More

    ಜ್ಞಾನವೃದ್ಧಿಗೆ ‘ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ’ ಪೂರಕ

    ಗುರುಪುರ: ಗುರುಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿಗಳಿಗೆ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ಸಹಯೋಗದಲ್ಲಿ ‘ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ’ ಪುರವಣಿಯನ್ನು ಶನಿವಾರ ವಿತರಿಸಲಾಯಿತು.

    ವಿದ್ಯಾರ್ಥಿಗಳಿಗೆ ವಿತರಿಸಲಾಗುವ ಒಂದು ವರ್ಷದ ವಿದ್ಯಾರ್ಥಿ ಉದ್ಯೋಗ ಮಿತ್ರದ ಪ್ರಾಯೋಜಕತ್ವ ವಹಿಸಿರುವ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ ಮಾತನಾಡಿ, ನಾವು ವಿದ್ಯಾರ್ಥಿಗಳಿದ್ದಾಗ ಇಂತಹ ವ್ಯವಸ್ಥೆ ಇರಲಿಲ್ಲ. ಪತ್ರಿಕೆ ಖರೀದಿಸಿ ಓದುವುದೇ ಕಷ್ಟವಾಗಿತ್ತು. ಸಾಮಾನ್ಯಜ್ಞಾನ ವೃದ್ಧಿಸಿಕೊಳ್ಳಲು ಈ ಪುರವಣಿ ಪೂರಕವಾಗಿದೆ. ವಿದ್ಯಾರ್ಥಿಗಳ ಓದಿಗೆ ನೆರವಾಗುವ ಪತ್ರಿಕೆಯ ಕೆಲಸ ಶ್ಲಾಘನೀಯವಾಗಿದ್ದು, ಇದಕ್ಕೆ ಸಂಘದ ಸಂಪೂರ್ಣ ಬೆಂಬಲವಿದೆ ಎಂದರು.

    ವಿಜಯವಾಣಿ ವರದಿಗಾರ ಧನಂಜಯ ಗುರುಪುರ ಮಾತನಾಡಿ, ಈಗಿನ ಶಾಲಾ ಮಕ್ಕಳಿಗೆ ಸರ್ಕಾರ ಮತ್ತು ಸಂಘ-ಸಂಸ್ಥೆಗಳಿಂದ ಸಾಕಷ್ಟು ನೆರವು ಸಿಗುತ್ತಿದೆ. ವಿಜಯವಾಣಿ ವಿದ್ಯಾರ್ಥಿ ಮಿತ್ರ ಮಕ್ಕಳ ಜ್ಞಾನಶಕ್ತಿ ಹೆಚ್ಚಿಸಿ, ಅವರ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯಲು ಸಹಕಾರಿಯಾಗಲಿದೆ. ಸಾಮಾನ್ಯಜ್ಞಾನಕ್ಕೆ ಪೂರಕವಾದ ಈ ಪುರವಣಿ ಭವಿಷ್ಯದಲ್ಲಿ ಓದುವ ಆಸಕ್ತಿ ಹೆಚ್ಚಿಸಿಕೊಳ್ಳಲು ನೆರವಾಗಲಿದೆ ಎಂದರು.

    ಗುರುಪುರ ವ್ಯ.ಸೇ.ಸ.ಸಂಘದ ನಿರ್ದೇಶಕಿ ನಳಿನಿ ಶೆಟ್ಟಿ, ಮುಖ್ಯ ಶಿಕ್ಷಕ ಬಾಬು ಪಿ.ಎಂ., ವಿಜಯವಾಣಿ ಹಿರಿಯ ಉಪಸಂಪಾದಕ ಮೋಹನದಾಸ ಮರಕಡ, ಪ್ರಸರಣ ವಿಭಾಗದ ಎಕ್ಸಿಕ್ಯೂಟಿವ್ ಸೂರಜ್ ಶೆಣೈ ಉಪಸ್ಥಿತರಿದ್ದರು. ಶಿಕ್ಷಕಿ ಸಂಧ್ಯಾರಾಣಿ ವಂದಿಸಿದರು.

    ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘವು ಸರ್ಕಾರಿ ಮಕ್ಕಳ ಓದಿಗೆ ನೆರವಾಗುವ ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಉದ್ಯೋಗ ಮಿತ್ರ ಪುರವಣಿ ಒದಗಿಸುತ್ತಿದ್ದು, ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು.
    – ಬಾಬು ಪಿ.ಎಂ., ಮುಖ್ಯ ಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts