More

    ಒಂದು ಹಾಡನ್ನು ಬರೆಯಲು 25 ಲಕ್ಷ ರೂ. ಸಂಭಾವನೆ ಪಡೆದ ಚಿತ್ರ ಸಾಹಿತಿ!

    ಕನ್ನಡ ಚಿತ್ರರಂಗದಲ್ಲಿ ಗೀತರಚನೆಕಾರರಿಗೆ ಒಂದು ಹಾಡು ಬರೆಯಲು ಅತಿ ಹೆಚ್ಚು ಸಂಭಾವನೆ ಎಂದರೆ 1 ಲಕ್ಷ ರೂ.ನಿಂದ 1.5 ಲಕ್ಷ ರೂ. ಹಾಗೇ ಬಾಲಿವುಡ್‌ನಲ್ಲಿ ಒಂದು ಹಾಡು ಬರೆಯಲು ಸಂಭಾವನೆ 5 ಲಕ್ಷ ರೂ.ನಿಂದ 8 ಲಕ್ಷ ರೂ.ವರೆಗೂ ಇದೆ. ಆದರೆ, ಬಾಲಿವುಡ್‌ನ ಹಿರಿಯ ಚಿತ್ರ ಸಾಹಿತಿ ಜಾವೆದ್ ಅಖ್ತರ್ ‘ಡಂಕಿ’ ಚಿತ್ರದ ‘ನಿಕ್‌ಲೇ ಥೇ ಕಭೀ ಹಮ್ ಘರ್ ಸೇ’ ಹಾಡಿಗೆ ಬರೋಬ್ಬರಿ 25 ಲಕ್ಷ ರೂ. ಸಂಭಾವನೆ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

    ಇದನ್ನೂ ಓದಿ : ಹೇಗಿದೆ ಮ್ಯಾಟ್ನಿಯ ಮಾಸ್ ಸಾಂಗ್? ಹೊಸ ವರ್ಷಕ್ಕೆ ಬಿಡುಗಡೆಯಾಯ್ತು ಹೊಸ ಪಾರ್ಟಿ ಸಾಂಗ್​

    ಒಂದು ಹಾಡನ್ನು ಬರೆಯಲು 25 ಲಕ್ಷ ರೂ. ಸಂಭಾವನೆ ಪಡೆದ ಚಿತ್ರ ಸಾಹಿತಿ!

    30ಕ್ಕೂ ಅಧಿಕ ಚಿತ್ರಗಳಿಗೆ ಚಿತ್ರಕಥೆ ಹಾಗೂ 1000ಕ್ಕೂ ಅಧಿಕ ಹಾಡುಗಳನ್ನು ರಚಿಸಿರುವ ಜಾವೆದ್ ಅವರಿಗೆ ಐದು ರಾಷ್ಟ್ರಪ್ರಶಸ್ತಿ, ಆರು ಫಿಲಂಫೇರ್​, ಪದ್ಮಶ್ರೀ, ಪದ್ಮವಿಭೂಷಣ ಪಡೆದಿರುವ ಖ್ಯಾತಿ ಸಲ್ಲುತ್ತದೆ. ಇಂತಹ ಜಾವೆದ್ ಇತ್ತೀಚೆಗಷ್ಟೆ, ‘ಚಿತ್ರದ ಎಲ್ಲ ಹಾಡುಗಳನ್ನೂ ಬರೆಯಲು ಅವಕಾಶ ನೀಡಿದರೆ ಮಾತ್ರ ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ನಿರ್ದೇಶಕ ರಾಜಕುಮಾರ್ ಹಿರಾನಿ, ಒಂದೇ ಒಂದು ಹಾಡು ಬರೆದುಕೊಡಿ ಎಂದು ದುಂಬಾಲು ಬಿದ್ದರು. ನನಗೆ ಹಾಗೆ ಮಾಡಲು ಇಷ್ಟವಿರಲಿಲ್ಲವಾದ್ದರಿಂದ, ಕೆಲವು ಕಂಡೀಷನ್‌ಗಳನ್ನು ಹಾಕಿದ್ದೆ. ಐದು ಹಿಟ್ ಸಿನಿಮಾಗಳನ್ನು ನೀಡಿರುವ ಹಿರಾನಿ, ಎಲ್ಲದಕ್ಕೂ ಒಪ್ಪಿಕೊಂಡರು’ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ : ಜಸ್ಟ್ ಪಾಸ್ ಆದವರಿಗೆ ಪ್ರಿನ್ಸಿಪಲ್​ ಆದರು ರಂಗಾಯಣ ರಘು!

    ಒಂದು ಹಾಡನ್ನು ಬರೆಯಲು 25 ಲಕ್ಷ ರೂ. ಸಂಭಾವನೆ ಪಡೆದ ಚಿತ್ರ ಸಾಹಿತಿ!

    ಒಂದೇ ಹಾಡಿಗೆ ಸಿನಿಮಾದಲ್ಲಿ ಕ್ರೆಡಿಟ್ ನೀಡಬೇಕು ಹಾಗೂ 25 ಲಕ್ಷ ರೂ. ಸಂಭಾವನೆ ನೀಡಬೇಕು ಎಂಬುದೇ ಜಾವೆದ್ ಅವರ ಕಂಡೀಷನ್ ಆಗಿತ್ತು ಎಂಬುದು ನಂತರ ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts