More

    ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ: ಶೇ. 28 ಕ್ಕೆ ಏರಿತು ಡಿಎ, ಡಿಆರ್​!

    ನವದೆಹಲಿ : ಮುಂಬರುವ ಹಬ್ಬಗಳ ದಿನಗಳಿಗೆ ಕೇಂದ್ರ ಸರ್ಕಾರದ ಹಾಲಿ ಮತ್ತು ಮಾಜಿ ನೌಕರರಿಗೆ ಶುಭಸುದ್ದಿ ಬಂದಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ನೀಡುವ ಡಿಯರ್​ನೆಸ್​ ಅಲೋಯೆನ್ಸ್​(ಡಿಎ) ಮತ್ತು ಡಿಯರ್​ನೆಸ್​ ರಿಲೀಫ್​(ಡಿಆರ್​)ಗಳನ್ನು ಮೂಲ ವೇತನದ ಶೇ.17 ರಷ್ಟರಿಂದ ಶೇ.28 ಕ್ಕೆ ಏರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

    ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದ ವರ್ಷ ಡಿಎ ಮತ್ತು ಡಿಆರ್​ – ಎರಡನ್ನೂ ತಡೆಹಿಡಿಯಲಾಗಿತ್ತು. ಏರುತ್ತಿರುವ ಜೀವನವೆಚ್ಚವನ್ನು ಸರಿದೂಗಿಸಲು ನೀಡಲಾಗುವ ಈ ಭತ್ಯೆಗಳನ್ನು ಇದೀಗ, ಜುಲೈ 1 ರಿಂದ ಜಾರಿಗೆ ಬರುವಂತೆ, ಸರ್ಕಾರವು ಹೆಚ್ಚಿಸಿ ನೀಡುತ್ತಿದೆ.

    ಇದನ್ನೂ ಓದಿ: ಇಂಗ್ಲೆಂಡ್​ ಆಟಗಾರನ ತಂದೆಯ ಬೆನ್ನುಮೂಳೆ ಮುರಿದ ಅಭಿಮಾನಿಗಳ ದಂಡು!

    ಇಂದು ನಡೆದ ಕೇಂದ್ರ ಸಂಪುಟ ಸಭೆಯ ಈ ನಿರ್ಧಾರದಿಂದಾಗಿ ಸರ್ಕಾರವು, ಸುಮಾರು 34,400 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚ ಭರಿಸಬೇಕಾಗುವುದು. ಹಾಗೂ ಈ ಆದೇಶದ ಫಲವನ್ನು ಸುಮಾರು 48,34,000 ಕೇಂದ್ರ ಸರ್ಕಾರಿ ನೌಕರರು ಮತ್ತು 65,26,000 ಪಿಂಚಣಿದಾರರು ಅನುಭವಿಸಲಿದ್ದಾರೆ ಎಂದು ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವರಾಗಿರುವ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)

    ರಾಜ್ಯದಲ್ಲಿ ಮಾಸಿಕ 60 ಲಕ್ಷ ಜನರಿಗೆ ಕರೊನಾ ಲಸಿಕೆ

    3ನೇ ಅಲೆ ಬರುತ್ತಿದೆ… ಮೈಮರೆತು ಜನಜಾತ್ರೆ ಮಾಡಬೇಡಿ: ಐಎಂಎ ಎಚ್ಚರಿಕೆ

    ಪುರಿಯಲ್ಲಿ ಭಗವಾನ್​ ಶ್ರೀ ಜಗನ್ನಾಥ ದೇವರ ಭವ್ಯ ರಥಯಾತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts