More

    SAM BAHADDUR REVIEW ; ವೀರ ಸೇನಾನಿಯ ಜೀವನ ದರ್ಶನ

    ಚಿತ್ರ: ಸ್ಯಾಮ್ ಬಹಾದ್ದೂರ್
    ನಿರ್ದೇಶನ : ಮೇಘನಾ ಗುಲ್ಜಾರ್
    ನಿರ್ಮಾಣ: ರೋನಿ ಸ್ಕ್ರೂವಾಲಾ
    ತಾರಾಗಣ: ವಿಕ್ಕಿ ಕೌಶಲ್, ಸಾನ್ಯಾ ಮಲ್ಹೋತ್ರಾ, ಫಾತಿಮಾ ಸನಾ ಶೇಖ್, ನೀರಜ್ ಕಾಬಿ, ಮೊಹಮ್ಮದ್ ಜೀಶಾನ್, ಗೋವಿಂದ್ ನಾಮದೇವ್ ಮುಂತಾದವರು

    ಫೀಲ್ಡ್ ಮಾರ್ಷಲ್ ಸ್ಯಾಮ್ ಹೊರ್ಮುಸ್‌ಜೀ ಫ್ರಾಮ್‌ಜೀ ಜಮ್‌ಶೆಡ್‌ಜೀ ಮಾಣೆಕ್‌ಶಾ ಅರ್ಥಾತ್ ಸ್ಯಾಮ್ ಬಹಾದ್ದೂರ್. ಭಾರತದ ವೀರ ಸೇನಾನಿ. ಭಾರತೀಯ ಸೇನೆಯ ನೆಚ್ಚಿನ ಸೈನಿಕ. ಇಂತಹ ದಿಗ್ಗಜರ ಬಗ್ಗೆ ಸಿನಿಮಾ ಮಾಡುವುದು ಸಾಮಾನ್ಯದ ಮಾತಲ್ಲ. ಐತಿಹಾಸಕ ಘಟನೆಗಳು, ಸೇನೆಯ ಸಿದ್ದಾಂತ, ವೈಯಕ್ತಿಕ ವಿಷಯಗಳು ಯಾವುದಕ್ಕೂ ಧಕ್ಕೆ ತರದಂತೆ ಪ್ರಸ್ತುತಪಡಿಸಬೇಕು. 1930ರಿಂದ 1980ರ ದಶಕದವರೆಗೆ ಸುಮಾರು ಐದು ದಶಕಗಳ ಘಟನಾವಳಿಗಳನ್ನು ಆ ಕಾಲಕ್ಕೆ ತಕ್ಕಂತ ಮೇಕಿಂಗ್ ಮೂಲಕ ನಿರ್ದೇಶಕಿ ಮೇಘನಾ ಗುಲ್ಜಾರ್ ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ.

    ಇದನ್ನೂ ಓದಿ : BBKS10: ಡ್ರೋಣ್ ಪ್ರತಾಪ್​ ಫೇಕ್​? ಮನೆಯಿಂದ ಹೊರಬಂದ ನೀತು ಹೇಳಿದ್ದಿಷ್ಟು!

    SAM BAHADDUR REVIEW ; ವೀರ ಸೇನಾನಿಯ ಜೀವನ ದರ್ಶನ

    ಸ್ಯಾಮ್ ಬಹಾದ್ದೂರ್ ಅವರ ಜೀವನದ ಹಲವು ಪ್ರಮುಖ ಘಟ್ಟಗಳನ್ನು ಚಿತ್ರದಲ್ಲಿ ತೆರೆದಿಡಲಾಗಿದೆ. ಜೆಂಟಲ್‌ಮ್ಯಾನ್ ಕೆಡಟ್‌ನ ದಿನಗಳು, ಅಲ್ಲಿ ಕದ್ದು ಪಾರ್ಟಿಗೆ ಹೋಗಿ 15 ದಿನಗಳ ಶಿಕ್ಷೆಗೆ ಗುರಿಯಾಗುವುದು, ಎರಡನೇ ವಿಶ್ವಯುದ್ಧದಲ್ಲಿ ಭಾಗಿಯಾಗಿದ್ದು, ಬರ್ಮಾ ಮೇಲೆ ಜಪಾನ್ ದಾಳೆ ನಡೆಸಿದಾಗ ಅವರ ಮೇಲೆ ದಾಳಿ ನಡೆದು 9 ಗುಂಡುಗಳು ದೇಹ ಹೊಕ್ಕಿದರೂ ನಗುತ್ತಾ ಸಾವನ್ನು ಗೆದ್ದ ರೀತಿ, ಸ್ವಾತಂತ್ರ್ಯನಂತರ ಜಮ್ಮು ಕಾಶ್ಮೀರ ಭಾರತಕ್ಕೆ ಸೇರುವಲ್ಲಿ ಅವರು ವಹಿಸಿದ ಪಾತ್ರ, ಬ್ರಿಟಿಷರ ಪರ ನಿಲುವು ಎಂದು ರಾಷ್ಟ್ರದ್ರೋಹ ಆರೋಪದಲ್ಲಿ ನಡೆಯುವ ವಿಚಾರಣೆ, ಅದರಲ್ಲಿ ಗೆಲುವು ಪಡೆಯುವ ರೀತಿ, 1966ರಲ್ಲಿ ಈಶಾನ್ಯ ರಾಜ್ಯ ಮಿಜೋರಾಮ್‌ನಲ್ಲಿ ಉಗ್ರರನ್ನು ಮಟ್ಟ ಹಾಕಿದ್ದು, ಸ್ಯಾಮ್ ಬಹಾದ್ದೂರ್ ಹೆಸರು ಬರಲು ಕಾರಣ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಜತೆಗಿನ ಗೆಳೆತನ, ಬಾಂಗ್ಲಾದೇಶ ವಿಮೋಚನೆಯಲ್ಲಿ ವಹಿಸಿದ ಪಾತ್ರ… ಹೀಗೆ ಅವರ ಜೀವನದಲ್ಲಿ ನಡೆದ ಅಷ್ಟೂ ಘಟನೆಗಳನ್ನು ಎರಡೂವರೆ ತಾಸಿನ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಆ ಭರದಲ್ಲಿ ಕೆಲವೆಡೆ ಕೆಲ ಘಟನೆಗಳಿಗೆ ಪ್ರಾಮುಖ್ಯ ನೀಡದಿರುವುದು, ಕೆಲವೆಡೆ ವಿನಾಕಾರಣ ಹೆಚ್ಚು ಸಮಯ ನೀಡಿರುವುದು ಚಿತ್ರಕ್ಕೆ ಮೈನಸ್ ಆಗಿದೆ.

    ಇದನ್ನೂ ಓದಿ : ‘ಫೈಟರ್‌’ಗೆ 50ರ ಸಂಭ್ರಮ; ಸದ್ಯದಲ್ಲೇ ಬಿಗ್‌ಸ್ಟಾರ್ ಜತೆ ಹೊಸ ಸಿನಿಮಾ

    SAM BAHADDUR REVIEW ; ವೀರ ಸೇನಾನಿಯ ಜೀವನ ದರ್ಶನ

    ಸ್ಯಾಮ್ ಬಹಾದ್ದೂರ್ ಪಾತ್ರದಲ್ಲಿ ವಿಕ್ಕಿ ಕೌಶಲ್ ಜೀವಿಸಿದ್ದಾರೆ. ಅಷ್ಟು ಕರಾರುವಕ್ಕಾಗಿ ಬಾಡಿ ಲಾಂಗ್ವೇಜ್, ನಡೆ, ನುಡಿ ಎಲ್ಲವನ್ನೂ ನಿಭಾಯಿಸಿದ್ದಾರೆ. ಅವರ ಪತ್ನಿ ಸಿಲ್ಲೂ ಪಾತ್ರದಲ್ಲಿ ಸಾನ್ಯಾ ಮತ್ತು ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಫಾತಿಮಾ ಸನಾ, ಯಾಹ್ಯಾ ಖಾನ್ ಆಗಿ ಮೊಹಮ್ಮದ್ ಜೀಶಾನ್ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶಂಕರ್ – ಎಹ್ಸಾನ್ – ಲಾಯ್ ಸಂಗೀತದಲ್ಲಿ ಭಾರತೀಯ ಸೇನೆಯ ವಿವಿಧ ರೆಜಿಮೆಂಟ್‌ಗಳ ಜಯೋಷಗಳಿರುವ ‘ಬಡ್‌ತೇ ಚಲೋ’ ಹಾಡು ಬೆಳ್ಳಿ ತೆರೆಯ ಮೇಲೆ ನೋಡುವುದೇ ಹಬ್ಬ. ಜತೆಗೆ ‘ಬಂದಾ ಹೈ ಏ’ ಹಾಡು ಕೂಡ ಸೆಳೆಯುತ್ತದೆ. ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್‌ಶಾ ಬಗ್ಗೆ ಕುತೂಹಲವಿರುವವರು, ಭಾರತೀಯ ಸೇನೆಯ ಇತಿಹಾಸ ಮತ್ತು ಭಾರತೀಯ ಸೇನೆ ಯುದ್ಧಗಳಲ್ಲಿ ಸೃಷ್ಟಿಸಿರುವ ಇತಿಹಾಸ ತಿಳಿಯಲು ‘ಸ್ಯಾಮ್ ಬಹಾದ್ದೂರ್’ ನೋಡಬಹುದು.

    SAM BAHADDUR REVIEW ; ವೀರ ಸೇನಾನಿಯ ಜೀವನ ದರ್ಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts