More

    ಕುರಿಗಳ ಸಾವಿಗೆ ಪರಿಹಾರ ಕಲ್ಪಿಸಿ

    ವಿಜಯಪುರ: ಕುರಿಗಳ ಸಾವಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಜಿಲ್ಲಾ ಕುರಿಗಾರರ ಸಂಘ ಹಾಗೂ ಕರ್ನಾಟಕ ಕುರಿ ಸಾಕಾಣಿಕೆ ಮತ್ತು ಮೇಕೆ ಸಂಘಗಳ ಮಹಾಮಂಡಳ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
    ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಜಿಲ್ಲಾಡಳಿತ ಕಚೇರಿಗೆ ಆಗಮಿಸಿ ಸಮಾವೇಶವಾಗಿ ಮಾರ್ಪಟ್ಟಿತ್ತು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
    ಮಂಡಳದ ಅಧ್ಯಕ್ಷ ಪಂಡಿತರಾವ ಚಿದ್ರಿ ಮಾತನಾಡಿ, ಹಿಂದಿನ ಸರ್ಕಾರ ಸತ್ತ ಕುರಿಗಳಿಗೆ ಐದು ಸಾವಿರ ರೂ. ಪರಿಹಾರ ನೀಡುತ್ತಿದ್ದ ಅನುಗೃಹ ಯೋಜನೆಯನ್ನು ಈಗಿನ ಸರ್ಕಾರ ನಿಲ್ಲಿಸಿದೆ. ಇದರಿಂದ ಕುರಿಗಾರರಿಗೆ ಆರ್ಥಿಕ ತೊಂದರೆ ಉಂಟಾಗುತ್ತಿದೆ. ಸದರಿ ಯೋಜನೆಯನ್ನು ಮತ್ತೆ ಮುಂದುವರಿಸಿ ಸತ್ತ ಕುರಿಗಳಿಗೆ ಪರಿಹಾರ ಧನ ನೀಡುವಂತೆ ಆಗ್ರಹಿಸಿದರು.
    ಜಿಪಂ ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ ಮಾತನಾಡಿ, ಕುರಿಗಾರರಿಗೆ ಸಂಪೂರ್ಣ ಉಚಿತವಾಗಿ ಟೆಂಟ್ ಹಾಗೂ ಕುರಿಗಾರರ ಮಕ್ಕಳಿಗೆ ಶಿಕ್ಷಣ ನೀಡಲು ಆಗ್ರಹಿಸಿದರು.
    ಕರ್ನಾಟಕ ನವ ನಿರ್ಮಾಣ ವೇದಿಕೆ ಅಧ್ಯಕ್ಷ ಶೇಷರಾವ ಮಾನೆ, ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ತಾಪಂ ಅಧ್ಯಕ್ಷೆ ಪ್ರಭಾವತಿ ನಾಟೀಕಾರ, ಕುರಿಗಾರರ ಸಂಘದ ಜಿಲ್ಲಾಧ್ಯಕ್ಷ ಭೀರಪ್ಪ ಜುಮನಾಳ ಮಾತನಾಡಿದರು.
    ದೇವಕಾಂತ ಬಿಜ್ಜರಗಿ, ಸತೀಶ ಅಡವಿ, ಮಲ್ಲು ಬಿದರಿ, ರಾಜು ಕಗ್ಗೋಡ, ಶೇಖರ ತೋಳಮಟ್ಟಿ, ಭೀಮಾಶಂಕರ ಸಾಹುಕಾರ, ರವಿ ಕಿತ್ತೂರ, ಶ್ರೀಕಾಂತ ಸಂಗೋಗಿ, ಸುರೇಶ ಡೊಂಬಳೆ, ಅಮೋಘಸಿದ್ದ ಸಗಾಯಿ, ಸಂಗು ವಾಲಿಕಾರ, ಸುರೇಖಾ ರಜಪೂತ, ಲಕ್ಷ್ಮಣ ಹಂದ್ರಾಳ, ಯಶವಂತ ಕೋಳೂರ, ಸಂಜು ಪಾಂಡ್ರೆ, ಪರಮಾನಂದ ಶ್ರೀ, ಲಕ್ಷ್ಮಣ ಪೂಜಾರಿ, ಅಟಲ್ ಕಳ್ಳಿಮನಿ, ಧರ್ಮಣ್ಣ ತೊಂಡಾಪೂರ, ಯಲ್ಲಪ್ಪ ಯಂಭತ್ನಾಳ, ಲಕ್ಷ್ಮಣ ಕರಾತ, ಪಾಂಡು ಕರಾತ, ಸಿದ್ದು ಹುಡೇದ, ರಾಜು ಯಂಟಮಾನ ಮತ್ತಿತರರಿದ್ದರು.

    ಕುರಿ ಬಜಾರ್ ಆರಂಭಕ್ಕೆ ಒತ್ತಾಯ

    ಬಸವನಬಾಗೇವಡಿ ಎಪಿಎಂಸಿಯಲ್ಲಿ ಕುರಿ ಬಜಾರ್ ಪುನರ್ ಆರಂಭಿಸಲು ಒತ್ತಾಯಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
    ತಾಲೂಕಾಧ್ಯಕ್ಷ ರಾಜಶೇಖರ ಚಂ. ಯರನಾಳ ಮಾತನಾಡಿ, ಬಸವನಬಾಗೇವಾಡಿ ಎಪಿಎಂಸಿಯಲ್ಲಿ ಪ್ರತಿ ಸೋಮವಾರ ಕುರಿ, ಆಡು, ಕಾಳು-ಕಡಿ, ಕಂಬಳಿ ವ್ಯಾಪಾರ ನಡೆಯುತ್ತಿತ್ತು. ಇದೀಗ ಏಕಾ ಏಕಿ ನಿಡುಗುಂದಿಗೆ ಬಜಾರ ವರ್ಗಾಯಿಸಲಾಗಿದೆ. ಇದರಿಂದ ಕುರಿಗಾರರು ಮತ್ತಿತರ ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗಿದೆ. ನಿಡಗುಂದಿಗೆ ಬಂದು ಕುರಿ ವ್ಯಾಪಾರ ಮಾಡುವುದಕ್ಕೆ ಕಷ್ಟವಾಗಿದೆ. ಹೀಗಾಗಿ ಬಸವನಬಾಗೇವಾಡಿಯಲ್ಲಿಯೇ ಎಪಿಎಂಸಿ ಆರಂಭಿಸಬೇಕೆಂದರು.
    ನಂದಿಹಾಳದ ಕನಕ ಯುವಕ ಸಂಘದ ಅಧ್ಯಕ್ಷ ಶರಣು ಕಾಟಕರ, ಶ್ರೀಶೈಲ ನಾಗರಾಳ, ಭೀರಪ್ಪ ಜುಮನಾಳ, ಕಾಂತಪ್ಪ ಹಿರೇಕುರುಬರ, ಶೇಖಪ್ಪ ಬೀರಲದಿನ್ನಿ, ಸಂತೋಷ ಮಳ್ಳಿ, ಬೀರಪ್ಪ ಉತ್ನಾಳ, ನಿಂಗಪ್ಪ ನಾಗರಾಳ, ನಾಗಪ್ಪ ಬಿಜಾಪುರ, ಲಕ್ಷ್ಮಣ ಮಳ್ಳಿ, ಶಂಕರ ನಾಗರಾಳ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts