More

    5 ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹ

    ವಿಜಯಪುರ: ಬಾಕಿ ಇರುವ ಐದು ತಿಂಗಳ ವೇತನ ಪಾವತಿಸಲು ಆಗ್ರಹಿಸಿ ಸಂಯುಕ್ತ ಆಲಮಟ್ಟಿ ಕೆಬಿಜೆಎನ್‌ಎಲ್ ಗಾರ್ಡನ್ ‘ಡಿ’ ಗ್ರುಪ್ ನೌಕರರ ಸಂಘದ ನೇತೃತ್ವ ಮಂಗಳವಾರ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
    ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಎಚ್.ಟಿ. ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕರೊನಾ ಸಂದರ್ಭ ಯಾವ ಕಾರ್ಮಿಕರ ವೇತನ ಬಾಕಿ ಉಳಿಸಿಕೊಳ್ಳದೆ ಪ್ರತಿ ತಿಂಗಳು ಪಾವತಿಸಲು ನಿರ್ದೇಶನ ನೀಡಿದ್ದರೂ ಜಿಲ್ಲೆಯ ಆಲಮಟ್ಟಿ ಗಾರ್ಡನ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ 5 ತಿಂಗಳ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಅವರ ಕುಟುಂಬ ನಿರ್ವಹಣೆಗೆ ತೀವ್ರ ತೊಂದರೆಯಾಗಿದೆ ಎಂದರು.
    ಈವರೆಗೆ ಆಳ್ವಿಕೆ ಮಾಡಿದ ಎಲ್ಲ ಸರ್ಕಾರಗಳು ಈ ದೇಶದ ಸಂಪತ್ತನ್ನು ಲೂಟಿ ಮಾಡುವ ಬಂಡವಾಳಗಾರರ, ಕೋಟ್ಯಧಿಪತಿಗಳ ಸೇವೆ ಮಾಡುತ್ತಿದ್ದಾರೆ. ಆದ್ದರಿಂದ ಈ ಎಲ್ಲ ಸರ್ಕಾರಗಳ ಮೇಲೆ ಯಾವುದೇ ಭರವಸೆ ಇಡದೆ ಸಂದಾನಾತೀತ ಹೋರಾಟ ಬೆಳೆಸುತ್ತ್ತ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವ ಮೂಲಕ ಇಂತಹ ಕಾರ್ಮಿಕ ವಿರೋಧಿ, ಜನವಿರೋಧಿ ಸರ್ಕಾರಗಳನ್ನು ಕಿತ್ತೆಸೆಯಬೇಕೆಂದರು.
    ಸಂಘದ ಉಪಾಧ್ಯಕ್ಷ ದ್ಯಾಮಣ್ಣ ಬಿರಾದಾರ, ಸದಸ್ಯರುಗಳಾದ ಮೀನಾಕ್ಷಿ ರಾಠೋಡ, ಸಿ.ಎ. ಕುಂಬಾರ, ಅಖಂಡೇಶ ಬಡಿಗೇರ, ಅನಿತಾ ಜಾಧವ, ಚಂದ್ರಶೇಖರ ಮಾಳಿ, ಯಮನೂರಿ, ಯಲ್ಲಮ್ಮ ಮತ್ತಿತರರಿದ್ದರು.

    5 ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹ
    5 ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹ
    5 ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts