More

    VIDEO| ಪಿಎಚ್​ಡಿ, ಡಿಗ್ರಿಗಳಿಗೆ ಯಾವುದೇ ಮೌಲ್ಯವಿಲ್ಲ ಎಂದ ಶಿಕ್ಷಣ ಸಚಿವ!

    ಕಾಬುಲ್: ಜಾಗತಿಕ ಮನ್ನಣೆ ಗಳಿಸಲು ತಮ್ಮ ವಿಚಾರಗಳು ಪ್ರಗತಿಪರವಾಗಿವೆ ಎಂದು ಬಿಂಬಿಸುವ ಪ್ರಯತ್ನವನ್ನು ತಾಲಿಬಾನ್ ನಾಯಕರು ಮಾಡುತ್ತಿದ್ದಾರೆ. ಆದರೆ, ಅಫ್ಘಾನಿಸ್ತಾನದಲ್ಲಿ ಹೊಸದಾಗಿ ರಚನೆಯಾಗಿರುವ ತಾಲಿಬಾನ್​ ಸರ್ಕಾರದ ಶಿಕ್ಷಣ ಸಚಿವರು ಮುಂದೆ ಯಾವ ರೀತಿಯ ಪರಿಸ್ಥಿತಿಯನ್ನು ಅಪೇಕ್ಷಿಸಬಹುದೆಂಬುದಕ್ಕೆ ಕೈಗನ್ನಡಿ ಹಿಡಿದಿದ್ದಾರೆ.

    ನೂತನ ಶಿಕ್ಷಣ ಸಚಿವನಾಗಿರುವ ಶೇಖ್​ ಮೌಲ್ವಿ ನೂರುಲ್ಲಾಹ್​ ಮುನೀರ್​ ಆಡಿರುವ ಮಾತುಗಳ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಮುನೀರ್​, ಜಗತ್ತಿನ ಯಾವುದೇ ಉನ್ನತ ಶಿಕ್ಷಣ ಪಡೆದವರಿಗಿಂತ ಅಫ್ಘಾನಿಸ್ತಾನದ ಆಳ್ವಿಕೆ ನಡೆಸುತ್ತಿರುವ ಮುಲ್ಲಾಗಳ ಮತ್ತು ತಾಲಿಬಾನಿಗಳ ಸ್ಥಾನ ಉನ್ನತವಾಗಿದೆ ಎಂದಿದ್ದಾರೆ.

    ಇದನ್ನೂ ಓದಿ: ಮೈಸೂರು ದಸರಾಗೆ ಇಂದಿನಿಂದಲೇ ಸಿದ್ಧತೆ ಆರಂಭ: ಯಾವಾಗ ಏನೇನು? ಇಲ್ಲಿದೆ ಡಿಟೇಲ್ಸ್​

    “ಇಂದು ಯಾವುದೇ ಪಿಎಚ್​ಡಿ, ಮಾಸ್ಟರ್ಸ್​ ಡಿಗ್ರಿ ಮೌಲ್ಯ ಹೊಂದಿಲ್ಲ. ನೀವು ನೋಡುತ್ತಿದ್ದೀರಾ, ಅಧಿಕಾರದಲ್ಲಿರುವ ಮುಲ್ಲಾಗಳು ಮತ್ತು ತಾಲಿಬಾನಿಗಳು ಯಾವುದೇ ಪಿಎಚ್​ಡಿ, ಎಂಎ ಅಥವಾ ಹೈಸ್ಕೂಲ್​ ಡಿಗ್ರಿಯನ್ನೂ ಹೊಂದಿಲ್ಲ. ಆದರೆ ಅವರು ಎಲ್ಲರಿಗಿಂತ ಮಹಾನ್​ ವ್ಯಕ್ತಿಗಳಾಗಿದ್ದಾರೆ” ಎಂದು ನೂರುಲ್ಲಾ ಮುನೀರ್​ ಅಫ್ಘನ್​ ಭಾಷೆಯಲ್ಲಿ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ಈ ವಿಡಿಯೋವನ್ನು ಸೈಯೆದ್​ ಸುಲೈಮಾನ್​ ಅಶ್ನಾ ಎಂಬುವರು ಅನುವಾದದೊಂದಿಗೆ ಟ್ವಿಟರ್​ನಲ್ಲಿ ಶೇರ್ ಮಾಡಿದ್ದು, ನೆಟ್ಟಿಗರು ಹಲವು ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ವಿವಿಧ ಮೀಮ್​ಗಳೂ ಹರಿದಾಡಿವೆ. ಫಾತಿಮಾ ಜಹ್ರಾ ಎಂಬುವರು, “ಅವರು ಎಫ್​ಬಿಐನ ಮೋಸ್ಟ್​ ವಾಂಟೆಡ್​ ಲಿಸ್ಟ್​ನಲ್ಲಿದ್ದರು ಎನ್ನುವುದನ್ನು ಹೇಳಲು ಮರೆಯಬೇಡಿ. ಈಗ ಅವರು ಒಂದು ದೇಶವನ್ನು ನಡೆಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್)

    ಮಹಿಳೆಯರಿಗೂ ತೆರೆಯಲಿವೆ ಎನ್​ಡಿಎ ಬಾಗಿಲು: ಸುಪ್ರೀಂ ಕೋರ್ಟ್​ನಲ್ಲಿ ಸರ್ಕಾರ

    ಕ್ಯಾಮ್ಸ್ ಶಶಿಕುಮಾರ್ ಹತ್ಯೆಗೆ ಸುಪಾರಿ: ಕಾಡಿನಲ್ಲಿ ಅಡಗಿಕುಳಿತಿದ್ದ ಆರೋಪಿ ಆರ್​​​ಟಿಐ ರವಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts