More

    VIDEO: ಗಣಪತಿ ಮೂರ್ತಿಯನ್ನು ನೆಲಕ್ಕೆಸೆದ ಬುರ್ಖಾಧಾರಿ ಮಹಿಳೆ ವಿರುದ್ಧ ಕ್ರಮ ಜರುಗಿಸಿದ ಮುಸ್ಲಿಂ ರಾಷ್ಟ್ರ!

    ಮನಾಮಾ​: ಬಹರೈನ್​ನ ರಾಜಧಾನಿ ಮನಾಮಾಗೆ ಸಮೀಪದ ಜುಫೈರ್​ ಎಂಬಲ್ಲಿನ ಸೂಪರ್​ಮಾರ್ಕೆಟ್ ಒಂದಕ್ಕೆ ತೆರಳಿದ್ದ ಬುರ್ಖಾಧಾರಿ ಮಹಿಳೆ, “ಇದು ಮುಸ್ಲಿಂ ರಾಷ್ಟ್ರ.. ಇಲ್ಲಿ ಇದಕ್ಕೆ ಜಾಗವಿಲ್ಲ” ಎನ್ನುತ್ತ ಒಂದೊಂದೇ ಗಣಪತಿ ಮೂರ್ತಿಗಳನ್ನು ನೆಲಕ್ಕೆ ಎಳೆದು ಹಾಕಿ ಒಡೆದು ಹಾಕುತ್ತಿರುವ ವಿಡಿಯೋ ವೈರಲ್ ಆಗಿತ್ತು.

    ಬುರ್ಖಾಧಾರಿ ಮಹಿಳೆಯ ಈ ವರ್ತನೆಯನ್ನು ತಡೆಯುವುದಕ್ಕೆ ಅಲ್ಲಿದ್ದ ಅಂಗಡಿ ಸಹಾಯಕ ಅರೆಬಿಕ್​ನಲ್ಲಿ ಪ್ರಯತ್ನಿಸುತ್ತಿದ್ದ. ಆದಾಗ್ಯೂ, ಆಕೆ ಒಂದೊಂದೇ ಗಣಪತಿ ಮೂರ್ತಿಯನ್ನು ಶೆಲ್ಫ್​ನಿಂದ ಕೆಳಕ್ಕೆ ಎಸೆದು ಹಾಕುತ್ತಿರುವುದು ಕಂಡುಬಂದಿದೆ. ಆ ಸಂದರ್ಭದಲ್ಲಿ ಆಕೆ, ಇದು ಮುಸ್ಲಿಂ ರಾಷ್ಟ್ರ ಇಲ್ಲಿ ಯಾರು ಈ ಮೂರ್ತಿಗಳನ್ನು ಪೂಜೆ ಮಾಡ್ತಾರೋ ನೋಡೇ ಬಿಡುವ. ಪೊಲೀಸರನ್ನು ಕರೆಯಿರಿ ಎಂದು ಕೂಗಾಡಿದ್ದಳು.

    ಇದನ್ನೂ ಓದಿ: ವಿಶ್ವಗುರು: ಡಿಜೆ ಹಳ್ಳಿ ಗಲಭೆ, ಅನೇಕ ಪ್ರಶ್ನೆಗಳು!

    54 ವರ್ಷದ ಆಕೆಯ ವಿರುದ್ಧ ಅಂಗಡಿಗೆ ಹಾನಿಗೊಳಿಸಿದ್ದು ಮತ್ತು ಧಾರ್ಮಿಕ ಮೂರ್ತಿಗಳನ್ನು ಒಡೆದು ಹಾಕಿದ್ದರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬಹರೈನ್ ಪೊಲೀಸರು, ಕಾನೂನು ಪ್ರಕಾರ ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈ ವಿಚಾರವನ್ನು ಅಲ್ಲಿನ ಗೃಹ ಸಚಿವಾಲಯ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.

    ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಒಂದರ ಮೂಲಕ ಇಡೀ ರಾಷ್ಟ್ರವನ್ನು ಅದೇ ಕಣ್ಣಿನಿಂದ ನೋಡಬೇಡಿ. ಬಹರೈನ್ ಮುಸ್ಲಿಂ ರಾಷ್ಟ್ರವಾದರೂ ಇಲ್ಲಿ ಸಾಮರಸ್ಯವಿದೆ ಎಂದೂ ಅನೇಕರು ಮನವಿ ಮಾಡಿದ್ದು, ಶ್ರೀಕೃಷ್ಟ ದೇವಸ್ಥಾನದ ಫೋಟೋವನ್ನು ಟ್ವಿಟರ್​ನಲ್ಲಿ ಅಪ್ಲೋಡ್ ಮಾಡಿದ್ದಾರೆ. (ಏಜೆನ್ಸೀಸ್)

    VIDEO: ಇದು ಮುಸ್ಲಿಂ ರಾಷ್ಟ್ರ ಎನ್ನುತ್ತ ಒಂದೊಂದೇ ಗಣಪತಿ ಮೂರ್ತಿಯನ್ನು ನೆಲಕ್ಕೆಸೆದಳು ಬುರ್ಖಾಧರಿಸಿದ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts