More

    ಶಿವಾಜಿ ಮಹಾರಾಜರ ಕೋಟೆ ಮೇಲೆ ಮದ್ಯಾಪಾನ ಮಾಡುವವರನ್ನು ಹುಡುಕಿ ಹೊಡೆಯುತ್ತಿರುವ ಗ್ಯಾಂಗ್​; 11 ಯುವಕರನ್ನು ಅರೆಬೆತ್ತಲೆಗೊಳಿಸಿ ಥಳಿತ

    ಮುಂಬೈ: ಮಹಾರಾಷ್ಟ್ರದ ವಿಕಟ್​ಗಡ್​ನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಕೋಟೆಯ ಬಳಿ ಹೊಸವರ್ಷ ಆಚರಣೆಯ ನೆಪದಲ್ಲಿ ಮದ್ಯಪಾನ ಮಾಡುತ್ತಿದ್ದ ಯುವಕರ ಮೇಲೆ ತಾವು ಶಿವಾಜಿ ಮಹಾರಾಜರ ಫಾಲೋವರ್ಸ್​ ಎಂದು ಹೇಳಿಕೊಂಡು ಬಂದ ಗುಂಪೊಂದು ಹಲ್ಲೆ ನಡೆಸಿದೆ.

    ಸುಮಾರು 11 ಯುವಕರನ್ನು ಅರೆಬೆತ್ತಲೆಗೊಳಿಸಿ, ಅವರನ್ನು ಮೊಳಕಾಲ ಮೇಲೆ ಕೂರಿಸಿ ಬಳಿಕ ಹಲ್ಲೆ ನಡೆಸಲಾಗಿದೆ. ಈ ವಿಡಿಯೋ ಈಗ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ನೋಡಿದ ಪೊಲೀಸರು ಹಲ್ಲೆ ನಡೆಸಿದ ಸ್ವಯಂಘೋಷಿತ ಕೋಟೆ ರಕ್ಷಕರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

    ಬರೀ ಇದೊಂದೇ ಅಲ್ಲದೆ, ಶಿವಾಜಿ ಕೋಟೆ ಮೇಲೆ ಮದ್ಯಪಾನ ಮಾಡುವವರನ್ನು ಗುಂಪೊಂದು ಥಳಿಸುತ್ತಿರುವ ಅನೇಕ ವಿಡಿಯೋಗಳು ಯೂಟ್ಯೂಬ್​ನಲ್ಲಿ ವೈರಲ್​ ಆಗಿದ್ದು, ಹಲ್ಲೆಕೋರೆಲ್ಲ ಒಂದೇ ಗುಂಪಿನವರಾ? ಅಥವಾ ಬೇರೆಯವರಾ? ಎಷ್ಟು ಜನರಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಶಿವಾಜಿಕೋಟೆಯ ಬೇರೆಬೇರೆ ಸ್ಥಳಗಳಲ್ಲಿ ಚಿತ್ರೀಕರಿಸಲಾದ ವಿಡಿಯೋಗಳು ಹಲವು ಇದ್ದು, ಯಾರಾದರೂ ಅಲ್ಲಿ ಮದ್ಯಪಾನ ಮಾಡುತ್ತಿರುವುದನ್ನು ನೋಡಿದರೆ ಸಾಕು ಅವರ ಬಳಿ ಹೋಗುವ ಈ ಗುಂಪು ಕ್ಷಮೆ ಕೇಳುವಂತೆ ಒತ್ತಾಯಿಸುತ್ತದೆ ಮತ್ತು ಅವರಿಗೆ ಮನಬಂದಂತೆ ಥಳಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಅದರಲ್ಲೂ ಪೊಲೀಸರ ಮೇಲೆ ಇವರು ಹಲ್ಲೆ ನಡೆಸಿರುವ ವಿಡಿಯೋ ಕೂಡ ವೈರಲ್ ಆಗಿದೆ.

    ಈಗ ವೈರಲ್​ ಆದ ವಿಡಿಯೋದಲ್ಲಿ 11 ಮಂದಿ ಯುವಕರನ್ನು ಅರೆಬೆತ್ತಲೆ ಮಾಡಿದ್ದಲ್ಲದೆ ಕ್ಷಮೆ ಕೇಳಿಸಲಾಗಿದೆ. ಇನ್ನೆಂದೂ ಕೋಟೆಗೆ ಬಂದು ಮದ್ಯಸೇವನೆ ಮಾಡುವುದಿಲ್ಲ, ಶಿವಾಜಿ ಮಹಾರಾಜರನ್ನು ಗೌರವಿಸುತ್ತೇವೆ ಯುವಕರು ಹೇಳಿದ ನಂತರ ಅವರನ್ನು ಬಿಡಲಾಗಿದೆ.

    1949ರ ಬಾಂಬೆ ನಿಷೇಧ ಕಾಯ್ದೆಯ ಸೆಕ್ಷನ್​ 140 ರ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಹಾರಾಷ್ಟ್ರದ ಶಿವಾಜಿ ಕೋಟೆ ಜವಾಬ್ದಾರಿಯನ್ನು ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ವಹಿಸಿಕೊಂಡಿಲ್ಲ. ಇನ್ನೂ ಇದರ ಸುಪರ್ಧಿ ಜಿಲ್ಲಾಡಳಿತದ ಕೈಯಲ್ಲೇ ಇದೆ.  (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts