ಪೊಲೀಸ್​​ ಹೆಡ್​​ ಕಾನ್ಸ್​​ಟೆಬಲ್​ ಮನೆಯಲ್ಲೇ ಕಳ್ಳತನ ಮಾಡಿದ ಖದೀಮರು!

ಬೆಂಗಳೂರು: ಕಳ್ಳಕಾಕರನ್ನು ಹುಡುಕಿ ಕಾನೂನು ಕ್ರಮ ತೆಗೆದುಕೊಳ್ಳುವ ಪೊಲೀಸರು ವಾಸಿಸುವ ಪೊಲೀಸ್​ ಕ್ವಾರ್ಟರ್ಸ್​ಗೇ ಕಳ್ಳರು ನುಗ್ಗಿ, ಪೊಲೀಸ್​ ಸಿಬ್ಬಂದಿಯೋರ್ವರ ಮನೆಯಿಂದ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ನಗರದಲ್ಲಿ ನಡೆದಿದೆ. ಶೇಷಾದ್ರಿಪುರದ ಆನಂದ್​​ರಾವ್ ಸರ್ಕಲ್​ನಲ್ಲಿರುವ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ಈ ಕೃತ್ಯ ನಡೆದಿದೆ. ತಾವು ಡ್ಯೂಟಿಗೆ ತೆರಳಿದ್ದ ಸಮಯ ನೋಡಿಕೊಂಡು ಕಳ್ಳತನ ಮಾಡಿರುವ ಬಗ್ಗೆ ಹೆಡ್​ ಕಾನ್ಸ್​ಟಬಲ್ ಆದ ಮಾರುತಿ ಶೇಷಾದ್ರಿಪುರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್ ಕ್ವಾರ್ಟರ್ಸ್​ನಲ್ಲಿ ಸಿಸಿಟಿವಿ ಇಲ್ಲದೆ ಇರುವುದು ಕಳ್ಳರಿಗೆ ಬಂಡವಾಳವಾಗಿರಬಹುದು ಎನ್ನಲಾಗಿದೆ. ಇದನ್ನೂ … Continue reading ಪೊಲೀಸ್​​ ಹೆಡ್​​ ಕಾನ್ಸ್​​ಟೆಬಲ್​ ಮನೆಯಲ್ಲೇ ಕಳ್ಳತನ ಮಾಡಿದ ಖದೀಮರು!