More

    VIDEO | ವೈರ್​ ಕಟ್​ ಮಾಡಲು ತೆವಳುತ್ತಾ ಬಂದ ವಿದ್ಯುತ್​ ಕಳ್ಳ! ವೈರಲ್ ಆಗಿದೆ ಈ ಫನ್ನಿ ವಿಡಿಯೋ!

    ಘಾಜಿಯಾಬಾದ್​ : ವಿದ್ಯುತ್ ಕಳವು ಮಾಡುತ್ತಿದ್ದ ಉತ್ತರಪ್ರದೇಶದ ನಿವಾಸಿಯೊಬ್ಬ ದಾಳಿಗೆ ಬಂದ ಇಲಾಖಾ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾ, ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾನೆ. ಯಾರಿಗೂ ಗೊತ್ತಾಗದಂತೆ ತಾನು ಅಕ್ರಮವಾಗಿ ಏರ್ಪಡಿಸಿದ್ದ ಕಳ್ಳಸಂಪರ್ಕವನ್ನು ತುಂಡರಿಸಲು ಹೋದ ವಿದ್ಯುತ್​ ಕಳ್ಳನ ನಗೆ ತರಿಸುವ ವಿಡಿಯೋ ತುಣುಕು ಜಾಲತಾಣದಲ್ಲಿ ವೈರಲ್ ಆಗಿದೆ.

    ಯುಪಿಯ ಘಾಜಿಯಾಬಾದ್​​ನ ಮುರಾದ್​ನಗರ್​ ಪ್ರದೇಶದಲ್ಲಿ ಕೆಲವು ನಿವಾಸಿಗಳು ಅಕ್ರಮವಾಗಿ ವಿದ್ಯುತ್ ವೈರ್​ಗಳಿಗೆ ಕೇಬಲ್​ ಜೋಡಿಸಿ ವಿದ್ಯುತ್​ ಕದಿಯುತ್ತಿದ್ದ ಸುಳಿವು ಬಂದಿತ್ತು. ಈ ಮೇರೆಗೆ ವಿದ್ಯುತ್ ಇಲಾಖೆ ಅಧಿಕಾರಿಗಳು ಮನೆಯೊಂದರ ಮೇಲೆ ದಾಳಿ ನಡೆಸಲು ಬಂದರು. ಹೀಗೆ ಮನೆ ಬಾಗಿಲಿಗೆ ಬಂದು ನಿಂತ ಅಧಿಕಾರಿಗಳಿಗೆ ಕದ ತೆರೆಯದೆ, ನಿವಾಸಿಯೊಬ್ಬ ಮೆಲ್ಲಗೆ ಟೆರೇಸ್​ ಮೇಲೆ ಹೋಗಿ, ತೆವಳುತ್ತಾ, ತಾನು ಜೋಡಿಸಿಟ್ಟಿದ್ದ ಕಳ್ಳ ಸಂಪರ್ಕವನ್ನು ತುಂಡರಿಸಲು ಪ್ರಯತ್ನಿಸಿದ.

    ಆದರೆ, ಇಲಾಖೆಯ ಲೈನ್​ಮನ್​ ಒಬ್ಬರು ಒಂದು ಹೆಜ್ಜೆ ಮುಂದಾಗಿ, ಪಕ್ಕದ ಮನೆಯ ಟೆರೇಸಿನಿಂದ ಬಂದು ವಿಡಿಯೋ ಮಾಡುತ್ತಿದ್ದುದು ಆತನಿಗೆ ಗೊತ್ತಿರಲಿಲ್ಲ. ವಿದ್ಯುತ್​ ಕಳ್ಳನು ತನ್ನ ಕಳ್ಳತನದ ಪುರಾವೆಯನ್ನು ನಾಶಪಡಿಸಿ ಪಾರಾಗುವ ಪ್ರಯತ್ನದಲ್ಲಿದ್ದಾಗ, ಅವನನ್ನು ರೆಡ್​ ಹ್ಯಾಂಡೆಡ್​ ಆಗಿ ಹಿಡಿದ ಲೈನ್​ಮನ್​, ‘ನಾನು ಇಲ್ಲೇ ನಿಂತಿದ್ದೇನಪ್ಪ’ ಎಂದು ಹಿಂದಿ ಭಾಷೆಯಲ್ಲಿ ಉದ್ಗರಿಸುವುದು ವಿಡಿಯೋದಲ್ಲಿ ಕೇಳಿಬಂದಿದೆ. (ಏಜೆನ್ಸೀಸ್)

    ಡಿಕೆಶಿ ಮುಂದೆಯೇ ‘ಮುಂದಿನ ಸಿಎಂ ಸಿದ್ದರಾಮಯ್ಯ’ ಎಂಬ ಕೂಗು!

    ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ: ಶೇ. 28 ಕ್ಕೆ ಏರಿತು ಡಿಎ, ಡಿಆರ್​!

    ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹೈಕೋರ್ಟ್​ ಗ್ರೀನ್ ಸಿಗ್ನಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts