More

    ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಜೆಡಿಎಸ್

    ವಿಜಯಪುರ: ಉತ್ತರಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಅಲ್ಲಿನ ಸರ್ಕಾರ ಮುಚ್ಚಿ ಹಾಕುವ ಯತ್ನ ನಡೆಸಿದೆ. ಕೂಡಲೇ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ವಿಧಿಸಬೇಕೆಂದು ಜೆಡಿಎಸ್ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
    ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಅತ್ಯಾಚಾರದಂಥ ಘೋರ ಅಪರಾಧವೆಸಗಿರುವ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಸರ್ಕಾರ ವಿನಾಕಾರಣ ಈ ಪ್ರಕರಣದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಹಾಗೂ ಅಪರಾಧಿಗಳ ಪರ ನಿಲುವು ತೆಗೆದುಕೊಳ್ಳುತ್ತಿರುವುದು ಖೇದಕರ ಎಂದರು.
    ಕಾರ್ಯಾಧ್ಯಕ್ಷ ದಿಲಾವರ ಖಾಜಿ ಮಾತನಾಡಿ, ಉತ್ತರಪ್ರದೇಶದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರವನ್ನು ಮುನ್ನಡೆಸಲು ವಿಲರಾಗಿದ್ದಾರೆ. ಸಂತ್ರಸ್ತೆ ಕುಟುಂಬಕ್ಕೆ ಸುರಕ್ಷತೆ ನೀಡಬೇಕು. ಅಪರಾಧಿಗಳಿಗೆ ತಕ್ಷಣವೇ ಶಿಕ್ಷೆಯಾಗಬೇಕೆಂದರು.
    ಮುಖಂಡರಾದ ಚಂದ್ರಕಾಂತ ಹಿರೇಮಠ, ಮಹಮ್ಮದಹುಸೇನ್ ಬಾಗಾಯತ, ಕೌಸರಶೇಖ, ಅರವಿಂದ ಹಂಗರಗಿ, ಸುನೀಲ ರಾಠೋಡ, ಯಾಕೂಬ್ ಕೋಪರ, ಸಿದ್ದು ಕಾಮತ್, ರೇಖಾ ಮಾಶ್ಯಾಳ, ಸ್ನೇಹಾ ಶೆಟ್ಟಿ, ಶಿವಮ್ಮ ವಾಲಿ, ಮಹಾದೇವಿ ತಳಕೇರಿ, ಅನ್ನಪೂರ್ಣ ಬಡಿಗೇರ, ಶಾಮನ ಇನಾಂದಾರ, ಸಾಜೀದ ರಿಸಾಲದ್ದಾರ್, ಸುರೇಶ ಹೆರಕಲ್, ವಿನೋದ ಕೊಟ್ಯಾಳ, ಈರಣ್ಣ ಮೋಟಗಿ, ಮನೋಜ ಬಿರಾದಾರ, ಜಾರ ಕಲಾದಗಿ, ದಿನೇಶ ವಗ್ಯನ್ನವರ, ಸಂದೇಶ ನಾಟೀಕಾರ, ಪಾರ್ವತಿ ಬಿದರಿ, ರುಕ್ಮವ್ವ ಬಿದರಿ, ಎಂ.ಎಂ. ಭಕ್ಷಿ, ಎಂ.ಎಸ್. ಶಿರಗಾರ, ಮುಕದ್ದಸ್ಸ ಇನಾಮದಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts