಾಜುದಾರರ ತೊಂದರೆಯಿಂದಾಗಿ ಸ್ಥಗಿತಗೊಂಡಿದ್ದ ರಕ್ತ ತಪಾಸಣೆಯನ್ನು ಪುನರಾರಂಭ ಮಾಡಲಾಗಿದೆ. ಕೆಮಿಕಲ್ ತರಿಸಲಾಗಿದೆ. ವಾರ್ಷಿಕ ಕೆಮಿಕಲ್ ಸರಬರಾಜಿಗೂ ಟೆಂಡರ್ ಕರೆದಿದ್ದು, ಸೆ. 24ರಂದು ಓಪನ್ ಆಗಲಿದೆ. ಶೀಘ್ರವಾಗಿ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ.
    ಡಾ. ಸಂಗಣ್ಣ ಲಕ್ಕಣ್ಣನವರ,ಜಿಲ್ಲಾ ಶಸ್ತ್ರ ಚಿಕಿತ್ಸಕ

    ಜಿಲ್ಲಾಸ್ಪತ್ರೆಯಲ್ಲಿ ಹಲವು ತಿಂಗಳಿನಿಂದ ನಿಂತೇ ಹೋಗಿದ್ದ ರಕ್ತ ತಪಾಣೆ ಹಾಗೂ ವಿವಿಧ ಲ್ಯಾಬ್ ತಪಾಸಣೆ ಜ್ವಲಂತ ಸಮಸ್ಯೆ ಬಗ್ಗೆ ‘ವಿಜಯವಾಣಿ’ ವಿಸ್ತೃತ ವರದಿ ಪ್ರಕಟಿಸುವ ಮೂಲಕ ಗಮನ ಸೆಳೆದಿದ್ದದ್ದಕ್ಕೆ ನಾನು ಆಭಾರಿ. ವರದಿಯಿಂದ ಎಚ್ಚೆತ್ತ ಆಸ್ಪತ್ರೆ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ವಿಜಯವಾಣಿಗೆ ನಾವು ಆಭಾರಿಯಾಗಿದ್ದೇವೆ.
    ಮಹಾಂತೇಶ ಮೇಡೆದಾರ ರೋಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts