More

    VIDEO: ರೈಲಿನಲ್ಲಿ ಟಿಕ್​ಟಾಕ್​ ವಿಡಿಯೋ ಮಾಡಲು ಹೊರಟಿದ್ದ ಈ ಯುವಕ ಬದುಕಿದ್ದೇ ಹೆಚ್ಚು: ರೈಲ್ವೆ ಸಚಿವರಿಂದ ವಿಡಿಯೋ ಶೇರ್​

    ನವದೆಹಲಿ: ಇತ್ತೀಚೆಗೆ ಟಿಕ್​ಟಾಕ್​ ಬಳಕೆ ಹೆಚ್ಚಾಗಿದೆ. ಮನೋರಂಜನಾ ಆ್ಯಪ್​ ಆಗಿರುವ ಟಿಕ್​ಟಾಕ್​ ಪ್ರತಿಭೆಗಳಿಗೆ ಅವಕಾಶ ಕೊಡುವುದರ ಜತೆ ಅನೇಕ ಜೀವಗಳಿಗೂ ಮುಳ್ಳಾಗಿದೆ. ಟಿಕ್​ಟಾಕ್​ ವಿಡಿಯೋ ಮಾಡಲು ಹೋಗಿ ಯುವಕನೊಬ್ಬ ಪ್ರಾಣ ಕೊಂಚದರಲ್ಲಿ ಉಳಿದಿರುವ ಘಟನೆಯೊಂದು ನಡೆದಿದ್ದು ಆ ವಿಡಿಯೋ ಇದೀಗ ವೈರಲ್​ ಆಗಿದೆ.

    ಯುವಕನೊಬ್ಬ ರೈಲಿನ ಬಾಗಿಲಲ್ಲಿ ನೇತಾಡುತ್ತಿರುತ್ತಾನೆ. ಕಿಟಕಿಯಿಂದ ನನ್ನನ್ನು ವಿಡಿಯೋ ಮಾಡು ಎಂದು ತನ್ನ ಗೆಳೆಯನಿಗೆ ಆತ ಮೊಬೈಲ್​ ಕೊಟ್ಟು ಹೋಗಿರುತ್ತಾನೆ. ವೇಗವಾಗಿ ಚಲಿಸುತ್ತಿದ್ದ ರೈಲಿನ ಬಾಗಿಲಿನಲ್ಲಿ ನೇತಾಡುವ ಸ್ಟಂಟ್​ ಮಾಡಲು ಹೊರಟ ಯುವಕ ಕೈ ಜಾರಿ ಕೆಳಗೆ ಬೀಳುತ್ತಾನೆ. ಬಿದ್ದ ಹೊಡೆತಕ್ಕೆ ಯುವಕನ ದೇಹ ಇನ್ನೇನು ರೈಲಿನ ಅಡಿಗೆ ಸಿಲುಕೇ ಬಿಟ್ಟಿತು ಎನ್ನುವಷ್ಟರಲ್ಲಿ ಅದೃಷ್ಟವಶಾತ್​ ಯುವಕ ಹಳಿಯಿಂದ ಸ್ವಲ್ಪ ಸರಿದು ಜೀವ ಉಳಿಸಿಕೊಳ್ಳುತ್ತಾನೆ.

    ಇಂತದ್ದೊಂದು ವಿಡಿಯೋ ಟಿಕ್​ಟಾಕ್​, ಫೇಸ್​ಬುಕ್​ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಆ ವಿಡಿಯೋವನ್ನು ರೈಲ್ವೆ ಸಚಿವ ಪಿಯೂಷ್​ ಗೋಯಲ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಚಲಿಸುವ ರೈಲಿನಲ್ಲಿ ಸಾಹಸವನ್ನು ತೋರಿಸುವುದು ಹೇಡಿತನವೇ ಹೊರತು ಧೈರ್ಯವಲ್ಲ. ನಿಮ್ಮ ಜೀವನವು ಅಮೂಲ್ಯವಾದುದು. ಅದನ್ನು ಅಪಾಯಕ್ಕೆ ಒಳಪಡಿಸಬೇಡಿ. ನಿಯಮಗಳನ್ನು ಅನುಸರಿಸಿ, ಮತ್ತು ಸುರಕ್ಷಿತ ಪ್ರಯಾಣವನ್ನು ಆನಂದಿಸಿ “ಎಂದು ಟ್ವೀಟ್​ ಮಾಡಿದ್ದಾರೆ.

    ರೈಲ್ವೆ ಸಚಿವರ ಈ ಟ್ವೀಟ್​ಗೆ ಭಾರೀ ಪ್ರಮಾಣದ ಸ್ಪಂದನೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts