More

    ನ್ಯಾಯಕ್ಕೆ ಸಿಕ್ಕ ಗೆಲುವು: ಡಿಕೆಶಿ

    ಬೆಂಗಳೂರು:
    ಅನ್ಯಾಯ ಆದಾಗ ನ್ಯಾಯ ಕೊಡಿಸಲು ನ್ಯಾಯಾಂಗದ ಶಕ್ತಿ ಪೀಠ ಇದೆ ಎಂಬುದಕ್ಕೆ ಸುಪ್ರೀಂ ಕೋರ್ಟಿನ ಇಂದಿನ ತೀರ್ಪು ಸಾಕ್ಷಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
    ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಎಷ್ಟು ಬೇಗ ಅನರ್ಹವಾಗಿತ್ತೋ ಅಷ್ಟೇ ಬೇಗ ಆ ಆದೇಶ ತೆರವಾಗಬೇಕು ಎಂದು ಆಗ್ರಹಿಸಿದರು.
    ರಾಹುಲ್ ಗಾಂಧಿ ಅವರ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ. ದೇಶ ಹಾಗೂ ಜನರ ಹಿತಕ್ಕಾಗಿ ರಾಹುಲ್ ಗಾಂಧಿ ಅವರು ಎತ್ತುತ್ತಿರುವ ಧ್ವನಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ತೀರ್ಪು ಮಹತ್ವದ್ದಾಗಿದೆ ಎಂದರು.
    ನ್ಯಾಯ ನೀಡುವ ಪೀಠದಿಂದ ಅನ್ಯಾಯ ಆಗುವುದಿಲ್ಲ ಎಂಬ ಮಾತನ್ನು ನಾನು ಹಿಂದೆಯೇ ಹೇಳಿದ್ದೆ. ಈ ದೇಶದ ಅತ್ಯುನ್ನತ ನ್ಯಾಯಾಲಯದ ತೀರ್ಮಾನ ಪ್ರಜಾಪ್ರಭುತ್ವದಲ್ಲಿ ದ್ವೇಷದ ರಾಜಕಾರಣಕ್ಕೆ ಜಾಗವಿಲ್ಲ ಎಂಬ ಸಂದೇಶ ಸಾರಿದೆ ಎಂದು ತಿಳಿಸಿದರು.
    ಇದನ್ನು ಚುನಾವಣೆ ವಿಷಯವಾಗಿ ಬಳಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ಈಗಾಗಲೇ ಜನ ಇದನ್ನು ಅರ್ಥ ಮಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ 7 ಲಕ್ಷ ಮತಗಳ ಅಂತರದಲ್ಲಿ ಗೆದ್ದಂತಹವರ ಸದಸ್ಯತ್ವವನ್ನು ಯಾವ ರೀತಿ ಕುತಂತ್ರದ ಮೂಲಕ ಅನರ್ಹ ಮಾಡಿಸಿದ್ದಾರೆ ಎಂದು ಜನರು ಗಮನಿಸಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts