More

    ವೈಜ್ಞಾನಿಕವಾಗಿ ಎರೆಹುಳು ಗೊಬ್ಬರ ತಯಾರಿಸಿ

    ವಿಜಯಪುರ: ಎರೆಹುಳು ಗೊಬ್ಬರವನ್ನು ವೈಜ್ಞಾನಿಕ ರೀತಿಯಲ್ಲಿ ತಯಾರಿಸುವ ಮೂಲಕ ಉತ್ತಮ ಆದಾಯ ಕಂಡುಕೊಳ್ಳಬಹುದು ಎಂದು ವಿಜಯಪುರ ಕೃಷಿ ಮಹಾವಿದ್ಯಾಲಯದ ಕೃಷಿ ವಿಸ್ತರಣಾ ಸಹ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಹೇಳಿದರು.
    ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಎರೆಹುಳು ಗೊಬ್ಬರ ತಯಾರಿಕೆ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ರೈತರು ಸಾವಯವ ಕೃಷಿ ಮಾಡಲು ಅನುಕೂಲವಾಗುವ ಎರೆಹುಳು ಗೊಬ್ಬರ ಜತೆಗೆ ಎರೆಹುಳು ಗೊಬ್ಬರ ಉತ್ಪಾದನೆ ಮಾಡಬೇಕು. ರೈತರು ಎರೆಹುಳು ಗೊಬ್ಬರ ಜತೆಗೆ ಹಸಿರೆಲೆ ಗೊಬ್ಬರ, ಜೈವಿಕ ಗೊಬ್ಬರ, ಕಾಂಪೋಸ್ಟ್ ಗೊಬ್ಬರ ಇತ್ಯಾದಿ ಬಳಕೆ ಮಾಡುವುದರ ಮೂಲಕ ಭೂ ಲವತ್ತತೆ ಹೆಚ್ಚಿಸಬೇಕಿದೆ. ಬೆಳೆಗಳಿಗೆ ಪೋಷಕಾಂಶ ಒದಗುವಂತೆ ಮಾಡಿ ಜನರಿಗೆ ವಿಷಮುಕ್ತ ಆಹಾರ ಒದಗಿಸಬೇಕು ಎಂದು ತಿಳಿಸಿದರು.

    ಕ್ಷೇತ್ರಾಧಿಕಾರಿ ಡಾ.ಜಗನ್ನಾಥ ಓಲೆಕಾರ ಮಾತನಾಡಿ, ರಾಸಾಯನಿಕಗಳ ಬಳಕೆ ಕಡಿಮೆ ಮಾಡಿ ಸಾವಯವ ಗೊಬ್ಬರ ಬಳಕೆ ಜಾಸ್ತಿ ಮಾಡಿ, ಹೆಚ್ಚಿನ ಇಳುವರಿ ಪಡೆಯಿರಿ ಎಂದು ತಿಳಿಸಿದರು. ಡಾ.ಎಂ.ವೈ.ತೆಗ್ಗಿ ಮಾತನಾಡಿ, ಮಣ್ಣಿನ ಲವತ್ತತೆಗಾಗಿ ಎರೆಹುಳು ಗೊಬ್ಬರ ಬಳಕೆ ಮಾಡಬೇಕೆಂದು ತಿಳಿಸಿದರು. ಉಪನ್ಯಾಸಕ ಡಾ.ಪ್ರಕಾಶ್ ಎಚ್.ಟಿ., ಹಿರಿಯ ವಿಜ್ಞಾನಿ ಡಾ. ಶುಭಾ ಎಸ್., ಡಾ.ಶಿವಲಿಂಗಪ್ಪ ಹೊಟಕರ, ಡಾ.ಸಂಗೀತಾ ಜಾಧವ, ಡಾ.ವಿವೇಕ ದೇವರನಾವದಗಿ, ಡಾ.ಅಮೃತರಾಜ ಪಾಟೀಲ, ಡಾ.ಬಸವರಾಜ ಜಮಖಂಡಿ, ಡಾ. ರಮೇಶ ಆಚಾರ್ಯ, ಶ್ರೀಶೈಲ ರಾಠೋಡ, ಬಿ.ಸಿ.ಕೊಲ್ಹಾರ ಸೇರಿದಂತೆ ಬೇರೆ ಬೇರೆ ಗ್ರಾಮಗಳ ರೈತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts