More

    VIDEO: ಅಪಾಯದಲ್ಲಿದೆ ಮಧ್ಯ ಚೀನಾ!

    ಬೀಜಿಂಗ್​: ಮಧ್ಯ ಚೀನಾದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಅನೇಕ ಪ್ರದೇಶಗಳು ಮುಳುಗಡೆಯಾಗಿವೆ. ಜನ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದು, ಭಾರಿ ಪ್ರಮಾಣದ ನೀರು ಎಲ್ಲೆಡೆ ತುಂಬಿಕೊಂಡ ಕಾರಣ ಚೀನಾ ಸರ್ಕಾರ ನದಿಯೊಂದರ ಅಣೆಕಟ್ಟೆಯ ಫ್ಲಡ್​ಗೇಟನ್ನು ಭಾನುವಾರ ಸ್ಫೋಟಿಸಿದೆ. ಆ ಮೂಲಕ ಪ್ರವಾಹದ ನೀರು ಹೊರ ಹರಿಯುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.

    ಸರ್ಕಾರಿ ಸ್ವಾಮ್ಯದ ಸಿಸಿಟಿವಿ ವರದಿ ಪ್ರಕಾರ, ಅನ್ಹುಯಿ ಪ್ರಾಂತ್ಯದ ಚುಹೆ ನದಿಯ ಅಣೆಕಟ್ಟೆಯನ್ನೇ ಈ ರೀತಿ ಸ್ಫೋಟಿಸಿರುವಂಥದ್ದು. ಭಾನುವಾರ ನಸುಕಿನಲ್ಲಿ ಈ ಕಾರ್ಯಾಚರಣೆ ನಡೆದಿತ್ತು. ಅಲ್ಲಿ ನದಿ ನೀರಿನ ಮಟ್ಟ ಸಾಮಾನ್ಯ ಪ್ರವಾಹ ಮಟ್ಟಕ್ಕಿಂತ ಎರಡು ಅಡಿ ಎತ್ತರದಲ್ಲಿ ಹರಿಯಲಾರಂಭಿಸಿದ ಬೆನ್ನಲ್ಲೇ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ.

    ಇದನ್ನೂ ಓದಿ: ‘ನಿನ್ನೇ ಮದುವೆ ಆಗ್ತೇನೆ ಚಿನ್ನಾ ಅದಕ್ಕೂ ಮೊದ್ಲು ಮನೆ ಬೇಡ್ವಾ.. ಸ್ವಲ್ಪ ಹಣ ಅಕೌಂಟ್​ಗೆ ಹಾಕು.!’

    ಯಾಂಗ್ಟ್​ಝೆ ನದಿ ಸೇರಿದಂತೆ ಮಧ್ಯ ಚೀನಾದ ಹಲವು ನದಿಗಳು ಪ್ರವಾಹ ಮಟ್ಟ ಮೀರಿ ಹರಿಯುತ್ತಿವೆ. ಈ ಭಾಗಗಳಲ್ಲಿ ಪ್ರವಾಹ ಸಾಮಾನ್ಯವಾದರೂ ಈ ಸಲ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ನೀರು ಹರಿಯುತ್ತಿದ್ದು ಅಪಾಯ ಪರಿಸ್ಥಿತಿ ತಲೆದೋರಿದೆ. ಅಣೆಕಟ್ಟೆಯ ಫ್ಲಡ್​​ಗೇಟ್​ ಅನ್ನುಈ ಹಿಂದೆ 1998ರಲ್ಲಿ ಸ್ಫೋಟಿಸಲಾಗಿತ್ತು. ಆ ಸಂದರ್ಭದಲ್ಲಿ ಪ್ರವಾಹಕ್ಕೆ 2,000ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು. 30 ಲಕ್ಷಕ್ಕೂ ಹೆಚ್ಚು ಜನ ಮನೆ, ಆಸ್ತಿಪಾಸ್ತಿ ಕಳೆದುಕೊಂಡಿದ್ದರು.

    ಇದನ್ನೂ ಓದಿ: ಕೆಲಸ ಕೊಡಿಸ್ತೇವೆ ಅಂದ್ರು, ನಾಲ್ಕಾರು ಉದ್ಯೋಗಾಕಾಂಕ್ಷಿಗಳಿಂದ 3 ಲಕ್ಷ ರೂಪಾಯಿ ಎಗರಿಸಿದ್ರು!

    ಕಳೇದ ವಾರ ಯಾಂಗ್ಟ್​ಝೆ ನದಿಯ ಮೂರು ಫ್ಲಡ್​ಗೇಟ್​ಗಳನ್ನು ತೆರೆದು ಬಿಡಲಾಗಿತ್ತು. ಅಲ್ಲಿ ಅಣೆಕಟ್ಟೆಯಲ್ಲಿ ನಿಗದಿತ ಪ್ರವಾಹ ಮಟ್ಟಕ್ಕಿಂತ 15 ಮೀಟರ್ ಎತ್ತರಕ್ಕೆ ಏರಿತ್ತು. ಮಂಗಳವಾರ ಇನ್ನಷ್ಟು ನೀರು ಈ ಅಣೆಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ.

    ಇದನ್ನೂ ಓದಿ: VIDEO: ವಿರಳ ಹಳದಿ ಬಣ್ಣದ ಆಮೆ ಪತ್ತೆ

    ಇದೇ ವೇಳೆ ಚೀನಾದ ಅತಿದೊಡ್ಡ ಫ್ರೆಶ್ ವಾಟರ್ ಲೇಕ್​ ಆಗಿರುವ ಪೊಯಾಂಗ್ ಲೇಕ್​ನಲ್ಲಿ 188 ಮೀಟರ್ ನೀರು ತುಂಬಿದ ಬಳಿಕ ಅದರ ವ್ಯಾಪ್ತಿ ಹೆಚ್ಚಾಗಿದ್ದು, ಸುತ್ತಮುತ್ತಲಿನ 15 ಗ್ರಾಮಗಳು ಜಲಾವೃತವಾಗಿವೆ. ಅದೇ ರೀತಿ ಜಿಯಾಂಗ್​ಕ್ಸಿ ಪ್ರಾಂತ್ಯದ ಕೃಷಿ ಜಮೀನು ಕೂಡ ಮುಳುಗಿವೆ. ಈ ಪ್ರದೇಶಗಳಿಂದ 14,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಸದ್ಯದ ಮಟ್ಟಿಗೆ 150ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ. ಅಲ್ಲಲ್ಲಿ ಭೂಕುಸಿತಗಳೂ ಸಂಭವಿಸಿದೆ.

    ಇದನ್ನೂ ಓದಿ: ಗಡಿಯಲ್ಲಿ ಗುಂಡು ಹಾರಿಸೋಕೆ ನೇಪಾಳ ಪೊಲೀಸರೂ ಶುರುಮಾಡಿದ್ರು!: ಭಾರತೀಯನಿಗೆ ಗಾಯ

    ಒಟ್ಟಾರೆ ಪ್ರವಾಹ ಸ್ಥಳದಿಂದ 18 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಇದುವರೆಗಿನ ಅಂದಾಜು ಪ್ರಕಾರ 700 ಕೋಟಿ ಡಾಲರ್ ನಷ್ಟ ಲೆಕ್ಕ ಹಾಕಲಾಗಿದೆ ಎಂದು ತುರ್ತುಪರಿಸ್ಥಿತಿ ನಿರ್ವಹಣಾ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)

    ಕರೊನಾ ವಿರುದ್ಧ ವಾರ್ಡ್ ‘ವಾರ್’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts