More

    ಸ್ವಾತಂತ್ರ್ಯಕ್ಕಾಗಿ ಮೂರು ಹಂತದ ಹೋರಾಟ: ಸಾಹಿತಿ ಡಾ.ಎಸ್.ಶ್ರೀನಿವಾಸಶೆಟ್ಟಿ ವಿವರಣೆ

    ಮಂಡ್ಯ: ರಾಷ್ಟ್ರೀಯ ಕಾಂಗ್ರೆಸ್‌ನಿಂದ ಮಾತ್ರ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ಲಭಿಸಲಿಲ್ಲ. ಮೂರು ವಿಧದ ಹೋರಾಟಗಳಿಂದ ಸಾಧ್ಯವಾಯಿತು ಎನ್ನುವ ಇತಿಹಾಸವನ್ನು ಮರೆಮಾಚಲಾಗಿದೆ ಎಂದು ಸಾಹಿತಿ ಡಾ.ಎಸ್.ಶ್ರೀನಿವಾಸಶೆಟ್ಟಿ ತಿಳಿಸಿದರು.
    ನಗರಸಭೆ ವಾಣಿಜ್ಯ ಸಂಕೀರ್ಣದಲ್ಲಿ ಬಿಜೆಪಿ, ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಭಾರತದ ಸ್ವಾತಂತ್ರ್ಯ ಸಂಗ್ರಾದಲ್ಲಿ ಮೂರು ರೀತಿಯ ಹೋರಾಟ ನಡೆದಿವೆ ಎಂಬುದನ್ನು ಯಾರೂ ದಾಖಲಿಸಲಿಲ್ಲ. ಬ್ರಿಟಿಷರ ಇತಿಹಾಸ ಪುಟಗಳಲ್ಲಿ ಇವು ದಾಖಲಾಗಿದೆ. ಇದನ್ನು ಸ್ವತಃ ಸಾವರ್ಕರ್ ಅವರು ಇಂಗ್ಲೆಂಡಿಗೆ ತೆರಳಿ ಅಲ್ಲಿ ಅಧ್ಯಯನ ಕೈಗೊಂಡು ಬರೆದ ಕೃತಿಯಲ್ಲಿ ದಾಖಲಿಸಿರುವುದ್ದಾರೆ ಎಂದು ಉದಾಹರಿಸಿದರು.
    ಭೂತ ಕಾಲದಲ್ಲಿ ನಡೆದ ತಪ್ಪುಗಳನ್ನು ಮರು ಘಟಿಸದ ಹಾಗೆ ನೋಡಿಕೊಳ್ಳುವ ಕೆಲಸ ಮಾಡಬೇಕಿದೆ. ಭಾರತವನ್ನು ಆಳುತ್ತಿದ್ದ ರಾಜ ಮಹಾರಾಜರ ನಡುವೆ ಒಳ ಜಗಳ ಹುಟ್ಟಿಕೊಂಡಿದ್ದವು. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ. ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ಇದರ ಲಾಭವನ್ನು ಪಡೆದು ಒಬ್ಬ ರಾಜನನ್ನು ಮತ್ತೊಬ್ಬನ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡಿದರು. ಇದರಿಂದ ಲಾಭ ಮಾಡಿಕೊಂಡ ಬ್ರಿಟಿಷರು ಒಂದೊಂದೇ ರಾಜ್ಯಗಳನ್ನು ತಮ್ಮ ಕೈವಶ ಮಾಡಿಕೊಂಡರು ಎಂದು ವಿವರಿಸಿದರು.
    ಪತ್ರಕರ್ತ ಡಿ.ಎನ್.ರ್ಶರೀಪಾದು ಮಾತನಾಡಿದರು. ಪ್ರಕೋಷ್ಠ ಜಿಲ್ಲಾಧ್ಯಕ್ಷ ಎಸ್.ಜಗನ್ನಾಥಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ಆದಿನಾರಾಯಣ, ಉದ್ಯಮಿಗಳಾದ ಪ್ರೇಮಾ ಹಂದೆ, ಚಂದ್ರಶೇಖರ್, ಜಿ.ಪಿ.ಸಂಧ್ಯಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts