More

    ಹೈಡ್ರೋಜನ್ ಬಸ್‌ನಲ್ಲಿ ‘ಟೆಸ್ಟ್ ಡ್ರೈವ್’ ಹೊರಟ ಕೇಂದ್ರ ಸಚಿವ ನಿತಿನ್​​ ಗಡ್ಕರಿ

    ನವದೆಹಲಿ: ಕೇಂದ್ರ ರಸ್ತೆ ಮತ್ತು ಭೂ ಸಾರಿಗೆ ಸಚಿವ ನಿತಿನ್​ ಗಡ್ಕರಿ, ಹೈಡ್ರೋಜನ್​​​ ಬಸ್​​ನ ಟೆಸ್ಟ್​​ ಡ್ರೈವ್​​ ನಡೆಸಿದ್ದಾರೆ. ಸೆಜ್​​​ ರಿಪಬ್ಲಿಕ್​​​ಗೆ ತೆರಳಿರುವ ಕೇಂದ್ರ ಸಚಿವರು ಹೈಡ್ರೋಜನ್​​ ಬಸ್​​, ಟೆಸ್ಟ್​​ ಡ್ರೈವ್​ ನಡೆಸಿದ್ದು ಭಾರತದಲ್ಲೂ ಈ ಬಸ್​​ಗಳನ್ನ ಬಿಡುವ ಆಲೋಚನೆಯೂ ಇದೆ.


    ನಿತಿನ್​​ ಗಡ್ಕರಿಯವರು ಟೆಸ್ಟ್​​​ ಡ್ರೈವ್​ಗೆ ತೆರಳುತ್ತಿರುವ ವಿಡಿಯೋವನ್ನ ಎಕ್ಸ್​​(ಟ್ವಿಟ್ಟರ್​​)ನಲ್ಲಿ ಅಪ್ಲೋಡ್​ ಮಾಡಲಾಗಿದ್ದು, ಭಾರತದಲ್ಲಿಯೂ ಇಂತಹ ಬಸ್​​ಗಳನ್ನ ಪರಿಚಯಿಸುವ ಚಿಂತನೆಯಿದೆ. ಈಗಾಗಲೇ ಪೋಸ್ಟ್​​ ಮಾಡಲಾಗಿರುವ ವಿಡಿಯೋದಲ್ಲಿ ಅನೇಕ ಅಧಿಕಾರಿಗಳು ನಿತಿನ್​​ ಗಡ್ಕರಿಯನ್ನ ಸುತ್ತುವರೆದಿದ್ದಾರೆ.


    ಭಾರತದಲ್ಲಿ ಪರಿಸರ ಸ್ನೇಹಿ ಸಾರಿಗೆಯ ಬಳಕೆ ಹೆಚ್ಚು ಆಗಬೇಕು ಎಂಬ ಉದ್ದೇಶದಿಂದ ಸಚಿವರು ಟೆಸ್ಟ್​​ ಡ್ರೈವನ್ನ ಸೆಜ್​​​ ರಿಪಬ್ಲಿಕ್​ನಲ್ಲಿ ನಡೆಸಿದ್ದು, ಅಧಿಕಾರಿಗಳು ಬಸ್​​​ನ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಪರಿಶೀಲನೆ ನಡೆಸಿದ್ದಾರೆ.


    ಹೈಡ್ರೋಜನ್ ಬಸ್‌ಗಳು ಭರವಸೆಯ ದಾರಿದೀಪವಾಗಿದ್ದು, ಸ್ವಚ್ಛ, ಹಸಿರು ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಎಕ್ಸ್​ ಪೋಸ್ಟ್​​ನಲ್ಲಿ ಬರೆಯಲಾಗಿದೆ.


    ಹೈಡ್ರೋಜನ್​​ ಬಸ್​​ನ ಪ್ರಯೋಜನವೇನು?
    ಹೈಡ್ರೋಜನ್ ಇಂಧನವನ್ನು ಬಳಸಿಕೊಂಡು ಚಲಿಸುವಂತಹ ಬಸ್​​ ಹೈಡ್ರೋಜನ್ ಮತ್ತು ಗಾಳಿಯನ್ನು ಬಳಸಿಕೊಂಡು ವಿದ್ಯುತ್​​​ ಉತ್ಪಾದನೆಯನ್ನ ಮಾಡುತ್ತೆ. ಹೈಡ್ರೋಜನ್ ಇಂಧನ ಚಾಲಿತ ವಾಹನಗಳು ಭಾರತದಲ್ಲಿ ಪ್ರಯೋಗ ಹಂತದಲ್ಲಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಟೋಯೋಟಾ ಮಿರಾಯ್ ಕಾರು ಅನಾವರಣ ಮಾಡಿದ್ದರು. ಇದು ಭಾರತದ ಮೊದಲ ಹೈಡ್ರೋಜನ್ ಇಂಧನ ಕಾರಾಗಿತ್ತು.
    ಹೈಡ್ರೋಜನ್ ಫ್ಯುಯೆಲ್ ಸೆಲ್ ವಾಹನಗಳು ಯಾವುದೇ ಕಾರ್ಬನ್ ಅಥವ ಇತರ ಮಾರಕ ಹೊಗೆಗಳನ್ನು ಉಗುಳುವುದಿಲ್ಲ. ಇದರಿಂದ ಕೇವಲ ಸಣ್ಣ ಪ್ರಮಾಣದ ಶಾಖ ಗಾಳಿಯೂ ಹೊರಸೂಸುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಅಪಾಯ ಇಲ್ಲ. ಶಾಖಾಗಾಳಿಯಿಂದ ವಾತಾವರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದು ಇಂಟರ್ನಲ್ ಕಂಬಶನ್ ಎಂಜಿನ್‌ಗಿಂತ ದಕ್ಷ ಹಾಗೂ ಪರಿಣಾಮಕಾರಿಯಾಗಿದೆ.
    ಹೈಡ್ರೋಜನ್ ವಾಹನದ ಮತ್ತೊಂದು ವಿಶೇಷತೆ ಎಂದರೆ ಇಂಧನ. ಎಲೆಕ್ಟ್ರಿಕ್ ವಾಹನಗಳಾದರೆ ಅದೆಷ್ಟೇ ತಂತ್ರಜ್ಞಾನ ಮುಂದುವರಿದರೂ ಬ್ಯಾಟರಿ ಚಾರ್ಜ್ ಆಗಲು ಕನಿಷ್ಟ 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಹೈಡ್ರೋಜನ್ ಕೆಲವೆ ನಿಮಿಷಗಳಲ್ಲಿ ಅಂದರೆ ಪೆಟ್ರೋಲ್ ಫಿಲ್ ಮಾಡುವ ರೀತಿಯಲ್ಲಿ ತುಂಬಿಸಿಕೊಳ್ಳಲುಸಾಧ್ಯವಿದೆ. ಹೈಡ್ರೋಜನ್ ಖಾಲಿಯಾಗಿದೆ ಎಂದರೆ ಅಷ್ಟೇ ಸುಲಭವಾಗಿ ತುಂಬಿಸಿಕೊಂಡು ಪ್ರಯಾಣ ಮುಂದುವರಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts