More

    ಕನ್ನಡದಲ್ಲೂ ವಿದ್ಯಾಸುಂದರಿ ಬೆಂಗಳೂರು ನಾಗರತ್ಮಮ್ಮ

    ಬೆಂಗಳೂರು: ಬೆಂಗಳೂರು ನಾಗರತ್ನಮ್ಮ ಅವರ ಕುರಿತು ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ಒಂದು ಚಿತ್ರ ಮಾಡುತ್ತಿರುವ ವಿಷಯ ಕೆಲವು ತಿಂಗಳುಗಳಿಂದ ಸುದ್ದಿಯಾಗುತ್ತಲೇ ಇದೆ. ಹೊಸ ವಿಷಯವೆಂದರೆ, ಈ ಚಿತ್ರಕ್ಕೆ ಸಮಂತಾ ನಾಯಕಿಯಾಗಿ ಆಯ್ಕೆಯಾಗಿದ್ದು, ಈ ವರ್ಷದ ಕೊನೆಯಲ್ಲಿ ಚಿತ್ರ ಪ್ರಾರಂಭವಾಗುವ ಸಾಧ್ಯತೆ ಇದೆ.

    ಒಂದು ಕಡೆ, ಸಿಂಗೀತಂ ಶ್ರೀನಿವಾಸ ರಾವ್ ಅವರು ಚಿತ್ರ ಪ್ರಾರಂಭಿಸುವುದಕ್ಕೆ ತಯಾರಿ ನಡೆಸುತ್ತಿದ್ದರೆ, ಇನ್ನೊಂದು ಕಡೆ ಬೆಂಗಳೂರು ನಾಗರತ್ನಮ್ಮ ಅವರ ಕುರಿತು ಕನ್ನಡದಲ್ಲಿ ಚಿತ್ರ ಮಾಡುವ ಪ್ರಯತ್ನ ಬಹಳ ವರ್ಷಗಳಿಂದ ನಡೆಯುತ್ತಲೇ ಇದೆ ಎಂಬ ವಿಷಯ ಗೊತ್ತಾ? ಗೊತ್ತಿಲ್ಲದಿದ್ದರೆ ಇಲ್ಲಿ ಕೇಳಿ. ಹಿರಿಯ ನಿರ್ದೇಶಕ ನಾಗಾಭರಣ ಅವರು ಹಲವು ವರ್ಷಗಳಿಂದ ಚಿತ್ರ ಮಾಡುವ ಪ್ರಯತ್ನ ಮಾಡುತ್ತಿದ್ದು, ಮೊದಲ ಹಂತವಾಗಿ ಈ ವರ್ಷದ ಫೆಬ್ರವರಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ’ ಎಂಬ ಹೆಸರನ್ನೂ ರಿಜಿಸ್ಟರ್ ಮಾಡಿಸಿದ್ದಾರೆ.

    ಇದನ್ನೂ ಓದಿ: ಛಾಪಾ ಕಾಗದದಲ್ಲಿ ಏನೂ ಬೇಡವೆಂದು ತಾಯಿ ಬರೆದರೆ ಮಗುವಿಗೆ ಜೀವನಾಂಶ ಸಿಗುವುದಿಲ್ಲವೇ?

    ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಟಿ.ಎಸ್. ನಾಗಾಭರಣ, ‘ವಿ. ಶ್ರೀರಾಮ್ ಎನ್ನುವವರು ನಾಗರತ್ನಮ್ಮ ಅವರನ್ನು ಕುರಿತು ‘ದೇವದಾಸಿ ಆಂಡ್ ದಿ ಸೈಂಟ್’ ಎಂಬ ಪುಸ್ತಕವನ್ನು 2007ರಲ್ಲಿ ಪ್ರಕಟಿಸಿದರು. 2009ರಲ್ಲಿ ಅದನ್ನು ಓದುವ ಅವಕಾಶ ಸಿಕ್ಕಿತು. ಆಗಿನಿಂದ ಚಿತ್ರ ಮಾಡುವ ಯೋಚನೆಯಿತ್ತು. ಅದು ಕಾರ್ಯರೂಪಕ್ಕೆ ಬಂದಿದ್ದು 2018ರಲ್ಲಿ. ನಟಿ ಮಾಳವಿಕಾ ಅವರು ಚಿತ್ರ ನಿರ್ವಿುಸುವುದಕ್ಕೆ ಮುಂದೆ ಬಂದಿದ್ದರು. ಆಗ ಚಿತ್ರದ ಕೆಲಸಗಳು ಅಧಿಕೃತವಾಗಿ ಶುರುವಾಯಿತು. ಆದರೆ, ಮಾಳವಿಕಾ ಅವರಿಗೆ ಕಾರಣಾಂತರಗಳಿಂದ ಚಿತ್ರ ನಿರ್ವಿುಸುವುದು ಸಾಧ್ಯವಾಗಲಿಲ್ಲ. ಆದರೂ ನಾವು ಕೆಲಸ ಮುಂದುವರಿಸಿದ್ದೇವೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚನೆಯಲ್ಲಿ ಹಿರಿಯ ಪತ್ರಕರ್ತರಾದ ಮುರಳೀಧರ ಖಜಾನೆ ಜತೆಯಾಗಿದ್ದಾರೆ. ಈಗ 23ನೇ ವರ್ಷನ್​ನ ಕೆಲಸ ನಡೆಯುತ್ತಿದ್ದು, ಚಿತ್ರಕಥೆ ಸಂಪೂರ್ಣ ತೃಪ್ತಿಯಾದ ನಂತರ, ಚಿತ್ರವನ್ನು ಅಧಿಕೃತವಾಗಿ ಘೊಷಿಸಲಿದ್ದೇವೆ’ ಎನ್ನುತ್ತಾರೆ ನಾಗಾಭರಣ.

    ಇದನ್ನೂ ಓದಿ: ಮಂಜುನಾಥ ಒಎಲ್​ಎಕ್ಸ್​ನಲ್ಲಿ ಜಾಹೀರಾತು ಹಾಕಿ ವಂಚಿಸ್ತಾ ಇದ್ದದ್ದು ಯಾಕೆ?  

    ಮೂರು ಕೃತಿ ಆಧರಿಸಿ ಸಿನಿಮಾ: ‘ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ’ ಚಿತ್ರವನ್ನು ಮೂರು ಕೃತಿಗಳನ್ನಾಧರಿಸಿ ತಯಾರಿಸಲಾಗುತ್ತಿದೆಯಂತೆ. ಶ್ರೀರಾಮ್ ಅವರ ‘ದೇವದಾಸಿ ಆಂಡ್ ದಿ ಸೈಂಟ್’, ಮಲೆಯೂರು ಗುರುಸ್ವಾಮಿ ಅವರ ‘ಕಪಿಲೆ ಹರಿದಳು ಕಡಲಿಗೆ’ ಮತ್ತು ಜಗದೀಶ್ ಕೊಪ್ಪ ಅವರ ‘ಗಟ್ಟಿದನಿಯ ದಿಟ್ಟಗಾಯಕಿ’ ಎಂಬ ಕೃತಿಗಳ ಸ್ಪೂರ್ತಿ ಈ ಚಿತ್ರಕ್ಕಿದೆ. ಇದರ ಜತೆಗೆ ನಾಗರತ್ನಮ್ಮ ಅವರ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವ ಬಿ.ವಿ.ಕೆ. ರಂಗರಾವ್, ಡಾ. ರಮಾ ಕೌಸಲ್ಯ ಮುಂತಾದವರಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಿ, ಈ ಚಿತ್ರ ಮಾಡಲಾಗುತ್ತಿದೆಯಂತೆ.

    ಇದನ್ನೂ ಓದಿ: ನಟಿ ಶರ್ವಿುಳಾ ಮಾಂಡ್ರೆಗೆ ಕ್ಲೀನ್​ಚಿಟ್: ಹಾಗಾದ್ರೆ ಆರೋಪಿ ಯಾರು?

    10 ಪ್ರದರ್ಶನ ಕಂಡ ನಾಗರತ್ನಮ್ಮ ನಾಟಕ: ಈಗಾಗಲೇ ‘ಬೆಂಗಳೂರು ನಾಗರತ್ನಮ್ಮ’ ಎಂಬ ನಾಟಕವನ್ನು ನಾಗಾಭರಣ ರೂಪಿಸಿದ್ದಾರೆ. ಬೆನಕ ಮತ್ತು ಸಂಗೀತ ಸಂಭ್ರಮ ತಂಡಗಳು ರೂಪಿಸಿರುವ ಈ ನಾಟಕ, ಕಳೆದ ಡಿಸೆಂಬರ್​ನಲ್ಲೇ ಚೌಡಯ್ಯ ಮೆಮೋರಿಯಲ್ ಹಾಲ್​ನಲ್ಲಿ ಮೊದಲ ಪ್ರದರ್ಶನ ಕಂಡಿದೆ. ಇದುವರೆಗೂ 10 ಪ್ರದರ್ಶನಗಳನ್ನು ಕಂಡಿರುವ ಈ ನಾಟಕವನ್ನು ಮುಂಬರುವ ಅಕ್ಕಾ ಸಮ್ಮೇಳನದಲ್ಲಿ ಸ್ಕಿ›ೕನ್ ಮಾಡಲಾಗುತ್ತದೆ ಎಂದು ನಾಗಾಭರಣ ಹೇಳಿದ್ದಾರೆ.

    25 ಲಕ್ಷ ರೂಪಾಯಿ ಪ್ರೈಸ್ ಬಂದಿದೆ ಎಂದು ಬ್ಲ್ಯಾಕ್​ಮೇಲ್ ಶುರುಮಾಡಿದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts