More

    ರೈಲ್ವೇ ಇಲಾಖೆಯಲ್ಲಿ 4 ವರ್ಷದಲ್ಲಿ 92,000 ಹುದ್ದೆ ರದ್ದಾದರೂ 2.98ಲಕ್ಷ ಹುದ್ದೆಗಳು ಖಾಲಿ! ರೈಲ್ವೆ ಇಲಾಖೆ ಮಾಹಿತಿ

    ನವದೆಹಲಿ: ಕಳೆದ ನಾಲ್ಕು ವಷರ್ಗಳಲ್ಲಿ ದೇಶದ ಅತಿ ದೊಡ್ಡ ಉದ್ಯೋಗದಾತ ಸಂಸ್ಥೆ ರೈಲ್ವೆ ಕಳೆದ 4 ವರ್ಷಗಳಲ್ಲಿ 92, 000 ಕ್ಕೂ ಹೆಚ್ಚು ಉದ್ಯೋಗಗಳನ್ನು ರದ್ದುಗೊಳಿಸಿದೆ.

    ಕೆಲಸದ ಹೊರೆಯ ಆಧಾರದಲ್ಲಿ ಕೆಲವು ಹುದ್ದೆಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಸಮರ್ಥನೆ ನೀಡಿದ್ದು, 2019-20 ನೇ ಆರ್ಥಿಕ ವರ್ಷದಲ್ಲಿ ಎಲ್ಲಾ 17 ಝೋನ್ ಗಳಲ್ಲಿಯೂ ಅತಿ ಹೆಚ್ಚು ಅಂದರೆ 31,275 ಹುದ್ದೆಗಳನ್ನು ತೆಗೆದುಹಾಕಲಾಗಿದೆ ಎಂದು ಮಾಹಿತಿ ನೀಡಿದೆ.

    2018-19, 2021-22 ನೇ ಸಾಲಿನಲ್ಲಿ ವಿವಿಧ ಶ್ರೇಣಿ, ವಿಭಾಗಗಳಲ್ಲಿ ರೈಲ್ವೆ ಇಲಾಖೆ 92,000 ಹುದ್ದೆಗಳನ್ನು ರದ್ದುಗೊಳಿಸಿದ್ದರೂ ರೈಲ್ವೆಯಲ್ಲಿ ಇನ್ನೂ 2.98 ಲಕ್ಷ ಖಾಲಿ ಹುದ್ದೆಗಳಿವೆ ಎಂಬುದು ಗಮನಾರ್ಹ ಸಂಗತಿ.
    ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕಳೆದ ಸಂಸತ್ ಅಧಿವೇಶನದಲ್ಲಿ ರೈಲ್ವೆ ಇಲಾಖೆ 92,000 ಹುದ್ದೆಗಳನ್ನು ರದ್ದುಗೊಳಿಸಿದ್ದನ್ನು ಒಪ್ಪಿಕೊಂಡಿದ್ದರು. 2018-19 ರಲ್ಲಿ ಈಶಾನ್ಯ ವಲಯದಿಂದ 3,296 ಹುದ್ದೆಗಳು, ಉತ್ತರ ರೈಲ್ವೆಯಲ್ಲಿ 3,221, ಪೂರ್ವ ಕೇಂದ್ರದಲ್ಲಿ 1,735 ಹುದ್ದೆಗಳು, 1,514 ಹುದ್ದೆಗಳು ಪಶ್ಚಿಮ ರೈಲ್ವೆಯಲ್ಲಿ ರದ್ದುಗೊಂಡಿದ್ದವು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts