More

    ಬಿಜೆಪಿ ಜನವಿರೋಧಿ ಸರ್ಕಾರ

    ವಿಜಯಪುರ: ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ರೈತ ವಿರೋಧಿ ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಿದ್ದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಗುರುವಾರ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
    ಮುಖಂಡ ಹಮೀದ್ ಮುಶ್ರೀಫ್ ಮಾತನಾಡಿ, ರಾಜ್ಯ ಸರ್ಕಾರ ಜನ ವಿರೋಧಿ ನೀತಿ ಜಾರಿಗೆ ತರುತ್ತಿದೆ. ಸುಗ್ರೀವಾಜ್ಞೆ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಇದರಿಂದ ಸಮಾಜದ ಕೆಳ ವರ್ಗದ ಜನ ತೀವ್ರ ತೊಂದರೆಗೆ ಸಿಲುಕುವರೆಂದರು.
    ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ ಮಾತನಾಡಿ, ಕರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು ಜನ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳು ಹಣ ಸುಲಿಗೆಗೆ ಇಳಿದಿವೆ ಎಂದು ಆರೋಪಿಸಿದರು.
    ಮುಖಂಡರಾದ ಕೆ.ಎ್. ಅಂಕಲಗಿ, ರೇವಣಸಿದ್ದ ಭಾವಿಕಟ್ಟಿ, ವಿಜಯಕುಮಾರ ಘಾಟಗೆ, ಸುರೇಶ ಘೊಣಸಗಿ, ವಿದ್ಯಾರಾಣಿ ತುಂಗಳ, ಅಬ್ದುಲ್ ಖಾದರ ಖಾದೀಮ, ಸುಜಾತಾ ಕಳ್ಳಿಮನಿ, ಚಾಂದಸಾಬ ಗಡಗಲಾವ, ಜಮೀರ ಬಕ್ಷಿ, ಶ್ರೀದೇವಿ ಉತ್ಲಾಸಕರ, ಗಂಗಾಧರ ಸಂಬಣ್ಣಿ, ರ್ಇಾನ ಶೇಖ, ಸಂತೋಷ ಪಾಟೀಲ, ಸಾಹೇಬಗೌಡ ಬೀರಾದಾರ, ಜಮೀರ ಅಹ್ಮದ ಬಾಗಲಕೋಟ, ಮಲ್ಲನಗೌಡ ಬಿರಾದಾರ, ಡಿ.ಎಚ್. ಕಲಾಲ, ಇಲಿಯಾಸ ಬಗಲಿ, ಗುರಣಗೌಡ ಪಾಟೀಲ, ವಸಂತ ಹೊನಮೊಡೆ ಮತ್ತಿತರರಿದ್ದರು.
    ಪ್ರತಿಭಟನೆಗೂ ಮುನ್ನ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ರಾಜೀವಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆ ಆಚರಿಸಲಾಯಿತು.

    ಬಿಜೆಪಿ ಜನವಿರೋಧಿ ಸರ್ಕಾರ
    ಬಿಜೆಪಿ ಜನವಿರೋಧಿ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts