More

    ಇಂದು ಪ್ರತಿಭಟನಾ ಮೆರವಣಿಗೆ

    ವಿಜಯಪುರ: ಮುರಗೇಶ ನಿರಾಣಿ ಹೆಸರಿನಿಂದ ನಡೆಸಿಕೊಂಡು ಬಂದಿರುವ ಕ್ರೆಡಿಟ್ ಸೌಹಾರ್ದದಲ್ಲಿ ಕೋಟ್ಯಂತರ ರೂ. ಹಣ ತೊಡಗಿಸಿ ವಂಚನೆಗೊಳಗಾದ ಗ್ರಾಹಕರು ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಮಂಗಳವಾರ 7ನೇ ದಿನಕ್ಕೆ ಕಾಲಿರಿಸಿದೆ.
    ಇಲ್ಲಿನ ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿರುವ ಧರಣಿಗೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಡಿ.2ಕ್ಕೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳುತ್ತಿರುವುದಾಗಿ ಧರಣಿ ನೇತೃತ್ವ ವಹಿಸಿರುವ ಅರವಿಂದ ಕುಲಕರ್ಣಿ ತಿಳಿಸಿದರು.

    ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ಅವರು, ಈವರೆಗೆ ಬೆಳಗ್ಗೆ 11 ರಿಂದ ಸಂಜೆ 5ರವರೆಗೆ ಧರಣಿ ನಡೆಸುತ್ತಾ ಬರಲಾಗಿದೆ. ಆದರೆ, ಅಧಿಕಾರಿಗಳು ಧರಣಿಗೆ ಸ್ಪಂದನೆ ನೀಡಿಲ್ಲ. ಹೀಗಾಗಿ ಹೋರಾಟದ ಸ್ವರೂಪ ಭಿನ್ನವಾಗಿಸಲು ನಿರ್ಧರಿಸಲಾಗಿದೆ. ಡಿ. 2 ರಂದು ಬೆಳಗ್ಗೆ 11ಕ್ಕೆ ಧರಣಿ ಸ್ಥಳದಿಂದ ಮೆರವಣಿಗೆ ಹೊರಟು ಮಹಾತ್ಮ ಬಸವೇಶ್ವರ, ಗಾಂಧಿ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಕಚೇರಿ ತಲುಪಿ ಮನವಿ ಸಲ್ಲಿಸಲಾಗುವುದು. ಅದಕ್ಕೂ ಸ್ಪಂದಿಸದಿದ್ದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.

    ಮುಖಂಡ ಸದಾಶಿವ ಬರಟಗಿ, ಮಲ್ಲಿಕಾರ್ಜುನ ಒಡೆಯರ, ಅಬ್ದುಲರಜಾಕ ಹಳ್ಳಿ, ಶಿವಪ್ಪ ಚಂದನವರ, ಹಣಮಂತ ಉಪ್ಪಾರ, ಇಮಾಮಸಾಬ ಚಪ್ಪರಬಂದ, ಮಹಾಂತೇಶ ನಡಕಟ್ಟಿ, ರೇವಣಸಿದ್ದ ಚಾಂದಕವಟೆ, ನಾಮದೇವ ಸೂರ್ಯವಂಶಿ, ಶ್ರೀಮಂತ ಹೊನಕಾಂಬಳೆ, ಈರಣ್ಣ ಕಾರಕೂನ, ಆರ್.ಎಂ. ಹಿರೇಮನಿ, ಬಸಪ್ಪ ಆವೇರಿ, ಶಿವಾನಂದ ಹಾರಿವಾಳ, ಎಸ್.ವಿ. ಜೇವೂರ, ಬಸವರಾಜ ಬಾಡಗಿ, ಅಭಿಷೇಕ ಸೌದಾಗರ, ಐ.ಬಿ. ಸಾರವಾಡ, ಚಂದಪ್ಪ ಮಾವಡಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts