More

    ಕೇನ್ ಕ್ಯಾರಿಯರ್ ಕಾರ್ಯಾರಂಭ

    ವಿಜಯಪುರ: ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರತಿ ದಿನ 5000 ಮೆಟ್ರಿಕ್ ಟನ್ ಹೆಚ್ಚುವರಿಯಾಗಿ ಕಬ್ಬು ಅರೆಯುವ ಸಾಮರ್ಥ್ಯದ ಹೊಸ ಕೇನ್ ಕ್ಯಾರಿಯರ್ ಹಾಗೂ ಮಿಲ್‌ನ ಪ್ರಾಯೋಗಿಕ ಕಾರ್ಯಾರಂಭದ ಪೂಜಾ ಸಮಾರಂಭ ಶುಕ್ರವಾರ ನೆರವೇರಿತು.ಸಾನ್ನಿಧ್ಯ ವಹಿಸಿದ್ದ ಬೀಳೂರು ಮುರುಗೇಂದ್ರ ಸ್ವಾಮೀಜಿ ಮಾತನಾಡಿ, ಈ ಭಾಗದ ರೈತರು ಕಾರ್ಖಾನೆ ಕಟ್ಟುವಲ್ಲಿ ಅವಶ್ಯವಿರುವ ಷೇರು ಸಂಗ್ರಹಣೆಯಲ್ಲಿ ಭಾಗಿಯಾಗಿ ಬದುಕು ಕಟ್ಟಿಕೊಳ್ಳಲು ಶ್ರಮಪಟ್ಟಿದ್ದರಿಂದ ಇಂದು ಕಾರ್ಖಾನೆ ಉತ್ತರೋತ್ತರವಾಗಿ ಬೆಳೆಯಲು ಸಾಧ್ಯವಾಗಿದೆ. ಕಬ್ಬಿನ ಬೀಜ, ಗೊಬ್ಬರ, ಡಿಸೇಲ್, ಪೆಟ್ರೋಲ್ ನೀಡುವುದಲ್ಲದೇ ನಂದಿ ಶಿಕ್ಷಣ ಸಂಸ್ಥೆ, ಹಣಕಾಸು ವ್ಯವಸ್ಥೆಗಾಗಿ ಕಬ್ಬು ಬೆಳೆಗಾರರ ಸಹಕಾರಿ ಬ್ಯಾಂಕ್, ದಿನಸಿ ಅಂಗಡಿ ಸ್ಥಾಪಿಸುವ ಮೂಲಕ ರೈತ ಕುಟುಂಬಗಳು ಸ್ವಾವಲಂಬಿ ಜೀವನ ಸಾಗಿಸಲು ನುಕೂಲ ಕಲ್ಪಿಸಿದೆ ಎಂದರು.

    ಬಿದರಿ-ಸವದತ್ತಿ ಕಲ್ಮಠದ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡುತ್ತ, ಕಾರ್ಖಾನೆ ಆರಂಭದಿಂದ ಅಭಿವೃದ್ಧಿಯತ್ತ ಸಾಗುತ್ತಿದ್ದು, ರೈತರ ಹಾಗೂ ಕಾರ್ಮಿಕರ ಬದುಕು ಸುಂದರವಾಗಿದೆ ಎಂದರು.

    ಮರೇಗುದ್ದಿ ತೋಂಟದಾರ್ಯ ಸ್ವಾಮೀಜಿ, ಬೂದಿಹಾಳದ ಫಕೀರೇಶ್ವರ ಸ್ವಾಮೀಜಿ, ಸಿದ್ರಾಮಯ್ಯಾ ಸ್ವಾಮೀಜಿ ಉಪಸ್ಥಿತರಿದ್ದರು. ಎಂ.ಆರ್.ಹಿರೇಮಠ ಪೂಜಾ ವಿಧಿವಿಧಾನ ನೆರವೇರಿಸಿದರು.

    ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಶಿರಬೂರ, ಉಪಾಧ್ಯಕ್ಷ ಎಚ್.ಆರ್.ಬಿರಾದಾರ, ನಿರ್ದೇಶಕ ತಿಮ್ಮಣ್ಣ ಅಮಲಝರಿ, ಜಿ.ಕೆ.ಕೋನಪ್ಪನವರ, ರಮೇಶ ಶೇಬಾಣಿ, ರಮೇಶ ಜಕರಡ್ಡಿ, ಸಿದ್ದಣ್ಣ ದೇಸಾಯಿ, ವಿ.ಎಚ್.ಬಿದರಿ, ಆರ್.ಪಿ.ಕೊಡಬಾಗಿ, ಹಣಮಂತ ಕೊಣ್ಣೂರ, ರಾಮಪ್ಪ ಹರಿಜನ, ಜಗದೀಶ ಶಿರಾಳಶೆಟ್ಟಿ, ಚನ್ನಪ್ಪ ಜಮಖಂಡಿ, ಸುರೇಖಾ ನಿಡೋಣಿ, ಪ್ರಧಾನ ವ್ಯವಸ್ಥಾಪಕ ವಿ.ಎಸ್.ದೇಸಾಯಿ, ಎಂ.ಎಲ್.ಪಚ್ಚನ್ನವರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts