More

    VIDEO| ಅಂಡರ್​ವಾಟರ್​ ಜಾವೆಲಿನ್​! ಚಿನ್ನದ ಹುಡುಗ ನೀರಜ್​ ಚೋಪ್ರಾರ ಈ ವಿಡಿಯೋ ನೋಡಿ

    ಮಾಳೆ(ಮಾಲ್ಡೀವ್ಸ್): ಅಪರಿಮಿತ ಶ್ರದ್ಧೆ ಮತ್ತು ಸತತ ಪರಿಶ್ರಮದಿಂದಲೇ ಉನ್ನತ ಸಾಧನೆ ಸಾಧ್ಯ. ಇದಕ್ಕೆ ಒಲಿಂಪಿಕ್ಸ್​ನಲ್ಲಿ ಪದಕಗಳನ್ನು ಗೆದ್ದ ಭಾರತದ ಕ್ರೀಡಾಪಟುಗಳ ಜೀವನವೇ ನಿದರ್ಶನ. ಅದರಲ್ಲೂ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗಳಿಸಿದ ನೀರಜ್​ ಚೋಪ್ರ ಅವರು, ಸದಾ ಕಾಲ ತಮ್ಮ ಕ್ರೀಡೆ ಬಗ್ಗೆಯೇ ಮನಸ್ಸು ಕೇಂದ್ರೀಕೃತವಾಗಿರುತ್ತೆ ಎಂದಿದ್ದಾರೆ.

    ಹಾಲಿಡೇ ಮೇಲೆ ಮಾಲ್ಡೀವ್ಸ್​ಗೆ ತೆರಳಿರುವ ಚೋಪ್ರ, ಸಮುದ್ರದಡಿಯಲ್ಲಿ ಸ್ಕೂಬಾ ಡೈವಿಂಗ್​ ಮಾಡುತ್ತಾ ಜಾವೆಲಿನ್​ ಎಸೆಯುವಂತೆ ನಟಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿ, “ಆಸ್ಮಾನ್​ ಪರ್​, ಜಮೀನ್​ ಪೆ ಯಾ ಅಂಡರ್​ವಾಟರ್​, ಐ ಆ್ಯಮ್ ಥಿಂಕಿಂಗ್​ ಆಫ್​ … ಜಾವೆಲಿನ್!”(ಆಕಾಶದಲ್ಲಿ, ನೆಲದ ಮೇಲೆ ಅಥವಾ ನೀರಿನಲ್ಲಿ, ನಾನು ಜಾವೆಲಿನ್ ಬಗ್ಗೆಯೇ ಯೋಚಿಸುತ್ತಿದ್ದೇನೆ) ಎಂದು ಶೀರ್ಷಿಕೆ ನೀಡಿದ್ದಾರೆ. ಜೊತೆಗೆ, ತರಬೇತಿ ಶುರುವಾಗಿ ಬಿಟ್ಟಿದೆ ಎಂದು ಬರೆದಿದ್ದಾರೆ.

     

    View this post on Instagram

     

    A post shared by Neeraj Chopra (@neeraj____chopra)

    13 ಗಂಟೆಗಳ ಹಿಂದಷ್ಟೇ ಪೋಸ್ಟ್​ ಆಗಿರುವ ನೀರಜ್​ ಚೋಪ್ರರ ಈ ಪೋಸ್ಟ್​ಗೆ ಲಕ್ಷಾಂತರ ಅಭಿಮಾನಿಗಳು ಲೈಕ್​ಗಳ ಸುರಿಮಳೆಗೈದಿದ್ದಾರೆ. ಸಾವಿರಾರು ಜನ ನಿಮ್ಮ ಶ್ರದ್ಧೆ ಮೆಚ್ಚುವಂಥದ್ದು ಎಂದು ಹೊಗಳಿದ್ದಾರೆ. ಮತ್ತೊಂದೆಡೆ, ಹೈಜಂಪರ್​ ತೇಜಸ್ವಿನ್ ಶಂಕರ್​ ಅವರು, “ವೆಕೇಶನ್ನಲ್ಲೂ ಜಾವೆಲಿನ್ನಾ? ಸ್ವಲ್ಪ ನಿನ್ನ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ಕೊಡಪ್ಪ” ಎಂದು ಕಾಮೆಂಟ್​ ಮಾಡಿದ್ದಾರೆ.​ (ಏಜೆನ್ಸೀಸ್)

    ಪೊಲೀಸ್​​ ಹೆಡ್​​ ಕಾನ್ಸ್​​ಟೆಬಲ್​ ಮನೆಯಲ್ಲೇ ಕಳ್ಳತನ ಮಾಡಿದ ಖದೀಮರು!

    ಈ ತಿಂಗಳಲ್ಲೇ ಮಕ್ಕಳಿಗೂ ಕರೊನಾ ಲಸಿಕೆ: ಆರೋಗ್ಯ ಸಚಿವ ಸುಧಾಕರ್

    ಬ್ಯಾಡರಹಳ್ಳಿ ಆತ್ಮಹತ್ಯೆ ಪ್ರಕರಣದಲ್ಲಿ ಹಲ್ಲೆಗೆರೆ ಶಂಕರ್​, ಅಳಿಯಂದಿರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts