More

    ಇನ್ನಿಬ್ಬರು ಸ್ಟಾರ್ ನಟರು ಸೇರ್ಪಡೆಯಾದರಂತೆ ಕಮಲ್ ಹಾಸನ್ ಹೊಸ ಚಿತ್ರಕ್ಕೆ …

    ಚೆನ್ನೈ: ಕಮಲ್​ ಹಾಸನ್​ ಅಭಿನಯದ ವಿಕ್ರಮ್​ ಚಿತ್ರವು ಕಳೆದ ವರ್ಷದ ಕೊನೆಯಲ್ಲೇ ಪ್ರಾರಂಭವಾಗಬೇಕಿತ್ತು. ಚಿತ್ರದ ಫಸ್ಟ್​ಲುಕ್​ ಟೀಸರ್​ ಸಹ ಬಿಡುಗಡೆಯಾಗಿ, ಇನ್ನೇನು ಚಿತ್ರೀಕರಣ ಪ್ರಾರಂಭವಾಗುವಷ್ಟರಲ್ಲಿ ತಮಿಳುನಾಡಿನಲ್ಲಿ ಚುನಾವಣೆ ಘೋಷಣೆಯಾಯಿತು.

    ಇನ್ನಿಬ್ಬರು ಸ್ಟಾರ್ ನಟರು ಸೇರ್ಪಡೆಯಾದರಂತೆ ಕಮಲ್ ಹಾಸನ್ ಹೊಸ ಚಿತ್ರಕ್ಕೆ …ಇದನ್ನೂ ಓದಿ: 94 ದಿನ ಮುಗಿಸಿದ್ದ ಬಿಗ್​ಬಾಸ್​ಗೆ ಸಡನ್​ ಬ್ರೇಕ್​! ಅಧಿಕಾರಿಗಳೇ ಬಂದು ಸೀಲ್​ ಮಾಡಿಬಿಟ್ಟರು!

    ಇದೀಗ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾಗಿದೆ. ಕಮಲ್​ ಹಾಸನ್​ ಚುನಾವಣೆಗಳಲ್ಲಿ ಸೋತಿದ್ದೂ ಆಗಿದೆ. ಇದೀಗ ಅವರು ಅಭಿನಯಕ್ಕೆ ವಾಪಸ್ಸಾಗುತ್ತಿದ್ದಾರೆ. ಆಗ ನಿಂತಿದ್ದ ವಿಕ್ರಮ್​ ಚಿತ್ರವನ್ನು ಪುನಃ ಪ್ರಾರಂಭಿಸಲು ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಸಹ ಪ್ರಾರಂಭವಾಗಲಿದೆ.

    ಈ ಮಧ್ಯೆ, ಚಿತ್ರಕ್ಕೆ ದಕ್ಷಿಣ ಭಾರತದ ಸ್ಟಾರ್​ ನಟರು, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿದೆ. ತಮಿಳಿನ ವಿಜಯ್​ ಸೇತುಪತಿ ಮತ್ತು ಮಲಯಾಳಂ ನಟ ಫಹಾದ್​ ಫಾಸಿಲ್​ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಾರಂತೆ. ಆದರೆ, ಅವರ ಪಾತ್ರವೇನು ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ. ಅವರಿಬ್ಬರ ಪಾತ್ರಗಳ ಬಗ್ಗೆ ಇನ್ನೂ ಮಾಹಿತಿ ಇಲ್ಲವಾದರೂ, ಕಮಲ್​ ಹಾಸನ್​ ಅವರು ಈ ಚಿತ್ರದಲ್ಲಿ ಪೊಲೀಸ್​ ಅಧಿಕಾರಿಯಾಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಬಡವರ ಹತ್ತಿರ ಭಿಕ್ಷೆ ಕೇಳಬೇಡಿ … ಕಂಗನಾ ಟಾಂಗ್ ಕೊಟ್ಟಿದ್ದು ಯಾರಿಗೆ?

    ವಿಕ್ರಮ್​ ಚಿತ್ರವನ್ನು ಲೋಕೇಶ್​ ಕನಕರಾಜ್​ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಸಹ ಅವರದ್ದೇ. ಇದಕ್ಕೂ ಮುನ್ನ, ವಿಜಯ್​ ಅಭಿನಯದ ಮಾಸ್ಟರ್​ ಚಿತ್ರವನ್ನು ನಿರ್ದೇಶಿಸಿದ್ದರು ಲೋಕೇಶ್​. ಚಿತ್ರ ಹಿಟ್​ ಆಗಿತ್ತು. ಇದೀಗ, ಅವರು ಕಮಲ್​ ಹಾಸನ್​ ಅಭಿನಯದ ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಈ ಚಿತ್ರವನ್ನು ಕಮಲ್​ ಹಾಸನ್​ ಅವರೇ ರಾಜ್​ಕಮಲ್​ ಫಿಲ್ಮ್ಸ್​ ಇಂಟರ್​ನ್ಯಾಷನಲ್​ ಸಂಸ್ಥೆಯಡಿ ನಿರ್ಮಿಸುತ್ತಿದ್ದಾರೆ.

    ಆಕ್ಸಿಜನ್ ಬ್ಯಾಂಕ್ ಸ್ಥಾಪಿಸಲು ಮುಂದಾದ ಟಾಲಿವುಡ್ ನಟ ಚಿರಂಜೀವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts