More

    VIDEO| ‘ಈಗ ಎಲ್ಲಾ ಜೀರೋ ಆಗಿಬಿಟ್ಟಿದೆ’ – ಕಣ್ಣೀರು ಹಾಕಿದ ಅಫ್ಘಾನಿಸ್ತಾನದ ಮಾಜಿ ಸಂಸದ

    ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಶಸ್ತ್ರಸಜ್ಜಿತರಾಗಿ ದೇಶವನ್ನು ಆಕ್ರಮಿಸಿಕೊಂಡ ನಂತರ ತಮ್ಮ ಜೀವಜೀವನಗಳ ಭಯದಿಂದಾಗಿ ಹಲವರು ದೇಶ ತೊರೆದಿದ್ದಾರೆ. ಇವರಲ್ಲಿ ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದ ಭಾರತೀಯರೂ ಇದ್ದಾರೆ.

    ಇಂದು ಬೆಳಿಗ್ಗೆ ಅಫ್ಘಾನಿಸ್ತಾನದ ಕಾಬುಲ್​ನಿಂದ ದೆಹಲಿಗೆ ಬಂದಿಳಿದ ಐಎಎಫ್​ನ ವಿಮಾನದಲ್ಲಿ 107 ಭಾರತೀಯರು ಸೇರಿದಂತೆ ಒಟ್ಟು 168 ಜನರು, ತಮ್ಮದೆಲ್ಲವನ್ನೂ ತೊರೆದು ಆಶ್ರಯಕ್ಕಾಗಿ ಭಾರತ ತಲುಪಿದ್ದಾರೆ. ಈ ಪ್ರಯಾಣಿಕರಲ್ಲಿ ಅಫ್ಘಾನಿಸ್ತಾನದ ಸಂಸತ್​ ಸದಸ್ಯರಾಗಿದ್ದ ನರೇಂದರ್​ ಸಿಂಗ್​ ಖಾಲ್ಸಾ ಕೂಡ ಒಬ್ಬರು.

    ಸುದ್ದಿಗಾರರೊಂದಿಗೆ ಮಾತನಾಡಿದ ಖಾಲ್ಸ, ತಾಲಿಬಾನಿನ ಹಿಡಿತದಲ್ಲಿರುವ ಅಫ್ಘಾನಿಸ್ತಾನದಿಂದ ಹೊರಬರಲು ಸಹಾಯ ಮಾಡಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳಿದರು. ಅಲ್ಲಿನ ಪರಿಸ್ಥಿತಿಯ ಬಗ್ಗೆ ಕೇಳಿದಾಗ, ಕಣ್ಣೀರು ಹಾಕಿದ ಅವರು, “ನನಗೆ ಅಳು ಬರುವಂತಾಗಿದೆ… ಕಳೆದ 20 ವರ್ಷಗಳಲ್ಲಿ ನಿರ್ಮಿಸಿದ್ದ ಸರ್ಕಾರ ಎಲ್ಲವೂ ಮುಗಿದುಹೋದ ಕತೆಯಾಗಿದೆ. ಈಗ ಜೀರೋ ಆಗಿಬಿಟ್ಟಿದೆ” ಎಂದು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)

    ಇವರು ತಾಲಿಬಾನ್​ ಬಗ್ಗೆ ಪೋಸ್ಟ್​ ಮಾಡಿ, ಪೊಲೀಸರ ಅತಿಥಿಯಾದರು!

    ಭಾರತದ ದೋಣಿಗಳ ಮೇಲೆ ಕಲ್ಲು ತೂರಿದ ಶ್ರೀಲಂಕಾ ನೌಕಾಪಡೆ ಸಿಬ್ಬಂದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts