ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕುರಿತು ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದ ರೆಬೆಲ್ ನಾಯಕರು ನಿರಾಳರಾಗಿದ್ದು, ಇದು ಬಾಳಠಾಕ್ರೆ ಅವರ ಹಿಂದುತ್ವದ ಗೆಲುವಾಗಿದೆ ಎಂದು ಬಂಡಾಯ ನಾಯಕ ಏಕನಾಥ್ ಶಿಂಧೆ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಕುರಿತು ಟ್ವೀಟ್ ಮಾಡಿರುವ ಏಕನಾಥ್ ಶಿಂಧೆ, ಇದು ಹಿಂದುತ್ವ ಸಾಮ್ರಾಟ ಬಾಳಸಾಹೇಬ್ ಠಾಕ್ರೆ ಅವರ ಹಿಂದೂತ್ವ ಮತ್ತು ಧರ್ಮವೀರ್ ಆನಂದ್ ದಿಘೆ ಸಾಹೇಬ್ ಅವರ ಚಿಂತನೆಗೆ ಸಂದ ಗೆಲುವು ಎಂದಿದ್ದಾರೆ.
ಅನರ್ಹತೆ ನೋಟಿಸ್‌ಗೆ ಉತ್ತರಿಸಲು 16 ಅತೃಪ್ತ ಶಾಸಕರಿಗೆ ಉಪಸಭಾಪತಿ ನೀಡಿದ ಸಮಯವನ್ನು ಜುಲೈ 11 ರವರೆಗೆ ಸುಪ್ರೀಂಕೋರ್ಟ್ ವಿಸ್ತರಿಸಿದೆ. (ಏಜೆನ್ಸೀಸ್)
ರೈಲ್ವೇ ಇಲಾಖೆಯಲ್ಲಿ 4 ವರ್ಷದಲ್ಲಿ 92,000 ಹುದ್ದೆ ರದ್ದಾದರೂ 2.98ಲಕ್ಷ ಹುದ್ದೆಗಳು ಖಾಲಿ! ರೈಲ್ವೆ ಇಲಾಖೆ ಮಾಹಿತಿ