ಗೌಹಾಟಿ : ಕರೊನಾ ಸೋಂಕಿತ ಆಸ್ಪತ್ರೆಗೆ ಕರೆದೊಯ್ದಾಗ ಮೃತಪಟ್ಟ ಹಿನ್ನೆಲೆಯಲ್ಲಿ ಸಂಬಂಧಿಕರು ವೈದ್ಯರನ್ನು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಅಸ್ಸಾಂನಿಂದ ವರದಿಯಾಗಿದೆ. ಕೋವಿಡ್ ಕೇರ್ ಕೇಂದ್ರಕ್ಕೆ ಹೊಸದಾಗಿ ಸೇರಿದ ಕಿರಿಯ ವೈದ್ಯನ ಮೇಲೆ ಹಿಂಸಾಚಾರ ನಡೆಸಿದ ಈ ಪ್ರಕರಣದಲ್ಲಿ, ಇದೀಗ 24 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂನ ಹೊಜಾಯ್ ಜಿಲ್ಲೆಯ ಒಡಲಿ ಮಾಡೆಲ್ ಹಾಸ್ಪಿಟಲ್ನಲ್ಲಿ ಕರೊನಾ ಸೋಂಕಿತರೊಬ್ಬರು ನಿನ್ನೆ ಮಧ್ಯಾಹ್ನ ಮೃತಪಟ್ಟರು. ಇದರಿಂದ ಭಾವೋದ್ವೇಗಕ್ಕೊಳಗಾದ ಕುಟುಂಬಸ್ಥರು ಯುವ ವೈದ್ಯ ಡಾ. ಸೇಯುಜ್ ಕುಮಾರ್ ಸೇನಾಪತಿ ಅವರನ್ನು ಥಳಿಸಿದರು. ವೈದ್ಯನ ಮೇಲೆ ಹಲವು ಜನರು ಹಲ್ಲೆ ಮಾಡುತ್ತಾ, ಕಾಲಿನಲ್ಲಿ ಒದೆಯುತ್ತಿದ್ದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು.
HCM @himantabiswa sir.
Look for youself !!
This is the condition of our FRONTLINE WARRIORS DOCTORS in ASSAM.
We are bearing the burden of incompetency.@DGPAssamPolice @gpsinghassam @PMOIndia @assampolice @nhm_assam pic.twitter.com/V3mVK8QNxN— Dr. Kamal debnath (@debnath_aryan) June 1, 2021
“ಈ ಬರ್ಬರ ಹಲ್ಲೆಯ ಪ್ರಕರಣದಲ್ಲಿ 24 ಆರೋಪಿಗಳನ್ನು ಬಂಧಿಸಲಾಗಿದೆ. ಆದಷ್ಟು ಬೇಗ ಚಾರ್ಜ್ಶೀಟ್ ಸಲ್ಲಿಸಲಾಗುವುದು. ನಾನು ಈ ತನಿಖೆಯನ್ನು ವೈಯಕ್ತಿಕವಾಗಿ ಪರಿವೀಕ್ಷಿಸುತ್ತಿದ್ದು, ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡುತ್ತೇನೆ” ಎಂದು ಸಿಎಂ ಹಿಮಂತ ಬಿಸ್ವ ಶರ್ಮ ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.
ಹಲ್ಲೆಗೊಳಗಾದ ಡಾ.ಸೇನಾಪತಿ ಅವರು, ಎಂಬಿಬಿಎಸ್ ಕೋರ್ಸ್ ಮುಗಿಸಿ ಗ್ರಾಮಾಂತರ ಪ್ರದೇಶದಲ್ಲಿ ತಮ್ಮ ಮೊದಲ ದಿನದ ಡ್ಯೂಟಿಗೆ ಹಾಜರಾಗಿದ್ದರು ಎನ್ನಲಾಗಿದೆ. “ನಾನು ಮಧ್ಯಾಹ್ನ 1.30 ಕ್ಕೆ ಕೋವಿಡ್ ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡಾಗ ರೋಗಿಯ ಸಂಬಂಧಿಕರು ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದರು. ನಾನು ರೋಗಿಯನ್ನು ಪರೀಕ್ಷೆ ಮಾಡಿದಾಗ ಆತ ಅದಾಗಲೇ ಸತ್ತುಹೋಗಿದ್ದ. ಸಂಬಂಧಿಕರು ತಕ್ಷಣ ಆಸ್ಪತ್ರೆಯ ಫರ್ನಿಚರ್ ಒಡೆದು ನನ್ನ ಮೇಲೆ ಹಲ್ಲೆ ಮಾಡಿದರು” ಎಂದು ಸೇನಾಪತಿ ಹೇಳಿದ್ದಾರೆ.
ಐಎಂಎ ಅಸ್ಸಾಂ ವಿಭಾಗ ಈ ಹಲ್ಲೆಯನ್ನು ಖಂಡಿಸಿ, ರೋಗಿಗಳ ಸಂಬಂಧಿಕರ ಭಾವನೆಗಳನ್ನು ಎದುರಿಸುವುದು ವೈದ್ಯ ಸಮುದಾಯಕ್ಕೆ ಕಷ್ಟವಾಗುತ್ತಿದೆ ಎಂದಿತ್ತು. ಕೋವಿಡ್ ಡ್ಯೂಟಿ ಮಾಡುವವರಿಗೆ ಈ ರೀತಿಯ ಪುರಸ್ಕಾರ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿತ್ತು. (ಏಜೆನ್ಸೀಸ್)
ಲಸಿಕೆ ಪಡೆದು ಹೊಟೆಲ್ನಲ್ಲಿ ತಂಗುವ ಆಫರ್! ಮಾಮೂಲಿ ಫ್ರಿಜ್ಜಲ್ಲಿ ಕೋವಾಕ್ಸಿನ್ ಶೇಖರಣೆ!
ಐ ಡ್ರಾಪ್ಸ್ನಿಂದ ಕರೊನಾದಿಂದ ಗುಣಮುಖನಾದೆ ಎಂದು ವಿಡಿಯೋ ಮಾಡಿದ್ದ ವ್ಯಕ್ತಿ… ಆಸ್ಪತ್ರೆಯಲ್ಲಿ ನಿಧನ