More

    VIDEO| ಚಲಿಸುವ ರೈಲಿನಿಂದ ಜಿಗಿದು ಸಾವಿನ ಕದ ತಟ್ಟಿಬಂದ ಮಹಿಳೆ

    ಕೊಲ್ಕತಾ: ನಿಲ್ದಾಣದಿಂದ ರೈಲು ಹೊರಟು ವೇಗ ಪಡೆದ ಮೇಲೆ ಜಿಗಿದು ಇಳಿಯಲು ಪ್ರಯತ್ನಿಸಿದ ಇಬ್ಬರು ಮಹಿಳೆಯರ ವಿಡಿಯೋ ತುಣುಕೊಂದು ಜಾಲತಾಣದಲ್ಲಿ ವೈರಲ್​ ಆಗಿದೆ. ಇವರಲ್ಲಿ ಒಬ್ಬ ಮಹಿಳೆ ರೈಲು ಮತ್ತು ಪ್ಲಾಟ್​ಫಾರಂನ ನಡುವೆ ಬಿದ್ದು, ಸಾವಿನ ಕದ ತಟ್ಟುವ ಭಯಾನಕ ದೃಶ್ಯವನ್ನು ಕಾಣಬಹುದು.

    ಬಂಗಾಳದ ಪುರುಲಿಯ ರೈಲು ನಿಲ್ದಾಣದ ಸಿಸಿಟಿವಿ ಫೂಟೇಜಿನಲ್ಲಿ ಪ್ರಯಾಣಿಕರ ರೈಲೊಂದು, ನಿಲ್ದಾಣದಿಂದ ಹೊರಡುತ್ತಿರುವ ವೇಳೆಯ ದೃಶ್ಯ ದಾಖಲಾಗಿದೆ. ಒಬ್ಬ ಗಂಡಸು ಚಲಿಸುತ್ತಿರುವ ರೈಲನ್ನು ಏರುವ ಸಾಹಸ ಮಾಡಿ ಯಶಸ್ವಿಯಾಗುತ್ತಾನೆ. ಅದಾದ ನಂತರ ಲಗೇಜ್​ ಹಿಡಿದ ಮಹಿಳೆಯೊಬ್ಬರು ಹೊರಕ್ಕೆ ಜಿಗಿದು ಪ್ಲಾಟ್​ಫಾರಂ ಮೇಲೆ ಬೀಳುತ್ತಾರೆ. ಅವರ ಹಿಂದೆಯೇ ಹೊರಕ್ಕೆ ಜಿಗಿಯುವ ಮತ್ತೊಬ್ಬ ಮಹಿಳೆ, ಪ್ಲಾಟಫಾರಂನ ಅಂಚಿಗೆ ಬೀಳುತ್ತಾರೆ. ರೈಲಿನ ಕೆಳಕ್ಕೆ ಬೀಳುವ ಅಪಾಯದಲ್ಲಿರುವುದನ್ನು ಗಮನಿಸಿದ ರೈಲ್ವೇ ಪೊಲೀಸ್​ ಸಿಬ್ಬಂದಿ​ಯೊಬ್ಬರು ಓಡಿ ಹೋಗಿ ಆಕೆಯನ್ನು ರೈಲಿನಿಂದ ದೂರಕ್ಕೆ ಎಳೆದುಕೊಳ್ಳುತ್ತಾರೆ.

    ನ.29 ರಂದು ನಡೆದ ಈ ಘಟನೆಯಲ್ಲಿ ಆರ್​ಪಿಎಫ್​ ಸಬ್​​ಇನ್​​ಸ್ಪೆಕ್ಟರ್ ಬಬ್ಲು ಕುಮಾರ್​ ಅವರ ಸಮಯಪ್ರಜ್ಞೆಯಿಂದ ಮಹಿಳೆಯ ಜೀವ ಉಳಿದಿದೆ ಎಂದು ಆರ್​ಪಿಎಫ್​ನ ಆಡ್ರಾ ವಿಭಾಗವು ಟ್ವಿಟರ್​ನಲ್ಲಿ ತಿಳಿಸಿದೆ. ಸಾವಿರಾರು ವೀಕ್ಷಣೆಗಳನ್ನು ಗಳಿಸಿರುವ ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಇಂಥ ಅವಗಡಗಳನ್ನು ತಪ್ಪಿಸಲು ರೈಲುಗಳಿಗೆ ಆಟೊಮೆಟಿಕ್​ ಡೋರ್​ಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ಇಂಥ ಅವಗಡಗಳಿಗೆ ಜನರೇ ಕಾರಣ. ರೈಲಿನ ಬಾಗಿಲಲ್ಲಿ ನಿಂತು ಇಳಿಯುವವರಿಗೆ ತೊಂದರೆ ಕೊಡುವುದರಿಂದ ಹೀಗಾಗುತ್ತದೆ. ಆಯಾ ನಿಲ್ದಾಣಗಳಲ್ಲಿ ಇಳಿಯಬೇಕಾದ ಜನರಿಗೆ ಅವಕಾಶ ಕೊಡುವುದನ್ನು ರೂಢಿಸಿಕೊಳ್ಳಬೇಕು ಎಂದಿದ್ದಾರೆ.

    ಏನೇ ಆಗಲಿ, ಚಲನೆ ಆರಂಭಿಸಿದ ರೈಲನ್ನು ಹತ್ತುವುದು ಅಥವಾ ಇಳಿಯುವುದು ಎಷ್ಟು ಅಪಾಯಕಾರಿ ಎಂಬುದು ಈ ದೃಶ್ಯದಿಂದ ಮನದಟ್ಟಾಗುತ್ತದೆ. ಎಷ್ಟೇ ಧಾವಂತವಿರಲಿ, ಇಂಥ ಆತ್ಮಘಾತಕ ಪ್ರಯತ್ನಗಳಿಗೆ ಯಾರೂ ಮುಂದಾಗಬಾರದು. (ಏಜೆನ್ಸೀಸ್)

    ಟೆಸ್ಟಿಂಗ್ ಸೌಲಭ್ಯ ಚೆನ್ನಾಗಿರೋದ್ರಿಂದ ಇಲ್ಲಿ ಮೊದಲು ಪತ್ತೆಯಾಗಿದೆ: ಸಚಿವ ಸುಧಾಕರ್​

    ವಿರಾಟ್​​ ಕೊಹ್ಲಿ ಪುತ್ರಿಗೆ ರೇಪ್​ ಬೆದರಿಕೆ ಹಾಕಿದ್ದವ ಪೊಲೀಸ್​ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts