More

    VIDEO| ಲಡಾಖ್​ನಲ್ಲಿ ಜಗತ್ತಿನ ಅತಿದೊಡ್ಡ ತ್ರಿವರ್ಣ ಧ್ವಜ ಅನಾವರಣ… ಗಾಂಧಿ ಜಯಂತಿ ಸ್ಪೆಷಲ್!

    ಲೇಹ್​​: ಸ್ವಾತಂತ್ರ್ಯದಿನದ ಅಮೃತಮಹೋತ್ಸವದ ಅಂಗವಾಗಿ ಹಾಗೂ ಇಂದಿನ ಗಾಂಧಿ ಜಯಂತಿಯ ಸಂದರ್ಭದಲ್ಲಿ ಖಾದಿಯಿಂದ ತಯಾರಾದ ಅತಿದೊಡ್ಡ ಭಾರತ ಧ್ವಜವನ್ನು ಲಡಾಖ್​ನಲ್ಲಿ ಅನಾವರಣಗೊಳಿಸಲಾಯಿತು. 225 ಅಡಿ ಉದ್ದ ಮತ್ತು 150 ಅಡಿ ಅಗಲ ಇರುವ ತ್ರಿವರ್ಣ ಧ್ವಜವನ್ನು ಲೇಹ್​ನ ವಿಶಾಲ ಶಿಖರವೊಂದರ ಮೇಲೆ ಸ್ಥಾಪಿಸಲಾಗಿದೆ.

    ಈ ತ್ರಿವರ್ಣ ಧ್ವಜವು 1,000 ಕೆಜಿ ತೂಕ ಇದ್ದು, ಮುಂಬೈನ ಖಾದಿ ಡೈಯರ್ಸ್​ ಅಂಡ್​ ಪ್ರಿಂಟರ್ಸ್​ನವರು ಇದನ್ನು ತಯಾರಿಸಿದ್ದಾರೆ. ಲೇಹ್​ನಲ್ಲಿ ಕಾರ್ಯನಿರ್ವಹಿಸುವ 57 ಇಂಜಿನಿಯರ್ಸ್​ ರೆಜಿಮೆಂಟ್​ನವರು ಇದನ್ನು ಮುಂಬೈನಿಂದ ಲಡಾಖ್​ಗೆ ತಂದು ಶಿಖರ ಮೇಲೆ ಸ್ಥಾಪಿಸುವ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

    ಈ ಧ್ವಜದ ಅನಾವರಣಕ್ಕಾಗಿ ಇಂದು ಬೆಳಿಗ್ಗೆ ಲೇಹ್​ ಪಟ್ಟಣದ ಫೈರ್​ ಅಂಡ್ ಫ್ಯೂರಿ ಕೋರ್​ ಪ್ರಾಂಗಣದಲ್ಲಿ ವಿಶೇಷ ವೇದಿಕೆ ನಿರ್ಮಿಸಲಾಗಿತ್ತು. ಲಡಾಖ್​ನ ಉಪರಾಜ್ಯಪಾಲ ಆರ್​.ಕೆ.ಮಾಥುರ್​ ಅವರು ವೇದಿಕೆಯಿಂದ ಬಟನ್​ ಒತ್ತಿ ಈ ಧ್ವಜದ ವಿದ್ಯುಕ್ತ ಅನಾವರಣ ಮಾಡಿದರು. ವಾಯುಸೇನೆಯ ಹೆಲಿಕಾಪ್ಟರ್​ಗಳಿಂದ ಧ್ವಜದ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಭಾರತೀಯ ಸೇನಾ ಮುಖ್ಯಸ್ಥ ಮನೋಜ್​ ಮುಕುಂದ್​ ನರವಣೆ ಮತ್ತು ಹಿರಿಯ ಸೇನಾಧಿಕಾರಿಗಳು ಭಾಗವಹಿಸಿದರು. (ಏಜೆನ್ಸೀಸ್)

    ಮತ್ತೆ ಏರಿತು ಇಂಧನ ಬೆಲೆ; ಪೆಟ್ರೋಲ್​-ಡೀಸೆಲ್ ಇನ್ನೂ ದುಬಾರಿ

    VIDEO| ಅಂಡರ್​ವಾಟರ್​ ಜಾವೆಲಿನ್​! ಚಿನ್ನದ ಹುಡುಗ ನೀರಜ್​ ಚೋಪ್ರಾರ ಈ ವಿಡಿಯೋ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts