More

    ಟಿಕೆಟ್ ಅಸಮಧಾನಕ್ಕೆ ಬಿಗ್ ಟ್ವಿಸ್ಟ್! ಸಚಿವ ತಿಮ್ಮಾಪುರ- ವಿಜಯಾನಂದ ಕಾಶಪ್ಪನವರ್​ ಗೌಪ್ಯ ಭೇಟಿ

    ಬಾಗಲಕೋಟೆ: ಲೋಕಸಭಾ ಚುನಾವಣೆ 2024ಕ್ಕೆ ಸ್ಪರ್ಧಿಸಲು ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿದ್ದ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ್​ಗೆ ಟಿಕೆಟ್​ ಘೋಷಣೆ ಮಾಡಲಿಲ್ಲ. ವೀಣಾ ಬದಲಿಗೆ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ್​ಗೆ ಕೊಡಲಾಯಿತು. ಈ ವಿಚಾರಕ್ಕೆ ಅತೀವ ಬೇಸರ ವ್ಯಕ್ತಪಡಿಸಿದ ವೀಣಾ, ಬೆಂಬಲಿಗರ ಎದುರು ಕಣ್ಣೀರಿಟ್ಟರು.

    ಇದನ್ನೂ ಓದಿ: ತಿಂಗಳಿಗೆ ಕೇವಲ 100 ರೂಪಾಯಿ ಹೂಡಿಕೆ ಮಾಡಿ ಲಕ್ಷಾಂತರ ರೂ. ಗಳಿಸುವ ಸುವರ್ಣಾವಕಾಶ ಇಲ್ಲಿದೆ…

    ಕಾಂಗ್ರೆಸ್​ ತಮಗೆ ಟಿಕೆಟ್​ ಕೊಡದಿದ್ದಕ್ಕೆ ಅಸಮಾಧಾನ ಹೊರಹಾಕಿದ ವೀಣಾಗೆ ಬೆಂಬಲಿಗರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಾಥ್ ನೀಡಿದರು. ಆದ್ರೆ, ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾತುಕತೆ ನಡೆಸಿ, ನಿರ್ಧಾರ ಕೈಗೊಳ್ಳುವೆ ಎಂದು ವೀಣಾ ಕಾಶಪ್ಪನವರ್​ ತಿಳಿಸಿದ್ದಾರೆ. ಸದ್ಯ ಟಿಕೆಟ್​ ಅಸಮಾಧಾನಕ್ಕೆ ಬಿಗ್​ ಟ್ವಿಸ್ಟ್​ ಎದುರಾಗಿದ್ದು, ಅಬಕಾರಿ ಸಚಿವ ತಿಮ್ಮಾಪುರ ಮತ್ತು ವಿಜಯಾನಂದ ಕಾಶಪ್ಪನವರ ಗೌಪ್ಯ ಭೇಟಿಯಾಗಿದ್ದಾರೆ.

    ಉಸ್ತುವಾರಿ ಸಚಿವ ತಿಮ್ಮಾಪುರ ಹಾಗೂ ಅಸಮಧಾನಿತ ಶಾಸಕ ವಿಜಯಾನಂದ ಕಾಶಪ್ಪನವರ ಗೌಪ್ಯ ಭೇಟಿಯಾಗಿದ್ದು, ಸಚಿವ, ಶಾಸಕರ ನಡುವೆ ಹೆಚ್ಚಿನ ಸಮಯ ಮಾತುಕತೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಒಳಬೇಗುದಿಗೆ ಹಾಗೂ ಕಾಶಪ್ಪನವರ ಅಸಮಾಧಾನ ಶಮನಗೊಳಿಸಲು ಸಚಿವ ಆರ್.ಬಿ.ತಿಮ್ಮಾಪುರ ಮುಂದಾಗಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: 2ರೂ. ಚಿಲ್ಲರೆಗೆ ಪ್ರಯಾಣಿಕನ ಕೊಲೆ ಮಾಡಿ 8 ವರ್ಷ ಜೈಲಲ್ಲಿದ್ದ ಆಟೋ ಚಾಲಕನಿಗೆ ಮತ್ತೆ 5 ವರ್ಷ ಜೈಲು!

    ಮಾರ್ಚ್ 28ರಂದು ಸಿಎಂ ಸಿದ್ದರಾಮಯ್ಯ ಜತೆ ಮಾತನಾಡಲು ತಿಮ್ಮಾಪುರ ಸಮಯ ಪಡೆದಿದ್ದಾರೆ. ಇಂದು ಸಂಜೆ ಅಂತಿಮ ನಿರ್ಣಯ ಪ್ರಕಟಿಸಲು ಪಂಚಮಸಾಲಿ ಸಮಾಜದ ಸಭೆ ಕರೆದಿದ್ದಾರೆ. ವಿಜಯಾನಂದ ಕಾಶಪ್ಪನವರ ಭೇಟಿ ಬಳಿಕ ಮಾತನಾಡಿದ ಅವರು, “ಜಿಲ್ಲಾ ಕಾಂಗ್ರೆಸ್​ನಲ್ಲಿ ಟಿಕೆಟ್ ವಿಚಾರವಾಗಿ ಯಾವುದೇ ಬಿಕ್ಕಟ್ಟಿಲ್ಲ. ಕಾಶಪ್ಪನವರ ಕುಟುಂಬ ಮೊದಲಿನಿಂದಲೂ ಕಾಂಗ್ರೆಸ್ ಜತೆಗಿದ್ದ ಕುಟುಂಬ. ಟಿಕೆಟ್ ಸಿಗದೇ ಅಸಮಾಧಾನ ಆಗೋದು ಬೇಡ” ಎಂದರು.

    “ಸಿಎಂ ಜತೆ ಮಾತನಾಡಿಸಿ ಸಮಸ್ಯೆ ಬಗೆಹರಿಸಲಿದ್ದೇವೆ. ಶೀಘ್ರ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಕಾಂಗ್ರೆಸ್ಸಿಗರು ಎಲ್ಲರೂ ಸೇರಿ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ. ಈ ಬಗ್ಗೆ ಕಾರ್ಯಕರ್ತರಿಗೆ ಯಾವುದೇ ಆತಂಕ ಬೇಡ. ಬಾಗಲಕೋಟೆಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಗೆಲ್ಲಲಿದ್ದಾರೆ” ಎಂದರು.

    ಶಾರುಖ್, ಕಾಜೋಲ್ ತಿರಸ್ಕರಿಸಿದ ಈ ಸಿನಿಮಾ ಗಳಿಸಿದ್ದು 460 ಕೋಟಿ ರೂ., 3 ರಾಷ್ಟ್ರೀಯ ಪ್ರಶಸ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts